ಅಕ್ಷಯ ತೃತೀಯದಂದು ಈ 5 ಮಂತ್ರಗಳನ್ನು ಪಠಿಸಿ, ಅದೃಷ್ಟ ತಾನಾಗಿಯೇ ಒಲಿದು ಬರುತ್ತೆ.

ಹಿಂದೂ ಧರ್ಮದಲ್ಲಿ, ಅಕ್ಷಯ ತೃತೀಯವನ್ನು ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ತಿಥಿಯಂದು ಆಚರಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ, ಈ ಹಬ್ಬವನ್ನು ಅದೃಷ್ಟ, ಸಮೃದ್ಧಿ ಮತ್ತು ಹೊಸ ಆರಂಭದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಧರ್ಮಗ್ರಂಥಗಳಲ್ಲಿ, ಈ ದಿನದಂದು ಯಾವುದೇ ಶುಭ ಕಾರ್ಯವನ್ನು ಮಾಡಲು ಸಹ ಮೂಹೂರ್ತವನ್ನು ನೋಡುವ ಅಗತ್ಯವಿಲ್ಲ ಎನ್ನಲಾಗಿದೆ. ಇದೆಲ್ಲದರ ಜೊತೆಗೆ ಈ ದಿನ ಕೆಲವು ಮಂತ್ರಗಳನ್ನು ಪಠಿಸುವುದು ಬಹಳ ಫಲಪ್ರದವೆಂದು ಪರಿಗಣಿಸಲಾಗಿದೆ. ಇದನ್ನು ಪಠಣ ಮಾಡುವುದರಿಂದ ಮನೆಯಲ್ಲಿ ಎಂದಿಗೂ ಹಣದ ಕೊರತೆ ಇರುವುದಿಲ್ಲ. ಜೊತೆಗೆ ಅದೃಷ್ಟದ ತಾನಾಗಿಯೇ ಒಲಿದು ಬರುತ್ತೆ ಎಂಬ ನಂಬಿಕೆ ಇದೆ.

ಅಕ್ಷಯ ತೃತೀಯದಂದು ಮಾಡಿದ ಜಪ, ದಾನಕ್ಕೆ ವಿಶೇಷ ಮಹತ್ವವಿದೆ, ಇದು ನಿಮಗೆ ಶಾಶ್ವತವಾಗಿ ಶುಭ ಫಲಗಳು ಪ್ರಾಪ್ತ್ರಿಯಾಗುವಂತೆ ಮಾಡುತ್ತದೆ. ಈ ಶುಭ ಸಂದರ್ಭದಲ್ಲಿ, ನಿಮ್ಮ ಆಸೆಗಳ ಈಡೇರಿಕೆಗಾಗಿ ಕೆಲವು ವಿಶೇಷ ಮಂತ್ರಗಳನ್ನು ಪಠಿಸಬಹುದು. ಲಕ್ಷ್ಮೀ, ಕುಬೇರ ಮತ್ತು ಸೂರ್ಯ ದೇವರ ಆರಾಧನೆಗೆ ಈ ದಿನವನ್ನು ಮುಖ್ಯವೆಂದು ಪರಿಗಣಿಸಲಾಗಿದೆ. ಅಲ್ಲದೆ ಈ ದಿವಸ ದಾನ ಮಾಡುವುದರಿಂದ ಅನಂತ ಸದ್ಗುಣಗಳು ಲಭ್ಯವಾಗುತ್ತದೆ.

ಈ ಮಂತ್ರಗಳನ್ನು ಪಠಿಸಿ

ಓಂ ನಮೋ ನಾರಾಯಣಾಯ – ಈ ಮಂತ್ರವನ್ನು ಪಠಿಸುವುದರಿಂದ ಸಂತೋಷ, ಸಮೃದ್ಧಿ ಮತ್ತು ಮೋಕ್ಷ ಪ್ರಾಪ್ತಿಯಾಗುತ್ತದೆ.

ಓಂ ಗಣಪತಯೇ ನಮಃ – ಈ ಮಂತ್ರವನ್ನು ಪಠಿಸುವುದರಿಂದ ಕೆಲಸದಲ್ಲಿ ಅಡೆತಡೆಗಳು ಬರುವುದಿಲ್ಲ ಮತ್ತು ಕೆಲಸದಲ್ಲಿ ಯಶಸ್ಸು ಸಿಗುತ್ತದೆ.

ಓಂ ಮಹಾಲಕ್ಷ್ಮೀ ನಮಃ – ಈ ಮಂತ್ರವನ್ನು ಪಠಿಸುವುದರಿಂದ ಸಂಪತ್ತು ಮತ್ತು ಸಮೃದ್ಧಿ ಸಿಗುತ್ತದೆ.

ಓಂ ಶ್ರೀ ಗುರುದೇವಾಯ ನಮಃ – ಈ ಮಂತ್ರವನ್ನು ಗುರುವಿಗೆ ಸಮರ್ಪಿಸಲಾಗಿದೆ. ಇದನ್ನು ಪಠಿಸುವ ಮೂಲಕ ಜ್ಞಾನ, ಬುದ್ಧಿವಂತಿಕೆ ಮತ್ತು ಉತ್ತಮ ಮಾರ್ಗದರ್ಶನವನ್ನು ಪಡೆಯಬಹುದು.

ಓಂ ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ ಊರ್ವರೂಕಮಿವ ಬಂಧನಾನ್‌ ಮೃತ್ಯೋರ್ಮುಕ್ಷೀಯ ಮಾಮೃತಾತ್‌ – ಈ ಮಂತ್ರವನ್ನು ಪಠಿಸುವುದರಿಂದ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ಪ್ರಾಪ್ತವಾಗುತ್ತದೆ.

ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ಮಂತ್ರಗಳನ್ನು ಹೊರತುಪಡಿಸಿ, ನೀವು ನಿಮ್ಮ ಆಯ್ಕೆಯ ಅನುಸಾರ ಯಾವುದೇ ಮಂತ್ರವನ್ನು ಪಠಿಸಬಹುದು. ಆದರೆ ಮಂತ್ರವನ್ನು ಪಠಿಸುವಾಗ, ನಿಮ್ಮ ಮನಸ್ಸು ಶಾಂತವಾಗಿರಬೇಕು ಎಂಬುದನ್ನು ಮರೆಯಬೇಡಿ. ಅಕ್ಷಯ ತೃತೀಯದ ದಿನದಂದು, ದಾನ ಮಾಡುವುದು, ಪೂಜೆ ಮಾಡುವುದು ಮತ್ತು ಮಂತ್ರಗಳನ್ನು ಪಠಿಸುವುದರ ಜೊತೆಗೆ ಹೊಸ ವ್ಯವಹಾರವನ್ನು ಪ್ರಾರಂಭಿಸುವುದು, ಹೊಸ ಮನೆ ಖರೀದಿ, ವಾಹನ ಖರೀದಿ, ಶಿಕ್ಷಣ ಪ್ರಾರಂಭಿಸುವುದು ಮುಂತಾದ ಇತರ ಕೆಲವು ಶುಭ ಕಾರ್ಯಗಳನ್ನು ಸಹ ಮಾಡಬಹುದು. ಅಕ್ಷಯ ತೃತೀಯದಂದು ಈ ಕಾರ್ಯಗಳನ್ನು ಮಾಡುವುದರಿಂದ ಯಶಸ್ಸು ಮತ್ತು ಸ್ಥಿರತೆ ಸಿಗುತ್ತದೆ ಮತ್ತು ಯಾವುದೇ ಸಮಸ್ಯೆ ಉದ್ಭವಿಸುವುದಿಲ್ಲ ಎಂದು ನಂಬಲಾಗಿದೆ.

ಅಕ್ಷಯ ತೃತೀಯದಂದು ಈ ಮಂತ್ರಗಳನ್ನು ಪಠಿಸುವುದರಿಂದಾಗುವ ಪ್ರಯೋಜನಗಳು;

ಲಕ್ಷ್ಮೀ ದೇವಿಯ ಈ ಮಂತ್ರಗಳನ್ನು ಪಠಿಸುವುದರಿಂದ, ಮನೆಯ ಆರ್ಥಿಕ ಸ್ಥಿತಿ ಸುಧಾರಿಸಲು ಪ್ರಾರಂಭಿಸುತ್ತದೆ. ಸಂಪತ್ತಿಗೆ ಅಡ್ಡಿಯಾಗುವ ಮನೆಯಲ್ಲಿ ಇರುವ ದೋಷಗಳು ನಿವಾರಣೆಯಾಗುತ್ತದೆ. ತಾಯಿ ಲಕ್ಷ್ಮೀ ದೇವಿ ಸಂತುಷ್ಟಳಾಗಿ ಮನೆಯಲ್ಲಿ ವಾಸಿಸುತ್ತಾಳೆ. ದೇವಿಯ ಅನುಗ್ರಹದಿಂದ, ಮನೆಯ ಕಷ್ಟಗಳು ಮತ್ತು ಬಡತನವು ದೂರವಾಗುತ್ತದೆ.

Source : https://tv9kannada.com/spiritual/akshaya-tritiya-2024-recite-these-5-mantras-on-akshaya-tritiya-and-get-lucky-automatically-spiritual-news-pgt-829256.html

 

Leave a Reply

Your email address will not be published. Required fields are marked *