RCB vs MI, IPL 2024: ಟಾಸ್ ಗೆದ್ದ ಮುಂಬೈ ಇಂಡಿಯನ್ಸ್, ಐಪಿಎಲ್​ಗೆ ಪದಾರ್ಪಣೆ ಮಾಡಿದ ವಿಲ್​ ಜ್ಯಾಕ್ಸ್​ ; ಆರ್​​ಸಿಬಿ ಬಲಿಷ್ಠ ಪ್ಲೇಯಿಂಗ್​ 11

RCB vs MI, IPL 2024: ಎರಡೂ ತಂಡಗಳು ತಲಾ 2 ಪಾಯಿಂಟ್‌ಗಳೊಂದಿಗೆ ಅಂಕಪಟ್ಟಿಯಲ್ಲಿ ಕ್ರಮವಾಗಿ 8 ಮತ್ತು 9ನೇ ಸ್ಥಾನದಲ್ಲಿದೆ. ಆದರೆ ಆರ್​​ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿ ಮಾತ್ರ ಏಕಾಂಗಿಯಾಗಿ ಪ್ರತಿ ಪಂದ್ಯದಲ್ಲಿಯೂ ಹೋರಾಟ ನಡೆಸುತ್ತಿದ್ದಾರೆ.

ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB vs MI) ತಂಡಗಳು ಮುಖಾಮುಖಿ ಆಗಿದೆ. ಐಪಿಎಲ್ 2024ರ (IPL 2024) 17ನೇ ಸೀಸನ್​ ನ 25ನೇ ಪಂದ್ಯವು ಉಭಯ ತಂಡಗಳಿಗೆ ಅತ್ಯಂತ ಮಹತ್ವದ್ದಾಗಿದ್ದು, ಎರಡೂ ತಂಡಗಳು ತಲಾ 1 ಒಂದು ಪಂದ್ಯ ಮಾತ್ರ ಗೆದ್ದಿದೆ. ಹೀಗಾಗಿ ಪ್ಲೇಆಫ್​ ಹಾದಿಗಾಗಿ ಈ ಪಂದ್ಯ ಇಬ್ಬರಿಗೂ ಗೆಲ್ಲಲೇಬೇಕಾದ ಅನಿವಾರ್ಯ ಉಂಟಾಗಿದೆ. ಮುಂಬೈ ತಂಡಕ್ಕೆ ಹಾರ್ದಿಕ್​ ಪಾಂಡ್ಯ ನಾಯಕನಾದರೆ, ಆರ್​​ಸಿಬಿ ತಂಡಕ್ಕೆ ಫಾಫ್​ ಡುಪ್ಲೇಸಿಸ್​​ ನಾಯಕರಾಗಿದ್ದಾರೆ. ಈಗಾಗಲೇ ಟಾಸ್ ಆಗಿದ್ದು, ಟಾಸ್ ಗೆದ್ದ ನಾಯಕ ಹಾರ್ದಿಕ್​ ಮೊದಲು ಬೌಲಿಂಗ್​ ಆಯ್ಕೆ ಮಾಡಿದ್ದು, ಆರ್​​ಸಿಬಿ ಬ್ಯಾಟಿಂಗ್​ ಮಾಡಲಿದ್ದು, ವಿಲ್​ ಜ್ಯಾಕ್ಸ್​​ ಕೊನೆಗೂ ಐಪಿಎಲ್​ಗೆ ಪದಾರ್ಪಣೆ ಮಾಡಿದ್ದಾರೆ.

ಆರ್​​ಸಿಬಿ – ಮುಂಬೈ ಪ್ಲೇಯಿಂಗ್​ 11:

RCB ಪ್ಲೇಯಿಂಗ್​ 11:  ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (c), ವಿಲ್ ಜಾಕ್ಸ್, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್ (WK), ಮಹಿಪಾಲ್ ಲೊಮ್ರೋರ್, ರೀಸ್ ಟೋಪ್ಲಿ, ವಿಜಯ್‌ಕುಮಾರ್ ವೈಶಾಕ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್.

MI ಪ್ಲೇಯಿಂಗ್​ 11: ರೋಹಿತ್ ಶರ್ಮಾ, ಇಶಾನ್ ಕಿಶನ್ (wk), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (c), ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಮೊಹಮ್ಮದ್ ನಬಿ, ಶ್ರೇಯಸ್ ಗೋಪಾಲ್, ಜಸ್ಪ್ರೀತ್ ಬುಮ್ರಾ, ಜೆರಾಲ್ಡ್ ಕೋಟ್ಜಿ, ಆಕಾಶ್ ಮಧ್ವಲ್.

ಉಭಯ ತಂಡಗಳಿಗೆ ಮಾಡು ಇಲ್ಲವೇ ಮಡಿ:

ಎರಡೂ ತಂಡಗಳು ತಲಾ 2 ಪಾಯಿಂಟ್‌ಗಳೊಂದಿಗೆ ಅಂಕಪಟ್ಟಿಯಲ್ಲಿ ಕ್ರಮವಾಗಿ 8 ಮತ್ತು 9ನೇ ಸ್ಥಾನದಲ್ಲಿದೆ. ಆದರೆ ಆರ್​​ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿ ಮಾತ್ರ ಏಕಾಂಗಿಯಾಗಿ ಪ್ರತಿ ಪಂದ್ಯದಲ್ಲಿಯೂ ಹೋರಾಟ ನಡೆಸುತ್ತಿದ್ದಾರೆ. ಆದರೆ ಅವರಿಗೆ ಯಾರೂ ಸಹ ಉತ್ತಮ ಸಾಥ್​​ ನೀಡುತ್ತಿಲ್ಲ. ಅಲ್ಲದೇ ಇತ್ತ ಮುಂಬೈ ಇಂಡಿಯನ್ಸ್​ ತಂಡವೂ ಸಹ ಬೌಲಿಂಗ್​ ಮತ್ತು ಬ್ಯಾಟಿಂಗ್​ ಎರಡರಲ್ಲಿಯೂ ಸಾಧಾರಣ ಪ್ರದರ್ಶನ ನೀಡುತ್ತಿದೆ. ಹೀಗಾಗಿ ಎರಡೂ ತಂಡದಲ್ಲಿ ಆಟಗಾರರು ಕಂಬ್ಯಾಕ್​​ ಮಾಡದಿದ್ದರೆ ಗೆಲುವು ಕಷ್ಟಕರವಾಗಲಿದೆ.

ಪಿಚ್ ರಿಪೋರ್ಟ್ – ಹವಾಮಾನ ವರದಿ:

ಮುಂಬೈನ ವಾಂಖೆಡೆ ಸ್ಟೇಡಿಯಂ ಬ್ಯಾಟರ್‌ಗಳ ಪಾಲಿಗೆ ಸ್ವರ್ಗ ಎನ್ನಬಹುದು. ಏಕೆಮದರೆ ಪಿಚ್ ಕಡಿಮೆ ಅಂತರದ ಬೌಂಡರಿ ಲೈನ್​ ಹೊಂದಿದೆ. ಪಿಚ್ ಬ್ಯಾಟಿಂಗ್​ಗೆ ಸಹಾಯಕವಾಗಿರುವುದರಿಂದ ಇಂದೂ ಸಹ ಬಿಗ್​ ಸ್ಕೋರ್​ ಮ್ಯಾಚ್ ಬರುವ ಸಾಧ್ಯತೆ ಹೆಚ್ಚಳವಾಗಿದೆ. ಇನ್ನು ,ಟಾಸ್ ಗೆದ್ದ ನಾಯಕ ಮೊದಲು ಬೌಲಿಂಗ್​ ಆಯ್ಕೆ ಮಾಡಬಹುದು. ಏಕೆಂದರೆ ಚೇಸಿಂಗ್​ ಟೀಮ್​ ಹೆಚ್ಚು ಇಲ್ಲಿ ಗೆದ್ದಿದೆ.

ಸದ್ಯದ ಹವಾಮಾನ ಇಲಾಖೆಯ ವರದಿ ಪ್ರಕಾರ, ಮುಂಬೈ ಮತ್ತು ಆರ್​​ಸಿಬಿ ನಡುವಿನ ಪಂದ್ಯಕ್ಕೆ ಮಳೆ ಬೀಳುವ ಸಾಧ್ಯತೆಯಿಲ್ಲ ಎಂದು ತಿಳಿದುಬಂದಿದೆ. ಸಂಪೂರ್ಣ ದಿನ ಬಿಸಿಲಿನ ವಾತಾವರಣ ಇರಲಿದ್ದು, ತಾಪಮಾನವು 33 ಡಿಗ್ರಿ ಸೆಲ್ಸಿಯಸ್‌ ವರೆಗೆ ಇರಲಿದೆ. ಆರ್ದ್ರತೆಯ ಮಟ್ಟವು 58 ಪ್ರತಿಶತದಷ್ಟು ಇರಲಿದ್ದು ಗಾಳಿಯ ವೇಗವು ಗಂಟೆಗೆ 19 ಕಿ.ಮೀ ಅಷ್ಟಿರಲಿದೆ ಎಂದು ವರದಿಯಾಗಿದೆ.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *