

ಐಪಿಎಲ್ನಲ್ಲಿ ಇಂದು ನಡೆಯುತ್ತಿರುವ 15ನೇ ಪಂದ್ಯದಲ್ಲಿ ಫಾಫ್ ಡುಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೆಎಲ್ ರಾಹುಲ್ ನೇತೃತ್ವದ ಲಖನೌ ಸೂಪರ್ ಜೇಂಟ್ಸ್ (RCB vs LSG) ಮುಖಾಮುಖಿಯಾಗುತ್ತಿವೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswami Stadium) ಈ ಪಂದ್ಯ ನಡೆಯುತ್ತಿದ್ದು ಹೈವೋಲ್ಟೇಜ್ ಮ್ಯಾಚ್ ಆಗುವುದು ಖಚಿತ. ರಾಯಲ್ ಚಾಲೆಂಜರ್ಸ್ ತಂಡ ಆಡಿದ ಎರಡು ಪಂದ್ಯಗಳ ಪೈಕಿ ಮೊದಲ ಪಂದ್ಯದಲ್ಲಿ ಗೆದ್ದರೆ ದ್ವಿತೀಯ ಮ್ಯಾಚ್ನಲ್ಲಿ ಸೋಲುಂಡಿತ್ತು. ಇತ್ತ ಲಖನೌ ಸೂಪರ್ ಜೇಂಟ್ಸ್ ಆಡಿದ ಮೂರು ಪಂದ್ಯಗಳ ಪೈಕಿ ಎರಡರಲ್ಲಿ ಗೆದ್ದು ಕೇವಲ ಒಂದು ಪಂದ್ಯದಲ್ಲಷ್ಟೆ ಸೋಲು ಕಂಡಿದೆ.
Views: 0