
2025ರ ಐಪಿಎಲ್ ಫೈನಲ್ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ರನ್ಗಳಿಂದ ಬಗ್ಗುಬಡಿದ ಆರ್ಸಿಬಿ 18ನೇ ಆವೃತ್ತಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಆರ್ಸಿಬಿ ನೀಡಿದ್ದ 191 ರನ್ಗಳ ಗುರಿಯನ್ನ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ರನ್ಗಳಿಂದ ಮಣಿಸುವ ಮೂಲಕ ಆರ್ಸಿಬಿ ಚೊಚ್ಚಲ ಐಪಿಎಲ್ ಕಿರೀಟ ಮುಡಿಗೇರಿಸಿಕೊಂಡಿದೆ.
2025ರ ಐಪಿಎಲ್ ಫೈನಲ್ನಲ್ಲಿ (IPL 2025) ಪಂಜಾಬ್ ಕಿಂಗ್ಸ್ (RCB vs PBKS) ತಂಡವನ್ನು 6 ರನ್ಗಳಿಂದ ಬಗ್ಗುಬಡಿದ ಆರ್ಸಿಬಿ 18ನೇ ಆವೃತ್ತಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. 191 ರನ್ಗಳ ಗುರಿ ನೀಡಿದ್ದ ಆರ್ಸಿಬಿ ಪಂಜಾಬ್ ಕಿಂಗ್ಸ್ ತಂಡವನ್ನು 184 ರನ್ಗಳಿಗೆ ನಿಯಂತ್ರಿಸುವ ಮೂಲಕ 6 ರನ್ಗಲ ರೋಚಕ ಜಯ ಸಾಧಿಸಿ ಚೊಚ್ಚಲ ಟ್ರೋಫಿ ತನ್ನದಾಗಿಸಿಕೊಂಡಿತು. ಈ ಮೂಲಕ 18 ವರ್ಷಗಳಿಂದ ಕಟ್ಟಿಕೊಂಡಿದ್ದ ಚೋಕರ್ಸ್ ಹಣೆಪಟ್ಟಿಯನ್ನು ಕಳಚಿತು. ನಿರ್ಣಾಯಕ ಪಂದ್ಯದಲ್ಲಿ ಕೃನಾಲ್ ಪಾಂಡ್ಯ ಹಾಗೂ ಭುವನೇಶ್ವರ್ ಕುಮಾರ್ ಅದ್ಭುತ ಬೌಲಿಂಗ್ ಮಾಡಿ ಆರ್ಸಿಬಿ ಕನಸು ನನಸು ಮಾಡಲು ನೆರವಾದರು.
ಆರ್ಸಿಬಿ ನೀಡಿದ್ದ 191 ರನ್ಗಳ ಗುರಿಯನ್ನ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ಉತ್ತಮ ಆರಂಭ ಪಡೆದುಕೊಂಡಿತು. 5 ಓವರ್ಗಳಲ್ಲಿ 43 ರನ್ಗಳ ಜೊತೆಯಾಟ ನೀಡಿತು. ಈ ಹಂತದಲ್ಲಿ ಕಣಕ್ಕಿಳಿದ ಆರ್ಸಿಬಿ ಆಪತ್ಭಾಂದವ ಹ್ಯಾಜಲ್ವುಡ್ 19 ಎಸೆತಗಳಲ್ಲಿ 4 ಬೌಂಡರಿ ಸಹಿತ 24 ರನ್ಗಳಿಸಿದ್ದ ಪ್ರಿಯಾಂಶ್ ವಿಕೆಟ್ ಪಡೆದು ಮೊದಲ ಬ್ರೇಕ್ ನೀಡಿದರು. ಈ ವಿಕೆಟ್ ನಂತರ ಆರ್ಸಿಬಿ ಬೌಲರ್ಗಳು ಪಂಜಾಬ್ ತಂಡಕ್ಕೆ ಚೇತರಿಸಿಕೊಳ್ಳಲು ಅವಕಾಶವನ್ನೇ ನೀಡಲಿಲ್ಲ. ಪಂಜಾಬ್ ರನ್ ಗತಿಗೂ ಕಡಿವಾಣ ಬಿದ್ದಿತು.
2ನೇ ವಿಕೆಟ್ಗೆ ಪ್ರಭಸಿಮ್ರನ್ ಸಿಂಗ್ ಹಾಗೂ ಇಂಗ್ಲಿಸ್ 29 ರನ್ ಸೇರಿಸಿದರು. ಪವರ್ ಪ್ಲೇ ಮುಗಿದ ಬಳಿಕ ಬೌಲಿಂಗ್ ಇಳಿದಿದ್ದ ಕೃನಾಲ್ ಪಾಂಡ್ಯ 9ನೇ ಓವರ್ನಲ್ಲಿ 22 ಎಸೆತಗಳಲ್ಲಿ 26 ರನ್ಗಳಿಸಿದ್ದ ಪ್ರಭಸಿಮ್ರನ್ ಸಿಂಗ್ ವಿಕೆಟ್ ಪಡೆದು ಮತ್ತೊಂದು ಬ್ರೇಕ್ ನೀಡಿದರೆ. ನಂತರದ ಓವರ್ನಲ್ಲೇ ರೊಮಾರಿಯೋ ಶೆಫರ್ಡ್ ನಾಯಕ ಶ್ರೇಯಸ್ ಅಯ್ಯರ್(1) ವಿಕೆಟ್ ಪಡೆಯುವ ಮೂಲಕ ಪಂದ್ಯವನ್ನ ಆರ್ಸಿಬಿ ಕಡೆಗೆ ವಾಲುವಂತೆ ಮಾಡಿದರು.
ಅಯ್ಯರ್ ವಿಕೆಟ್ ಕಳೆದುಕೊಳ್ಳುತ್ತಿದ್ದಂತೆ ಪಂಜಾಬ್ ತಂಡದ ರನ್ಗತಿಗೆ ಕಡಿವಾಣ ಬಿದ್ದಿತು. ಸ್ಕೋರ್ ಬೋರ್ಡ್ ಒತ್ತಡಕ್ಕೆ ಸಿಲುಕಿದ ಜೋಸ್ ಇಂಗ್ಲಿಸ್ ದೊಡ್ಡ ಹೊಡೆತಕ್ಕೆ ಯತ್ನಿಸಿ ಪಾಂಡ್ಯಗೆ 2ನೇ ಬಲಿಯಾದರು. ಇಂಗ್ಲಿಸ್ ವಿಕೆಟ್ ಆರ್ಸಿಬಿ ಗೆಲುವು ಬಹಿತೇಕ ಖಚಿತ ಮಾಡಿತು. 5ನೇ ವಿಕೆಟ್ಗೆ ನೆಹಾಲ್ ವಧೇರಾ ಹಾಗೂ ಶಶಾಂಕ್ ಸಿಂಗ್ 25 ಎಸೆತಗಳಲ್ಲಿ 38 ರನ್ಗಳಿಸಿ ಆರ್ಸಿಬಿ ಬೌಲರ್ಗಳನ್ನ ಕೆಲವು ಸಮಯ ದಂಡಿಸಿದರು.
15ನೇ ಓವರ್ನಲ್ಲಿ ಶೆಫರ್ಡ್ ಬೌಲಿಂಗ್ನಲ್ಲಿ 13 ರನ್, 16ನೇ ಓವರ್ನಲ್ಲಿ ಹ್ಯಾಜಲ್ವುಡ್ ಬೌಲಿಂಗ್ನಲ್ಲಿ 17 ರನ್ ಸಿಡಿಸಿ ಡೇಂಜರಸ್ ಆಗಿದ್ದ ಈ ಜೋಡಿಯನ್ನ 17ನೇ ಓವರ್ಗಳಲ್ಲಿ ಬೌಲಿಂಗ್ಗೆ ಇಳಿದ ಭುವನೇಶ್ವರ್ ಕುಮಾರ್ ಒಂದೇ ಓವರ್ನಲ್ಲಿ 15 ರನ್ಗಳಿಸಿದ್ದ ವಧೇರಾ ಹಾಗೂ ಮೊದಲ ಎಸೆತದಲ್ಲೇ ಸಿಕ್ಸರ್ ಸಿಡಿಸಿದ್ದ ಮಾರ್ಕಸ್ ಸ್ಟೋಯಿನಿಸ್(6) ವಿಕೆಟ್ ಪಡೆದು ಗೆಲುವು ಖಚಿತಪಡಿಸಿದರು.
18 ಎಸೆತಗಳಲ್ಲಿ ಪಂಜಾಬ್ ಕಿಂಗ್ಸ್ 47 ರನ್ಗಳ ಅಗತ್ಯವಿತ್ತು. ಆದರೆ 18ನೇ ಓವರ್ಗಳಲ್ಲಿ ಯಶ್ ದಯಾಳ್ ಕೇವಲ 5 ರನ್ ನೀಡಿ ಒಮರ್ಝಾಯ್ ವಿಕೆಟ್ ಪಡೆದು ಮಿಂಚಿದರು. 19ನೇ ಓವರ್ನಲ್ಲಿ ಭುವನೇಶ್ವರ್ ಕುಮಾರ್ 13 ರನ್ ನೀಡಿದರು. ಕೊನೆಯ ಓವರ್ನಲ್ಲಿ ಪಂಜಾಬ್ ಗೆಲುವಿಗೆ 29 ರನ್ ಬೇಕಿತ್ತು. ಆ ಓವರ್ನಲ್ಲಿ ಶಶಾಂಕ್ ಸಿಂಗ್ 22 ರನ್ಗಳಿಸಿದರಾದರು ಗೆಲುವಿಗೆ ಅವರ ಆಟ ಸಾಕಗಲಿಲ್ಲ. ಒಟ್ಟಾರೆ ಶಶಾಂಕ್ ಸಿಂಗ್ 30 ಎಸೆತಗಳಲ್ಲಿ 3 ಬೌಂಡರಿ, 6 ಸಿಕ್ಸರ್ಗಳ ಸಹಿತ ಅಜೇಯ 61 ರನ್ಗಳಿಸಿದರು.
ಆರ್ಸಿಬಿ ಪರ ಅಮೋಘ ಬೌಲಿಂಗ್ ಮಾಡಿದ ಕೃನಾಲ್ ಪಾಂಡ್ಯ 4 ಓವರ್ಗಳಲ್ಲಿ ಕೇವಲ 17 ರನ್ ನೀಡಿ 2 ವಿಕೆಟ್ ಪಡೆದರೆ, ಭುವನೇಶ್ವರ್ ಕುಮಾರ್ 38ಕ್ಕೆ2, ಶೆಫರ್ಡ್ 30ಕ್ಕೆ1, ಯಶ್ ದಯಾಳ್ 18ಕ್ಕೆ1 ವಿಕೆಟ್ ಪಡೆದರು. ಇಡೀ ಟೂರ್ನಿಯಲ್ಲಿ ಅದ್ಭುತ ಬೌಲಿಂಗ್ ಮಾಡಿದ್ದ ಹ್ಯಾಜಲ್ವುಡ್ ಫೈನಲ್ ಪಂದ್ಯದಲ್ಲಿ 54 ರನ್ ಬಿಟ್ಟುಕೊಟ್ಟು ದುಬಾರಿಯಾದರು. ಆದರೂ ಆರಂಭದಲ್ಲಿ ಪ್ರಿಯಾಂಶ್ ವಿಕೆಟ್ ಪಡೆಯುವ ಮೂಲಕ ಬಿಗ್ ಬ್ರೇಕ್ ನೀಡಿದ್ದರು.
ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಆರ್ಸಿಬಿ ಸಂಘಟಿತ ಪ್ರದರ್ಶನ ತೋರಿತ್ತು. ವಿರಾಟ್ ಕೊಹ್ಲಿ 35 ಎಸೆತಗಳಲ್ಲಿ 43 ರನ್, ಮಯಾಂಕ್ ಅಗರ್ವಾಲ್ 24, ಫಿಲ್ ಸಾಲ್ಟ್ 16, ರಜತ್ ಪಾಟೀದಾರ್ 16 ಎಸೆತಗಳಲ್ಲಿ 26, ಲಿಯಾಮ್ ಲಿವಿಂಗ್ಸ್ಟೋನ್ 15 ಎಸೆತಗಳಲ್ಲಿ 25, ಜಿತೇಶ್ ಶರ್ಮಾ 10 ಎಸೆತಗಳಲ್ಲಿ 24 ರನ್, ರೊಮಾರಿಯೋ ಶೆಫರ್ಡ್ 9 ಎಸೆತಗಳಲ್ಲಿ 17 ರನ್ಗಳಿಸಿ ಸವಾಲಿನ ಗುರಿ ನೀಡದ್ದರು.
4ನೇ ಪ್ರಯತ್ನದಲ್ಲಿ ಗೆಲುವು
ಆರ್ಸಿಬಿ 18 ವರ್ಷಗಳಲ್ಲಿ 4ನೇ ಫೈನಲ್ ಪ್ರವೇಶಿಸಿದ್ದ ಆರ್ಸಿಬಿ ಕೊನೆಗೂ ಕೋಟ್ಯಾಂತರ ಅಭಿಮಾನಿಗಳ ಕನಸನ್ನ ನನಸು ಮಾಡಿತು. ಇದಕ್ಕೂ ಮುನ್ನ 2009 ರಲ್ಲಿ ಡೆಕ್ಕನ್ ಚಾರ್ಜಸ್ ವಿರುದ್ಧ, 2011ರಲ್ಲಿ ಸಿಎಸ್ಕೆ ವಿರುದ್ಧ ಹಾಗೂ 2016ರಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ದ ಫೈನಲ್ನಲ್ಲಿ ಸೋತು ನಿರಾಶೆ ಅನುಭವಿಸಿದ್ದರು.
News18 Kannada
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1