ದೆಹಲಿಗೆ ರೇಖಾ ಗುಪ್ತಾ ನೂತನ ಸಿಎಂ: ಇಂದು ಮಧ್ಯಾಹ್ನ 12 ಗಂಟೆಗೆ ಪ್ರಮಾಣ ಸ್ವೀಕಾರ – DELHI NEW CM

ದೆಹಲಿಯ ಮುಂದಿನ ಸಿಎಂ ಆಗಿ ರೇಖಾ ಗುಪ್ತಾ ಅವರು ಆಯ್ಕೆಯಾಗಿದ್ದು, ಇಂದು ಮಧ್ಯಾಹ್ನ 12 ಗಂಟೆಗೆ ರಾಮ್​​ಲೀಲಾ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ನವದೆಹಲಿ: ದೆಹಲಿಯ ನೂತನ ಮುಖ್ಯಮಂತ್ರಿಯ ಹೆಸರನ್ನು ಅಂತಿಮವಾಗಿ ಘೋಷಿಸಲಾಗಿದೆ. ಬಿಜೆಪಿ ರಾಜ್ಯ ಕಚೇರಿಯಲ್ಲಿ ಇಂದು ಸಂಜೆ 7 ಗಂಟೆಗೆ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ರೇಖಾ ಗುಪ್ತಾ ಅವರನ್ನು ಮುಂದಿನ ಸಿಎಂ ಆಗಿ ಆಯ್ಕೆ ಮಾಡಲಾಯಿತು.

ಕೇಂದ್ರ ವೀಕ್ಷಕರಾದ ರವಿಶಂಕರ್ ಪ್ರಸಾದ್ ಮತ್ತು ಓಂ ಪ್ರಕಾಶ್ ಧಂಕರ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಹಿಳಾ ಶಾಸಕಿಗೆ ಸಿಎಂ ಪಟ್ಟ ಕಟ್ಟಲಾಯಿತು. ಹಿರಿಯ ಶಾಸಕ ಮೋಹನ್ ಸಿಂಗ್ ಬಿಶ್ತ್ ಅವರು ಈ ಹೆಸರನ್ನು ಪ್ರಸ್ತಾಪಿಸಿದರು. ಇದನ್ನು ಎಲ್ಲಾ ಶಾಸಕರು ಅನುಮೋದಿಸಿದರು. ನಂತರ, ವೀಕ್ಷಕರು ರೇಖಾ ಗುಪ್ತಾ ಅವರ ಹೆಸರನ್ನು ಬಿಜೆಪಿ ಶಾಸಕಾಂಗ ಪಕ್ಷದ ನಾಯಕಿ, ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಿದರು.

ಮಹತ್ವದ ಬೆಳವಣಿಗೆಯಲ್ಲಿ ಬಿಜೆಪಿ ಹೈಕಮಾಂಡ್, ಭಾರತೀಯ ಜನತಾ ಪಕ್ಷದ ಹಿರಿಯ ನಾಯಕಿ ಹಾಗೂ ಶಾಲಿಮಾರ್ ಬಾಗ್ (ವಾಯುವ್ಯ) ಕ್ಷೇತ್ರದ ಶಾಸಕರಾದ ರೇಖಾ ಗುಪ್ತಾ ಅವರನ್ನು ದೆಹಲಿಯ ಮುಖ್ಯಮಂತ್ರಿಯಾಗಿ ಘೋಷಿಸಿದೆ. ಇದರೊಂದಿಗೆ ರಾಷ್ಟ್ರ ರಾಜಧಾನಿಗೆ ನಾಲ್ಕನೇ ಬಾರಿಗೆ ಮಹಿಳಾ ಮುಖ್ಯಮಂತ್ರಿ ಸಿಕ್ಕಂತಾಗಿದೆ. ಇನ್ನು ಮುಖ್ಯಮಂತ್ರಿ ರೇಸ್​​ನಲ್ಲಿದ್ದ ಘಾಟನುಘಟಿ ನಾಯಕರನ್ನು ಹಿಂದಿಕ್ಕಿ ರೇಖಾ ಗುಪ್ತಾ ಅವರು ಮುಖ್ಯಮಂತ್ರಿ ಆಗಿ ಆಯ್ಕೆ ಆಗಿದ್ದು ಯಾಕೆ? ಅವರ ಆಯ್ಕೆ ಹಿಂದಿದಿಯಾ ಮೋದಿ-ಶಾ ಮಾಸ್ಟರ್​ ಪ್ಲಾನ್? ಈ ಎಲ್ಲ ಪ್ರಶ್ನೆಗಳಿಗೂ ಇಲ್ಲಿದೆ ಉತ್ತರ……

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಬಿಜೆಪಿ ಹೈಕಮಾಂಡ್, ಭಾರತೀಯ ಜನತಾ ಪಕ್ಷದ ಹಿರಿಯ ನಾಯಕಿ ಹಾಗೂ ಶಾಲಿಮಾರ್ ಬಾಗ್ (ವಾಯುವ್ಯ) ಕ್ಷೇತ್ರದ ಶಾಸಕರಾದ ರೇಖಾ ಗುಪ್ತಾ ಅವರನ್ನು ದೆಹಲಿಯ ಮುಖ್ಯಮಂತ್ರಿಯಾಗಿ ಘೋಷಿಸಿದೆ. ಇದರೊಂದಿಗೆ ರಾಷ್ಟ್ರ ರಾಜಧಾನಿಗೆ ನಾಲ್ಕನೇ ಬಾರಿಗೆ ಮಹಿಳಾ ಮುಖ್ಯಮಂತ್ರಿ ಸಿಕ್ಕಂತಾಗಿದೆ. ಇನ್ನು ಮುಖ್ಯಮಂತ್ರಿ ರೇಸ್​​ನಲ್ಲಿದ್ದ ಘಾಟನುಘಟಿ ನಾಯಕರನ್ನು ಹಿಂದಿಕ್ಕಿ ರೇಖಾ ಗುಪ್ತಾ ಅವರು ಮುಖ್ಯಮಂತ್ರಿ ಆಗಿ ಆಯ್ಕೆ ಆಗಿದ್ದು ಯಾಕೆ? ಅವರ ಆಯ್ಕೆ ಹಿಂದಿದಿಯಾ ಮೋದಿ-ಶಾ ಮಾಸ್ಟರ್​ ಪ್ಲಾನ್? ಈ ಎಲ್ಲ ಪ್ರಶ್ನೆಗಳಿಗೂ ಇಲ್ಲಿದೆ ಉತ್ತರ……

ಸತತ 27 ವರ್ಷಗಳ ನಂತರ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವ ಬಿಜೆಪಿಯು ರೇಖಾ ಗುಪ್ತಾ ಅವರನ್ನು ಕೇಂದ್ರಾಡಳಿತ ಪ್ರದೇಶವಾದ ದೆಹಲಿಯ ಮುಖ್ಯಮಂತ್ರಿಯಾಗಿ ಘೋಷಿಸಿದೆ. ಇದರೊಂದಿಗೆ “ಕಾಮ್ ಹಿ ಪೆಹಚಾನ್” (ನನ್ನ ಕೆಲಸವೇ ನನ್ನ ಗುರುತು) ಎನ್ನುವ ಆರ್​ಎಸ್​​ಎಸ್​​ ನಾಯಕಿಗೆ ಬಿಜೆಪಿ ಮಣೆ ಹಾಕಿದೆ. ಮೊದಲ ಬಾರಿಗೆ ಶಾಸಕಿಯಾಗಿರುವ ರೇಖಾ ಗುಪ್ತಾ ಅವರು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರನ್ನು ಸೋಲಿಸಿದ ಪರ್ವೇಶ್ ವರ್ಮಾ, ದೆಹಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಆಶಿಶ್ ಸೂದ್, ಮಾಜಿ ವಿರೋಧ ಪಕ್ಷದ ನಾಯಕ ವಿಜೇಂದರ್ ಗುಪ್ತಾ, ಸತೀಶ್ ಉಪಾಧ್ಯಾಯ ಮತ್ತು ಜಿತೇಂದ್ರ ಮಹಾಜನ್ ಸೇರಿದಂತೆ ಹಲವರನ್ನು ಹಿಂದಿಕ್ಕಿ ಮುಖ್ಯಮಂತ್ರಿ ಹುದ್ದೆ ಪಡೆದಿದ್ದಾರೆ.

ಯಾರೀ ರೇಖಾ ಗುಪ್ತಾ..?

ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಚುನಾವಣೆಯೊಂದಿಗೆ ರಾಜಕೀಯಕ್ಕೆ ಕಾಲಿಟ್ಟ ರೇಖಾ ಗುಪ್ತಾ ಅವರು ಮೂರು ಬಾರಿ ಕೌನ್ಸಿಲರ್ ಮತ್ತು ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (SDMC) ನ ಮಾಜಿ ಮೇಯರ್ ಆಗಿದ್ದಾರೆ. 2022 ರಲ್ಲಿ ಅವರನ್ನು AAP ಯ ಶೆಲ್ಲಿ ಒಬೆರಾಯ್ ವಿರುದ್ಧ MCD ಮೇಯರ್ ಅಭ್ಯರ್ಥಿಯಾಗಿ ಬಿಜೆಪಿ ಕಣಕ್ಕಿಳಿಸಿತು. ಇನ್ನು ರೇಖಾ ಗುಪ್ತಾ ಅವರು ಬಿಜೆಪಿ ಮಹಿಳಾ ಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷೆಯಾಗಿ, ಇದೀಗ ದೆಹಲಿ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನು ಗುಪ್ತಾ ದೌಲತ್ ರಾಮ್ ಕಾಲೇಜಿನಿಂದ ಲಾ ಪದವಿ ಪಡೆದ ಇವರು, 1996-97ರ ಅವಧಿಯಲ್ಲಿ DUSU ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಅವರು 2007 ರಲ್ಲಿ ಮೊದಲು ಉತ್ತರ ಪಿತಂಪುರದಿಂದ ಕೌನ್ಸಿಲರ್ ಆಗಿ ಆಯ್ಕೆಯಾದರು. ಆದಾದ ನಂತರ ಮೊದಲ ಬಾರಿಗೆ ಶಾಲಿಮಾರ್ ಬಾಗ್ (ವಾಯುವ್ಯ) ಕ್ಷೇತ್ರದ ಸ್ಪರ್ಧಿಸಿ ಗೆಲುವು ಸಾಧಿಸುವ ಮೂಲಕ ಮುಖ್ಯಮಂತ್ರಿಯಾಗಿ ಆಯ್ಕೆ ಆಗಿದ್ದಾರೆ.

ಬಿಜೆಪಿ ಹೈಕಮಾಂಡ್​ ರೇಖಾ ಗುಪ್ತಾ ಅವರನ್ನೇ ಸಿಎಂ ಆಗಿ ಆಯ್ಕೆ ಮಾಡಲು ಕಾರಣವೇನು?

ರೇಖಾ ಗುಪ್ತಾ ಅವರನ್ನು ದೆಹಲಿ ಮುಖ್ಯಮಂತ್ರಿಯನ್ನಾಗಿ ಮಾಡುವ ಮೂಲಕ, ಬಿಜೆಪಿ ಮಹಿಳಾ ಮುಖ್ಯಮಂತ್ರಿಗಳ ಪರಂಪರೆಯನ್ನು ನಿರ್ಮಿಸಲು ಪ್ರಯತ್ನಿಸುತ್ತಿದೆ ಎನ್ನಲಾಗಿದೆ. ಇದರೊಂದಿಗೆ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ಆಡಳಿತವನ್ನು ಒಂದು ವ್ಯತಿರಿಕ್ತವಾಗಿ ತೋರಿಸುತ್ತಿದೆ. ಯಾಕೆಂದರೆ, ಕಾಂಗ್ರೆಸ್‌ನ ಶೀಲಾ ದೀಕ್ಷಿತ್ ಅವರ 15 ವರ್ಷಗಳ ಆಡಳಿತವೂ ಸೇರಿದಂತೆ ದೆಹಲಿಯು ಹಲವಾರು ಮಹಿಳಾ ಮುಖ್ಯಮಂತ್ರಿಗಳನ್ನು ಕಂಡಿದೆ. ಇದರೊಂದಿಗೆ ದೆಹಲಿಯ ಇತರ ಮಹಿಳಾ ಮುಖ್ಯಮಂತ್ರಿಗಳು ಎಎಪಿಯ ಅತಿಶಿ ಮತ್ತು ಬಿಜೆಪಿಯ ಸುಷ್ಮಾ ಸ್ವರಾಜ್ ಅವರಾಗಿದ್ದಾರೆ. ಇನ್ನು ಪ್ರಮುಖವಾದ ಸಂಗತಿಯೆಂದರೆ, ಕಲ್ಕಾಜಿಯ ಶಾಸಕಿ ಅತಿಶಿ ಅವರು ಐದು ತಿಂಗಳ ಕಾಲ ಮುಖ್ಯಮಂತ್ರಿ ಹುದ್ದೆಯಲ್ಲಿದ್ದರು. ಸೆಪ್ಟೆಂಬರ್ 2024 ರಲ್ಲಿ ಕೇಜ್ರಿವಾಲ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ತರಲಾಯಿತು. ಇದು ರಾಜಕೀಯ ಗಿಮಿಕ್​ ಎಂದು ಬಿಜೆಪಿ ಕರೆದಿತ್ತು. ಇನ್ನು ಇದಕ್ಕೂ ಮೊದಲು ಅಕ್ಟೋಬರ್ 12, 1998 ರಿಂದ ಡಿಸೆಂಬರ್ 3, 1998 ರವರೆಗೆ ಸುಷ್ಮಾ ಸ್ವರಾಜ್ ಅವರು ದೆಹಲಿ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿದ್ದರು. ಆದರೆ ವಿಧಾನಸಭಾ ಚುನಾವಣೆಗೆ ಸ್ವಲ್ಪ ಮೊದಲು ತಲೆದೂರಿದ ಈರುಳ್ಳಿಯ ಬೆಲೆ ಏರಿಕೆಯಿಂದ ಚುನಾವಣೆಯಲ್ಲಿ ಸೋತರು.

ಮತ್ತೊಂದೆಡೆ ದೇಶದ 20 ರಾಜ್ಯದಲ್ಲಿ ಅಧಿಕಾರದಲ್ಲಿರುವ ಎನ್​ಡಿಎ ಮೈತ್ರಿಕೂಟವು ಯಾವುದೇ ರಾಜ್ಯದಲ್ಲಿಯೂ ಸಹ ಮಹಿಳಾ ಮುಖ್ಯಮಂತ್ರಿಯನ್ನು ಹೊಂದಿರಲಿಲ್ಲ. ಆದರಿಂದ ದೆಹಲಿಯಲ್ಲಿ ಆರ್​ಎಸ್​​ಎಸ್​​ ಹಿನ್ನೆಲೆಯುಳ್ಳ ಮಹಿಳೆಯನ್ನು ಮುಖ್ಯಮಂತ್ರಿ ಹುದ್ದೆಗೆ ಕರೆತರಲಾಗಿದೆ. ಇದರೊಂದಿಗೆ ರೇಖಾ ಗುಪ್ತಾ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿರುವುದು ಚುನಾವಣಾ ರಾಜಕೀಯ ಮತ್ತು ನೀತಿಗಳಲ್ಲಿ ಮಹಿಳೆಯರಿಗೆ ಬಿಜೆಪಿ ನೀಡುವ ಆದ್ಯತೆಗೆ ಅನುಗುಣವಾಗಿದೆ.

ಬಿಜೆಪಿಗೆ ಮಹಿಳಾ ಮತದಾರರೇ ಬೆನ್ನಲುಬು

70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಒಂಬತ್ತು ಅಭ್ಯರ್ಥಿಗಳನ್ನು ಕಣಕ್ಕಿಳಿಸಿತು. ಅದರಲ್ಲಿ ನಾಲ್ವರು ಮಹಿಳಾ ಅಭ್ಯರ್ಥಿಗಳು ಗೆದ್ದರು. ಜೊತೆಗೆ 2025 ರ ವಿಧಾನಸಭಾ ಚುನಾವಣೆಯಲ್ಲಿ ದೆಹಲಿಯಲ್ಲಿ ಪುರುಷರಿಗಿಂತ ಮಹಿಳೆಯರು ಹೆಚ್ಚು ಮತ ಚಲಾಯಿಸಿದರು. ಮಹಿಳಾ ಮತದಾರರು 60.92% ರಷ್ಟಿದ್ದರೆ, ಪುರುಷರು 60.21% ರಷ್ಟಿದ್ದರು. ಇನ್ನೊಂದೆಡೆ ಮಹಿಳಾ ಮತದಾರರನ್ನು ಅವಲಂಬಿಸಿದ್ದ ಎಎಪಿ ಹೀನಾಯವಾಗಿ ಸೋತರೆ, ಬಿಜೆಪಿ ನಿರ್ಣಾಯಕವಾಗಿ ಗೆದ್ದು 70 ಸ್ಥಾನಗಳಲ್ಲಿ 48 ಸ್ಥಾನಗಳನ್ನು ಗಳಿಸಿತು. ಇದರಿಂದ ಮಹಿಳೆಯರನ್ನು ಮತದಾರರಾಗಿ ಬಳಸಿಕೊಳ್ಳುವತ್ತ ಗಮನಹರಿಸುವ ನಿಟ್ಟಿನಲ್ಲಿ, ಬಿಜೆಪಿ ತನ್ನ ದೆಹಲಿ ಚುನಾವಣಾ ಪ್ರಣಾಳಿಕೆಯಲ್ಲಿ ದೊಡ್ಡ ಭರವಸೆಗಳನ್ನು ನೀಡಿತು.

ಮತ್ತೊಂದೆಡೆ ದೆಹಲಿ ಬಿಜೆಪಿ ನಾಯಕರಾದ ರಮೇಶ್ ಬಿಧುರಿ ಮತ್ತು ಪರ್ವೇಶ್ ವರ್ಮಾ ಅವರಂತಹ ನಾಯಕರಿಗಿಂತ ಭಿನ್ನವಾಗಿ, ರೇಖಾ ಗುಪ್ತಾ ಯಾವುದೇ ಪ್ರಮುಖ ವಿವಾದಗಳನ್ನು ಕಂಡಿಲ್ಲ. ಇದರೊಂದಿಗೆ ಸಂಸತ್ತಿನ ಚುನಾವಣೆಯಲ್ಲಿ ಸ್ಪರ್ಧಿಸದ ಕಾರಣ ಅವರು ಹೊಸ ಮುಖವೂ ಹೌದು ಮತ್ತು ದೆಹಲಿಯ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಬರೆಯಲು ಹೊಸ ಮುಖವಾಗಿ ಸೂಕ್ತವಾಗಿದ್ದಾರೆ. ಆದರೆ ರೇಖಾ ಗುಪ್ತಾ ಅವರು ರಾಜಕೀಯ ಅನುಭವಿಯೇ ಸರಿ, ಅವರು ಪಕ್ಷದ ಶ್ರೇಣಿಗಳಲ್ಲಿ ಉನ್ನತ ಸ್ಥಾನಗಳನ್ನು ಹೊಂದಿದ್ದಾರೆ. ಮತ್ತು ಮೂರು ದಶಕಗಳಿಗೂ ಹೆಚ್ಚು ಕಾಲ ದೆಹಲಿ ಬಿಜೆಪಿಯೊಂದಿಗೆ ಸಂಬಂಧ ಹೊಂದಿದ್ದಾರೆ. ಆದ್ದರಿಂದ ಅವರನ್ನು ದೆಹಲಿ ಮುಖ್ಯಮಂತ್ರಿಯಾಗಿ ನೇಮಿಸುವ ಮೂಲಕ, ಬಿಜೆಪಿ ವಿವಾದಾತ್ಮಕವಲ್ಲದ ರಾಜಕಾರಣಿಯನ್ನು ಮಾತ್ರವಲ್ಲದೆ, ಮಹಿಳಾ ನಾಯಕಿ ಮತ್ತು ಹೊಸ ಮುಖವನ್ನೂ ಸಹ ಆರಿಸಿಕೊಂಡಿದೆ.

ದೆಹಲಿಯಲ್ಲಿ ಹೆಚ್ಚಾಗಿರುವ ಬನಿಯಾ ಸಮುದಾಯಕ್ಕೆ ಸೇರಿದ ರೇಖಾ ಗುಪ್ತಾ

ಇನ್ನು ಮಹತ್ವದ ಸಂಗತಿಯಂದರೆ ರೇಖಾ ಗುಪ್ತಾ ಮುಖ್ಯಮಂತ್ರಿಯಾಗಿ ಆಯ್ಕೆಯಾದ ನಂತರ, ಬಿಜೆಪಿಯು ದೆಹಲಿಯ ಸುಮಾರು 30% ಮತದಾರರನ್ನು ಒಳಗೊಂಡಿರುವ ಇತರ ಹಿಂದುಳಿದ ವರ್ಗಗಳ (ಒಬಿಸಿ) ಸಮುದಾಯವನ್ನು ಕಾರ್ಯತಂತ್ರ ಎನ್ನಲಾಗಿದೆ. ಇದರೊಂದಿಗೆ ಒಬಿಸಿಯ ಜಾಟ್​, ಗುಜ್ಜರ್‌, ಯಾದವ ಮತ್ತು ಗುಪ್ತರಂತಹ ಪ್ರಮುಖ ಜಾತಿ ಗುಂಪುಗಳನ್ನು ತನ್ನತ್ತ ಸೆಳೆಯವುದು ಒಂದಾಗಿದೆ. ಇನ್ನು ಬಹಳ ಮುಖ್ಯವಾಗಿ ರೇಖಾ ಗುಪ್ತಾ ಅವರು ದೆಹಲಿಯಲ್ಲಿ ಹೆಚ್ಚಾಗಿರುವ ಬನಿಯಾ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

ಇನ್ನು ಎಎಪಿಯಂತೆಯೇ, ಬಿಜೆಪಿ ಕೂಡ ದೆಹಲಿ ಮಹಿಳೆಯರಿಗಿಂತ ಮೊದಲು ಮಹಿಳಾ ಕೇಂದ್ರಿತ ಯೋಜನೆಗಳನ್ನು ಘೋಷಿಸಿತು. ಅದರಂತೆ ಎಎಪಿಯ 2,100 ರೂ. ನಗದು ದೇಣಿಗೆಗೆ ಸಮಾನವಾಗಿ ಬಿಜೆಪಿ, ಮಹಿಳಾ ಸಮೃದ್ಧಿ ಯೋಜನೆಯಡಿ ದೆಹಲಿಯ ಮಹಿಳೆಯರಿಗೆ ಮಾಸಿಕ 2,500 ರೂ.ಗಳ ಆರ್ಥಿಕ ಸಹಾಯವನ್ನು ಘೋಷಿಸಿತು. ಇದಲ್ಲದೆ, ಉಚಿತ ಬಸ್ ಪ್ರಯಾಣದಂತಹ ಮಹಿಳೆಯರಿಗಾಗಿ ನಡೆಯುತ್ತಿರುವ ಕಲ್ಯಾಣ ಯೋಜನೆಗಳಿಗೆ ತನ್ನ ಬದ್ಧತೆಯನ್ನು ಪುನರುಚ್ಚರಿಸಿತು. ಜೊತೆಗೆ ಆಯುಷ್ಮಾನ್ ಭಾರತ್ ಯೋಜನೆಯಡಿ ದೆಹಲಿಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಗರ್ಭಕಂಠ, ಸ್ತನ ಮತ್ತು ಅಂಡಾಶಯದ ಕ್ಯಾನ್ಸರ್ ತಪಾಸಣೆಯೊಂದಿಗೆ, ಪ್ರತಿ ಗರ್ಭಿಣಿ ಮಹಿಳೆಗೆ 21,000 ರೂ. ಮತ್ತು ಆರು ಪೌಷ್ಠಿಕಾಂಶ ಕಿಟ್‌ಗಳನ್ನು ನೀಡುವುದಾಗಿ ಬಿಜೆಪಿ ಭರವಸೆ ನೀಡಿದೆ.

ರೇಖಾ ಗುಪ್ತಾ ಬಗ್ಗೆ 10 ದೊಡ್ಡ ವಿಷಯಗಳನ್ನು ತಿಳಿದುಕೊಳ್ಳಿ

  • ರೇಖಾ ಗುಪ್ತಾ 1974 ರಲ್ಲಿ ಹರಿಯಾಣದ ಜಿಂದ್ ಜಿಲ್ಲೆಯ ಜುಲಾನಾ ಉಪವಿಭಾಗದ ನಂದಗಢ ಗ್ರಾಮದಲ್ಲಿ ಜನಿಸಿದರು.
  • ರೇಖಾ ಕೇವಲ 2 ವರ್ಷದವಳಿದ್ದಾಗ, ಅವರ ಕುಟುಂಬ 1976 ರಲ್ಲಿ ದೆಹಲಿಗೆ ಸ್ಥಳಾಂತರಗೊಂಡಿತು.
  • ರೇಖಾ ಗುಪ್ತಾ ಅವರ ತಂದೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಮ್ಯಾನೇಜರ್ ಆಗಿದ್ದರು. ರೇಖಾ ಗುಪ್ತಾ ತಮ್ಮ ಸಂಪೂರ್ಣ ಶಿಕ್ಷಣವನ್ನು ದೆಹಲಿಯಲ್ಲಿ ಮುಗಿಸಿದರು.
  • ಈ ಸಮಯದಲ್ಲಿ, ಅವರು ಬಿಜೆಪಿಯ ವಿದ್ಯಾರ್ಥಿ ವಿಭಾಗವಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ಗೆ ಸೇರಿ ರಾಜಕೀಯದಲ್ಲಿ ಸಕ್ರಿಯರಾದರು.
  • ರೇಖಾ ಗುಪ್ತಾ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲೂ ಗೆಲುವು ಸಾಧಿಸಿದ್ದಾರೆ. ಅವರು ಕಾರ್ಯದರ್ಶಿ ಮತ್ತು ಪ್ರಾಂಶುಪಾಲರೂ ಆಗಿದ್ದಾರೆ.
  • ಈ ಬಾರಿ ರೇಖಾ ಗುಪ್ತಾ ಅವರು ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ವಂದನಾ ಕುಮಾರಿ ಅವರನ್ನು ಸೋಲಿಸುವ ಮೂಲಕ ಚುನಾವಣೆಯಲ್ಲಿ ಗೆದ್ದಿದ್ದಾರೆ.
  • ರೇಖಾ ಗುಪ್ತಾ ಒಟ್ಟು 68200 ಮತಗಳನ್ನು ಪಡೆದರು. ಎಎಪಿಯ ವಂದನಾ ಕುಮಾರಿ 38605 ಮತಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರು.
  • ಇಲ್ಲಿ ಕಾಂಗ್ರೆಸ್‌ನ ಪ್ರವೀಣ್ ಕುಮಾರ್ ಜೈನ್ 4892 ಮತಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದರು.
  • ಮಹಿಳೆಯಾಗಿದ್ದರಿಂದ, ರೇಖಾ ಗುಪ್ತಾ ಆರಂಭದಿಂದಲೂ ಬಿಜೆಪಿಯ ಆಯ್ಕೆಯಾಗಿದ್ದರು.
  • ಇಲ್ಲಿಯವರೆಗೆ ಅವರ ಮೇಲೆ ಭ್ರಷ್ಟಾಚಾರದ ಕಲೆ ಇಲ್ಲ. ಬಹುಶಃ ಇದಕ್ಕೆ ಆದ್ಯತೆ ನೀಡಲಾಗಿದೆ.
  • ಇನ್ನೊಂದು ಮುಖ್ಯವಾದ ವಿಷಯವೆಂದರೆ, ಬಿಜೆಪಿ ಮಹಿಳೆಯರ ಬಗ್ಗೆ ಯೋಚಿಸುತ್ತದೆ ಎಂಬ ಸಂದೇಶವನ್ನು ಅವರ ಮೂಲಕ ಎಲ್ಲಾ ಮಹಿಳೆಯರಿಗೆ ಕಳುಹಿಸಲು ಬಿಜೆಪಿ ಉನ್ನತ ನಾಯಕತ್ವ ಬಯಸಿತ್ತು.

Leave a Reply

Your email address will not be published. Required fields are marked *