ಕಿಡ್ನಿ ಆರೋಗ್ಯಕ್ಕೆ ನೀರು ಮಾತ್ರ ಸಾಕೇ? ತಜ್ಞರ ಸಲಹೆಗಳನ್ನು ಓದಿ

ದೇಹದಲ್ಲಿನ ಕಲ್ಮಶವನ್ನು ಹೊರಹಾಕುವ ಕಿಡ್ನಿ ಸರಿಯಾಗಿ ಕಾರ್ಯನಿರ್ವಹಿಸಲು ಸೂಕ್ತ ಪ್ರಮಾಣದಲ್ಲಿ ನೀರಿನ ಸೇವನೆ ಅತ್ಯಗತ್ಯ. ಆದರೆ ಇದೊಂದೆ ಮಾರ್ಗವಲ್ಲ. ಸಮತೋಲಿತ ಆಹಾರ ಸೇವನೆ, ನಿಯಮಿತ ವ್ಯಾಯಾಮ, ಶಿಸ್ತುಬದ್ಧ ಜೀವನಶೈಲಿ ಕೂಡ ಬಹಳ ಮುಖ್ಯ ನೆನಪಿರಲಿ. 

ಮೂತ್ರಪಿಂಡ (ಕಿಡ್ನಿ) ನಮ್ಮ ದೇಹವನ್ನು ಸ್ವಚ್ಛವಾಗಿಡುವ ಮಹತ್ವದ ಕಾರ್ಯವನ್ನು ನಿರ್ವಹಿಸುವ ಅಂಗ . ಜೊತೆಗೆ ದೇಹದಲ್ಲಿ ನೀರು, ಉಪ್ಪು ಹಾಗೂ ರಕ್ತದೊತ್ತಡವನ್ನು ಸರಿದೂಗಿಸುವ ಜವಾಬ್ದಾರಿಯನ್ನು ನಿಭಾಯಿಸುತ್ತದೆ. ಹೀಗಾಗಿ ಕಿಡ್ನಿ ಆರೋಗ್ಯವಾಗಿರುವುದು ಬಹಳ ಮುಖ್ಯ. ಆದರೆ ಕಿಡ್ನಿ ವಿಚಾರದಲ್ಲಿ ಸಾಕಷ್ಟು ತಪ್ಪು ತಿಳುವಳಿಕೆಗಳು ಜನರಲ್ಲಿ ಇವೆ. ಅದರಲ್ಲೂ ಎಷ್ಟೋ ಜನ ನೀರು ಕುಡಿಯುತ್ತಿದ್ದರೆ ಸಾಕು ಕಿಡ್ನಿ ಆರೋಗ್ಯವಾಗಿರುತ್ತದೆ ಎಂಬ ನಂಬಿಕೆಯಲ್ಲಿದ್ದಾರೆ ಆದರೆ ನೀರಿನ ಜತೆ ಹಲವು ಅಂಶಗಳು ಅಗತ್ಯವಾಗಿರುತ್ತದೆ.

ದೇಹದಲ್ಲಿನ ಕಲ್ಮಶವನ್ನು ಹೊರಹಾಕುವ ಕಿಡ್ನಿ ಸರಿಯಾಗಿ ಕಾರ್ಯನಿರ್ವಹಿಸಲು ಸೂಕ್ತ ಪ್ರಮಾಣದಲ್ಲಿ ನೀರಿನ ಸೇವನೆ ಅತ್ಯಗತ್ಯ. ಆದರೆ ಇದೊಂದೆ ಮಾರ್ಗವಲ್ಲ. ಸಮತೋಲಿತ ಆಹಾರ ಸೇವನೆ, ನಿಯಮಿತ ವ್ಯಾಯಾಮ, ಶಿಸ್ತುಬದ್ಧ ಜೀವನಶೈಲಿ ಕೂಡ ಬಹಳ ಮುಖ್ಯ ನೆನಪಿರಲಿ. ಸೂಕ್ತ ಪ್ರಮಾಣದಲ್ಲಿ ನೀರು ಸೇವನೆ ಅಗತ್ಯವಾದರೂ ಅದಷ್ಟೇ ಸಾಲದು ಎಂಬುದನ್ನು ಅರಿತುಕೊಳ್ಳಬೇಕು.

ಬೊಜ್ಜು ಕಿಡ್ನಿ ವೈಫಲ್ಯಕ್ಕೆ ಕಾರಣವಾಗಬಹುದೇ?: ಬೊಜ್ಜು ಪ್ರಪಂಚದಾದ್ಯಂತ ಮನುಷ್ಯರನ್ನು ಕಾಡುತ್ತಿರುವ ಸಮಸ್ಯೆ . ಮುಂಬರುವ ದಿನಗಳಲ್ಲಿ ಇದು ಶೇ.40 ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಇದರ ಜತೆಗೆ ಬೊಜ್ಜು ದೀರ್ಘಕಾಲದ ಕಿಡ್ನಿ ಸಮಸ್ಯೆಗೆ ಕಾರಣವಾಗುವ ಸಾಧ್ಯತೆ ಅಧಿಕ. ಹೀಗಾಗಿ ಒಬೆಸಿಟಿ (ಬೊಜ್ಜು) ನಿಂದ ಬಳಲುತ್ತಿರುವವರು ಮೂತ್ರಪಿಂಡದ ಆರೋಗ್ಯ ವಿಚಾರದಲ್ಲಿ ಸಾಕಷ್ಟು ಎಚ್ಚರಿಕೆ ವಹಿಸಲೇಬೇಕು. ಬೊಜ್ಜಿಗೆ ಸಂಬಂಧಿಸಿದ ಗ್ಲೊಮೆರುಲೊಪತಿ ಸಮಸ್ಯೆ 10 ಪಟ್ಟು ಹೆಚ್ಚಾಗಿದೆ. ಇದರ ಜತೆಗೆ ಅಧಿಕ ತೂಕ ಹೆಚ್ಚಳದಿಂದ ರಕ್ತದೊತ್ತಡ ಹೆಚ್ಚಳ ಸಮಸ್ಯೆ, ಟೈಪ್‌ 2 ಡಯಾಬಿಟಿಸ್‌ ಸಮಸ್ಯೆ ಕಾಡುವ ಸಾಧ್ಯತೆ ಹೆಚ್ಚಳವಾಗುತ್ತದೆ. ಇದು ಕಿಡ್ನಿ ವೈಫಲ್ಯಕ್ಕೆ ಕಾರಣವಾಗಬಲ್ಲದು.

ಜೀವನಶೈಲಿ ಮತ್ತು ಕಿಡ್ನಿ ಸ್ಟೋನ್‌: ಮೂತ್ರಪಿಂಡದಲ್ಲಿ ಕಲ್ಲು ರೂಪುಗೊಳ್ಳಲು ಜೀವನಶೈಲಿ ನೇರ ಕಾರಣವಾಗುತ್ತದೆ.
●ನಿರ್ಜಲೀಕರಣ, ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾದಲ್ಲಿ ಮೂತ್ರದಲ್ಲಿ ಮಿನರಲ್ಸ್‌ಗಳ ಪ್ರಮಾಣ ಹೆಚ್ಚಾಗಿ ಕಲ್ಲು ರೂಪುಗೊಳ್ಳಲು ಕಾರಣವಾಗುತ್ತದೆ. ಹೀಗಾಗಿ 2-3 ಲೀಟರ್‌ ನೀರು ಸೇವನೆ ಅತ್ಯಗತ್ಯ.

● ಅಧಿಕ ಉಪ್ಪು ಸೇವನೆ ಮತ್ತು ಪ್ರೋಟೀನ್‌ ಡೈಯಟ್‌ ಕೂಡ ಸಮಸ್ಯೆಗೆ ಕಾರಣ. ಸೋಡಿಯಮ್‌ ಸೇವನೆಯಲ್ಲಿ ಹೆಚ್ಚಳ ಹಾಗೂ ಎನಿಮಲ್‌ ಪ್ರೋಟೀನ್‌ ಅಧಿಕವಾಗುವುದರಿಂದ ಮೂತ್ರದಲ್ಲಿ ಕ್ಯಾಲ್ಶಿಯಮ್‌ ಪ್ರಮಾಣ ಅಧಿಕವಾಗಿ ಕಲ್ಲು ರಚನೆಗೆ ಕಾರಣವಾಗುತ್ತದೆ. ಹೀಗಾಗಿ ಸಸ್ಯಾಹಾರದ ಮೂಲಕ ಪ್ರೋಟೀನ್‌ ಸೇವನೆ ಅಭ್ಯಾಸ ಮಾಡಿಕೊಳ್ಳಿ. ರೆಡ್‌ ಮೀಟ್‌ ಸೇವನೆ ನಿಯಂತ್ರಣದಲ್ಲಿರಲಿ.

● ದೈಹಿಕ ವ್ಯಾಯಾಮ ಇಲ್ಲದಿರುವುದು ಬೊಜ್ಜಿಗೆ ಕಾರಣವಾಗುತ್ತದೆ

● ಅಧಿಕ ಸಕ್ಕರೆ ಪ್ರಮಾಣದ ಜ್ಯೂಸ್‌ ಹಾಗೂ ಪ್ರೊಸೆಸ್ಡ್‌ (ಸಂಸ್ಕರಿತ) ಆಹಾರ ಸೇವನೆಯಿಂದ ಯುರಿಕ್‌ ಆಸಿಡ್‌ ಪ್ರಮಾಣ ಹೆಚ್ಚುತ್ತದೆ. ಇದರಿಂದ ಮೂತ್ರಪಿಂಡದಲ್ಲಿ ಕಲ್ಲು ರೂಪುಗೊಳ್ಳಲು ಹಾಗೂ ಮೂತ್ರಪಿಂಡ ಹಾನಿಗೂ ಕಾರಣವಾಗುತ್ತದೆ.

● ಆಕ್ಸಿಲೇಟ್‌ ಭರಿತ ಆಹಾರಗಳಾದ ಪಾಲಕ್‌, ಬೀಟ್‌ರೂಟ್‌ ಹಾಗೂ ನಟ್‌ (ಬೀಜಗಳ) ಸೇವನೆ ಕಡಿಮೆ ಮಾಡಿ. ಇವು ದೇಹದಲ್ಲಿ ಅತಿಯಾದರೆ ಕಿಡ್ನಿ ಸ್ಟೋನ್‌ ಸಮಸ್ಯೆ ಗೆ ಗುರಿಯಾಗಿಸಬಹುದು.

● ಹಸಿರು ತರಕಾರಿ , ಹಣ್ಣುಗಳ ಸೇವನೆ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಬಹಳ ಮುಖ್ಯ. ಜತೆಗೆ ಕಿಡ್ನಿ ಆರೋಗ್ಯಕ್ಕೂ ಅತ್ಯಗತ್ಯ.

ಜನರಲ್ಲಿರುವ ಕೆಲ ತಪ್ಪು ತಿಳುವಳಿಕೆಗಳು
● ಗಂಡಸರಲ್ಲಿ ಮಾತ್ರ ಕಿಡ್ನಿ ಸ್ಟೋನ್‌?- ಇದು ತಪ್ಪು ತಿಳುವಳಿಕೆ ಗಂಡಸರಲ್ಲಿ ಕಿಡ್ನಿ ಸ್ಟೋನ್‌ ಪ್ರಮಾಣ ಅಧಿಕವಾಗಿ ಪತ್ತೆಯಾದರೂ ಮಹಿಳೆಯರಲ್ಲೂ ಈ ಸಮಸ್ಯೆ ಕಂಡುಬರುತ್ತದೆ. ಅದರಲ್ಲೂ ಮೆನುಪಾಸ್‌ ನಂತರ ಮಹಿಳೆಯರು ಕಿಡ್ನಿ ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದಿರಬೇಕು.

● ಹಾಲು ಮತ್ತು ಹಾಲಿನ ಉತ್ಪನ್ನದಿಂದ ಕಿಡ್ನಿ ಸಮಸ್ಯೆ? – ಇದು ಸುಳ್ಳು . ಕ್ಯಾಲ್ಶಿಯಮ್‌ ಭರಿತ ಹಾಲಿನ ಉತ್ಪನ್ನಗಳು ಆಕ್ಸಲೇಟ್‌ಗಳ ಜತೆ ಬೆರೆತು ಕಿಡ್ನಿಯನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.

● ಒಮ್ಮೆ ಕಿಡ್ನಿ ಸ್ಟೋನ್‌ ಆದರೆ ಅದು ಮರುಕಳಿಸುವುದು? – ಇದು ಸುಳ್ಳು .ಕಿಡ್ನಿ ಸ್ಟೋನ್‌ ಬಳಿಕ ಉತ್ತಮ ಆಹಾರ ಶೈಲಿ, ದೇಹವನ್ನು ಹೈಡ್ರೇಟ್‌ ಇಡುವುದು, ನಿಯಮಿತ ಆರೋಗ್ಯ ತಪಾಸಣೆ ಮೂಲಕ ಸ್ಟೋನ್‌ ಮರುಕಳಿಸದಂತೆ ತಡೆಯಬಹುದು.,

Source : https://kannada.asianetnews.com/health-life/is-water-alone-enough-for-kidney-health-read-expert-advice-srtpzj

Leave a Reply

Your email address will not be published. Required fields are marked *