ಅತಿ ಹೆಚ್ಚು ವೇತನ ನೀಡುವ ಭಾರತದ ನಗರ ಯಾವುದು ಗೊತ್ತಾ…? ವರದಿ ಓದಿ

Business News: ಭಾರತದಲ್ಲಿ ಸರಾಸರಿ ವಾರ್ಷಿಕ ವೇತನ ಸುಮಾರು 18.91 ಲಕ್ಷ ರೂ. ಆಗಿದೆ. ಇದೇ ವೇಳೆ ಪುರುಷರು ಮಹಿಳೆಯರಿಗಿಂತ ಹೆಚ್ಚು ಸಂಬಳ ಪಡೆಯುತ್ತಿದ್ದಾರೆ.  

Business News: ಜುಲೈ 2023 ರ ಹೊತ್ತಿಗೆ, ಸರಾಸರಿ ವೇತನ ಸಮೀಕ್ಷೆಯ ಅಂಕಿಅಂಶಗಳು ಪ್ರಕಟಗೊಂಡಿವೆ. ಭಾರತದಲ್ಲಿ ಸರಾಸರಿ ವಾರ್ಷಿಕ ವೇತನವು ರೂ 18,91,085 ಆಗಿದ್ದರೆ, ಅತ್ಯಂತ ಸಾಮಾನ್ಯ ವಾರ್ಷಿಕ ಗಳಿಕೆಯು ರೂ 5,76,851 ಆಗಿದೆ. ಇದೇ ವೇಳೆ, ಪುರುಷರು ಮತ್ತು ಮಹಿಳೆಯರ ನಡುವಿನ ಸಂಬಳದ ವ್ಯತ್ಯಾಸವೂ ಹೆಚ್ಚಾಗಿದೆ ಎಂದು ಸಮೀಕ್ಷೆ ಹೇಳಿದೆ. ಪುರುಷರು ಸರಾಸರಿ 19 ಲಕ್ಷ 53 ಸಾವಿರ ರೂ. ಪಡೆದರೆ, ಮಹಿಳೆಯರು ಸರಾಸರಿ 15 ಲಕ್ಷ 16 ಸಾವಿರ ರೂ.ಗಳಿಕೆ ಮಾಡುತ್ತಾರೆ.

ಸರಾಸರಿ ಸಂಬಳ ಸಮೀಕ್ಷೆಯು ವಿಶ್ವಾದ್ಯಂತದ 138 ದೇಶಗಳಲ್ಲಿ ಸಾವಿರಾರು ವ್ಯಕ್ತಿಗಳ ವೇತನ ದತ್ತಾಂಶಗಳನ್ನು ಪ್ರಸ್ತುತಪಡಿಸುತ್ತದೆ ಮತ್ತು ವಿಶ್ಲೇಷಿಸುತ್ತದೆ. ಭಾರತಕ್ಕೆ ನೀಡಿರುವ ಮಾಹಿತಿಯು 11,570 ಜನರ ವೇತನವನ್ನು ಆಧರಿಸಿದೆ. ವಿವಿಧ ವೃತ್ತಿ ಕ್ಷೇತ್ರಗಳಲ್ಲಿ ನಿರ್ವಹಣೆ ಮತ್ತು ವ್ಯವಹಾರದಿಂದ ಗರಿಷ್ಠ ಸರಾಸರಿ ಆದಾಯ 29 ಲಕ್ಷ 50 ಸಾವಿರದ 185 ರೂ. ಆಗಿದೆ ಇದಾದ ನಂತರ ಜನರು ಪ್ರೊಫೆಶ್ನಲ್ ಆಗಿ ಆದಾಯ ಗಳಿಸಿದ್ದು, ವಾರ್ಷಿಕ ಸರಾಸರಿ ಆದಾಯ 27 ಲಕ್ಷ 2 ಸಾವಿರದ 962 ರೂ.ಗಳಾಗಿದೆ.

20 ವರ್ಷ ಮೇಲ್ಪಟ್ಟ ಅನುಭವ ಹೊಂದಿದವರಿಗೆ ಎಷ್ಟು ವೇತನ ಸಿಗುತ್ತಿದೆ
ಸಮೀಕ್ಷೆಯ ಅಂಕಿಅಂಶಗಳ ಪ್ರಕಾರ, 20 ವರ್ಷಕ್ಕಿಂತ ಹೆಚ್ಚು ಅನುಭವ ಹೊಂದಿರುವವರಿಗೆ 38 ಲಕ್ಷದ 15 ಸಾವಿರದ 462 ರೂ. ವೇತನ ಸಿಗುತ್ತದೆ. ಮತ್ತೊಂದೆಡೆ, 16 ರಿಂದ 20 ವರ್ಷಗಳ ಅನುಭವ ಇರುವವರು 36 ಲಕ್ಷ 50 ಸಾವಿರಕ್ಕೂ ಹೆಚ್ಚು ವೇತನ ಪಡೆಯುತ್ತಿದ್ದಾರೆ. ಮತ್ತೊಂದೆಡೆ, ಡಾಕ್ಟರೇಟ್ ಪದವಿ ಹೊಂದಿರುವ ಜನರು 27 ಲಕ್ಷ 52 ಸಾವಿರಕ್ಕಿಂತ ಹೆಚ್ಚು ಸರಾಸರಿ ವೇತನವನ್ನು ಗಳಿಸುತ್ತಿದ್ದಾರೆ, ಆದರೆ ಹೈಸ್ಕೂಲ್ ವ್ಯಾಸಂಗಕ್ಕಿಂತ ಕಡಿಮೆ ಅರ್ಹತೆ ಹೊಂದಿದವರು ಜನರು ವಾರ್ಷಿಕವಾಗಿ 11 ಲಕ್ಷ 12 ಸಾವಿರಕ್ಕಿಂತ ಹೆಚ್ಚು ಗಳಿಸುತ್ತಿದ್ದಾರೆ ಎನ್ನಲಾಗಿದೆ.

ಯಾವ ನಗರವು ಹೆಚ್ಚಿನ ವೇತನ ಪಾವಟಿಸುತ್ತಿದೆ
ಸಮೀಕ್ಷಾ ವರದಿಯ ಪ್ರಕಾರ ನಗರಗಳಲ್ಲಿ ವಾರ್ಷಿಕ ಸರಾಸರಿ ವೇತನದಲ್ಲಿ ಅತಿ ಹೆಚ್ಚು ಅಂಕಿ-ಅಂಶಗಳನ್ನು ಹೊಂದಿರುವ ನಗರವಾಗಿ ಸೊಲ್ಲಾಪುರ ಹೊರಹೊಮ್ಮಿದ್ದು, ಅದು ವರ್ಷಕ್ಕೆ 28 ಲಕ್ಷ 10 ಸಾವಿರದ 092 ರೂ. ವೇತನ ನೀಡುತ್ತಿದೆ.  ಈ ನಗರದಲ್ಲಿ ಕೇವಲ ಇಬ್ಬರನ್ನು ಮಾತ್ರ ಸಮೀಕ್ಷೆ ಮಾಡಲಾಗಿದೆ. ಇನ್ನೊಂದೆಡೆ ಮುಂಬೈನಲ್ಲಿ 1,748 ಜನರ ಸಮೀಕ್ಷೆ ನಡೆಸಲಾಗಿದ್ದು, ಇಲ್ಲಿನ ಜನರ ಸರಾಸರಿ ವೇತನ 21 ಲಕ್ಷ 17 ಸಾವಿರಕ್ಕೂ ಹೆಚ್ಚು ಇದೇ ಎನ್ನಲಾಗಿದೆ. ಇದಲ್ಲದೇ ಬೆಂಗಳೂರಿನ ಜನರ ಸರಾಸರಿ ವಾರ್ಷಿಕ ವೇತನ 21.01 ಲಕ್ಷಕ್ಕೂ ಹೆಚ್ಚು ಆಗಿದೆ. ಬೆಂಗಳೂರಿನ ಸುಮಾರು 2,800 ಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ.

ದೆಹಲಿ ಮತ್ತು ಇತರ ನಗರಗಳಲ್ಲಿನ ಜನರ ವೇತನ ಹೇಗಿದೆ
ದೇಶದ ರಾಜಧಾನಿ ನವದೆಹಲಿಯಲ್ಲಿ ಜನರ ಸರಾಸರಿ ವೇತನ 20 ಲಕ್ಷ 43 ಸಾವಿರದ 703 ರೂ.ಗಳಾಗಿದೆ. ಅಲ್ಲಿ 1,890 ಜನರ ಸಮೀಕ್ಷೆ ನಡೆಸಲಾಗಿದೆ. ಭುವನೇಶ್ವರದಲ್ಲಿ ಸರಾಸರಿ ವೇತನ 19 ಲಕ್ಷ 94 ಸಾವಿರದ 259 ರೂ. ಗಳಾಗಿದೆ.  ರಾಜಸ್ಥಾನದ ಜೋಧಪುರದ ಸರಾಸರಿ ವಾರ್ಷಿಕ ವೇತನ ರೂ.19,44,814. ಗಲಾಗಿದ್ದಾರೆ, ಪುಣೆ ಮತ್ತು ಶ್ರೀನಗರದಲ್ಲಿ ಸರಾಸರಿ ವಾರ್ಷಿಕ ವೇತನ 18 ಲಕ್ಷ 95 ಸಾವಿರದ 370 ರೂ.ಗಳಾಗಿದೆ.  ಹಾಗೂ ಹೈದರಾಬಾದ್ ನಲ್ಲಿ ವಾರ್ಷಿಕ ವೇತನ 18 ಲಕ್ಷ 62 ಸಾವಿರದ 407 ರೂ.ಗಳಾಗಿದೆ.

ರಾಜ್ಯಗಳಲ್ಲಿ ಸರಾಸರಿ ವೇತನ ಹೇಗಿದೆ
ಭಾರತದ ಉತ್ತರ ಪ್ರದೇಶ ಅತ್ಯಧಿಕ ಸರಾಸರಿ ವೇತನ 20,730 ರೂ.ನೀಡುತ್ತದೆ.  ಯುಪಿ ನಂತರ ಪಶ್ಚಿಮ ಬಂಗಾಳದ ಸರಾಸರಿ ವೇತನ 20,210 ರೂ.ಗಳಾಗಿದೆ ಮತ್ತು ಮಹಾರಾಷ್ಟ್ರದಲ್ಲಿ ಸರಾಸರಿ ವೇತನ 20,110 ರೂ.ಗಳಾಗಿದೆ.  19,960 ಸರಾಸರಿ ವೇತನದೊಂದಿಗೆ ಬಿಹಾರ ನಾಲ್ಕನೇ ಸ್ಥಾನದಲ್ಲಿದೆ. ಮಧ್ಯಪ್ರದೇಶ ಮತ್ತು ರಾಜಸ್ಥಾನಗಳು 19,740 ರೂ.ಗಳೊಂದಿಗೆ ಐದನೇ ಸ್ಥಾನದಲ್ಲಿವೆ.

Source : https://zeenews.india.com/kannada/business/do-you-know-which-city-in-india-gives-highest-average-salary-144667

Leave a Reply

Your email address will not be published. Required fields are marked *