ಬದುಕಿನ ಕನಸುಗಳಿಗೆ ರೆಕ್ಕೆ: ಭೋವಿ ನಿಗಮ 2026 ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಜ. 08

ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ. ಮಹಾದೇವಪ್ಪ ಬೆಂಗಳೂರಿನಲ್ಲಿ ಭೋವಿ ಅಭಿವೃದ್ಧಿ ನಿಗಮದ 2026ನೇ ಸಾಲಿನ ನೂತನ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ಅವರು ಸರ್ಕಾರ ನೀಡುತ್ತಿರುವ ಸವಲತ್ತುಗಳನ್ನು ಭೋವಿ ನಿಗಮದ ಮೂಲಕ ಬಳಸಿಕೊಂಡು ಭೋವಿ ಸಮಾಜದವರು ಉತ್ತಮ ಬದುಕು ಕಟ್ಟಿಕೊಳ್ಳುವಂತೆ ತಿಳಿಸಿ ಸರಕಾರದ ಸೌಲಭ್ಯ ಪಡೆದು ಆರ್ಥಿಕವಾಗಿ ಸದೃಢರಾಗಿ ಎಂದು ಕರೆ ನೀಡಿದರು.

ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ, ಬದುಕಿನ ಆಶಾಗೋಪರ ಕಟ್ಟಿಕೊಂಡವರ ಪಾಲಿನ ಆಶಾಕಿರಣ ಭೋವಿ ನಿಗಮ. ಬಡವರ ಕನಸುಗಳಿಗೆ ರೆಕ್ಕೆ ಕಟ್ಟಲು ಪಣತೊಟ್ಟಿ ನಿಂತ ಭೋವಿ ನಿಗಮದ ಅಧ್ಯಕ್ಷ ರಾಮಪ್ಪ ಎಂ ಎಂದು ಸ್ವಾಮೀಜಿ ಹೇಳಿದರು.

ಭೋವಿ ನಿಗಮದ ಅಧ್ಯಕ್ಷ ನೆರಲಗುಂಟೆ ಎಂ ರಾಮಪ್ಪ ಮಾತನಾಡಿ ಭೋವಿ ಸಮುದಾಯದವರು ಕಲ್ಲು ಒಡೆಯುವುದು, ಕೆರೆ ನಿರ್ವಹಣೆ, ಕಟ್ಟಡ ನಿರ್ಮಾಣ, ಮಣ್ಣು ಹಾಕುವುದು, ಗಾರೆ ಹಾಕುವುದು ಸೇರಿದಂತೆ ನಾನಾ ಕೆಲಸಗಳನ್ನು ಮಾಡುತ್ತಿದ್ದು, ಸಾಮಾಜಿಕ ಹಾಗೂ ಆರ್ಥಿಕವಾಗಿ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ನಿಗಮ ವಿವಿಧ ಯೋಜನೆಗಳಡಿ ಆರ್ಥಿಕ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಬಡತನ ರೇಖೆಗಿಂತ ಕೆಳಗಿರುವ ಭೋವಿ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ಭೋವಿ ನಿಗಮ ಬದ್ಧವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಡಿವಾಳ ಗುರುಪೀಠದ ಬಸವ ಮಾಚಿದೇವ ಶ್ರೀಗಳು, ಭೋವಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಯು.ಚಂದ್ರನಾಯ್ಕ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Views: 18

Leave a Reply

Your email address will not be published. Required fields are marked *