ಬಾಲಸೋರ್ ರೈಲು ದುರಂತ: ಸಂತ್ರಸ್ತರಿಗೆ ರಿಲಯನ್ಸ್ ಫೌಂಡೇಷನ್ ಹತ್ತು ಅಂಶಗಳ ನೆರವಿನ ಘೋಷಣೆ 

ಒಡಿಶಾದ ಬಾಲಸೋರ್ ಎಂಬಲ್ಲಿ ನಡೆದ ಭೀಕರ ರೈಲು ದುರಂತದ ಬಗ್ಗೆ ರಿಲಯನ್ಸ್ ಫೌಂಡೇಷನ್ ನಿಂದ ತೀವ್ರವಾದ ಸಂತಾಪ ವ್ಯಕ್ತಪಡಿಸಲಾಗಿದೆ. ಅಷ್ಟೇ ಅಲ್ಲ, ಫೌಂಡೇಷನ್ ನ ವಿಶೇಷ ವಿಪತ್ತು ನಿರ್ವಹಣಾ ತಂಡವನ್ನು ರಕ್ಷಣಾ ಕಾರ್ಯಗಳಿಗೆ ನಿಯೋಜಿಸಲಾಗಿದ್ದು, ತಂಡವು ದಿನದ ಇಪ್ಪತ್ನಾಲ್ಕು ಗಂಟೆಯೂ ಗಾಯಾಳುಗಳಿಗೆ ಅಗತ್ಯ ಇರುವಂಥ ನೆರವು ಹಾಗೂ ಸಹಾಯವನ್ನು ಒದಗಿಸುತ್ತಿದೆ.

ಮುಂಬೈ, ಜೂನ್ 5: ಒಡಿಶಾದ ಬಾಲಸೋರ್ ಎಂಬಲ್ಲಿ ನಡೆದ ಭೀಕರ ರೈಲು ದುರಂತದ ಬಗ್ಗೆ ರಿಲಯನ್ಸ್ ಫೌಂಡೇಷನ್ ನಿಂದ ತೀವ್ರವಾದ ಸಂತಾಪ ವ್ಯಕ್ತಪಡಿಸಲಾಗಿದೆ. ಅಷ್ಟೇ ಅಲ್ಲ, ಫೌಂಡೇಷನ್ ನ ವಿಶೇಷ ವಿಪತ್ತು ನಿರ್ವಹಣಾ ತಂಡವನ್ನು ರಕ್ಷಣಾ ಕಾರ್ಯಗಳಿಗೆ ನಿಯೋಜಿಸಲಾಗಿದ್ದು, ತಂಡವು ದಿನದ ಇಪ್ಪತ್ನಾಲ್ಕು ಗಂಟೆಯೂ ಗಾಯಾಳುಗಳಿಗೆ ಅಗತ್ಯ ಇರುವಂಥ ನೆರವು ಹಾಗೂ ಸಹಾಯವನ್ನು ಒದಗಿಸುತ್ತಿದೆ.

ಇಂಥ ಘೋರ ದುರಂತದ ಸಂತ್ರಸ್ತರ ನೋವನ್ನು ಸಂಪೂರ್ಣವಾಗಿ ಇಲ್ಲದಂತೆ ಮಾಡುವ ಶಕ್ತಿ ನಮಗಿಲ್ಲ.ಆದರೆ ದುಃಖಿತ ಕುಟುಂಬಗಳ ಭವಿಷ್ಯಕ್ಕಾಗಿ ಅಗತ್ಯವಾದದ್ದನ್ನು ಮಾಡುವುದಕ್ಕೆ ಬದ್ಧರಾಗಿದ್ದೇವೆ. ಇದಕ್ಕಾಗಿಯೇ ಹತ್ತು ಅಂಶದ ಕಾರ್ಯಕ್ರಮ ಘೋಷಣೆ ಮಾಡಿದ್ದೇವೆ. ಇಂಥ ದುರಿತ ಕಾಲದಲ್ಲಿ ಅವರೊಂದಿಗೆ ರಿಲಯನ್ಸ್ ಫೌಂಡೇಷನ್ ಗಟ್ಟಿಯಾಗಿ ನಿಂತಿದೆ ಎಂದು ಫೌಂಡೇಷನ್ ನ ಸಂಸ್ಥಾಪಕಿ ಹಾಗೂ ಅಧ್ಯಕ್ಷೆ ನೀತಾ ಅಂಬಾನಿ ಅವರು ತಿಳಿಸಿದ್ದಾರೆ.

ಅಂದ ಹಾಗೆ, ರಿಲಯನ್ಸ್ ಫೌಂಡೇಷನ್ ನಿಂದ ನೀಡುತ್ತಿರುವ ಆ ಹತ್ತು ಅಂಶಗಳ ಪರಿಹಾರ ಹೀಗಿವೆ:
1. ‌ವಿಪತ್ತನ್ನು ನಿಭಾಯಿಸುವ ಆಂಬ್ಯುಲೆನ್ಸ್‌ಗಳಿಗೆ ಜಿಯೋ-ಬ್ರಿಟಿಷ್ ಪೆಟ್ರೋಲಿಯಂ ಜಾಲದ ಮೂಲಕ ಉಚಿತ ಇಂಧನ.

2. ರಿಲಯನ್ಸ್ ಸ್ಟೋರ್‌ಗಳ ಮೂಲಕ ಸಂತ್ರಸ್ತ ಕುಟುಂಬಗಳಿಗೆ ಮುಂದಿನ ಆರು ತಿಂಗಳವರೆಗೆ ಹಿಟ್ಟು, ಸಕ್ಕರೆ, ಬೇಳೆ, ಅಕ್ಕಿ, ಉಪ್ಪು ಮತ್ತು ಅಡುಗೆ ಎಣ್ಣೆ ಸೇರಿದಂತೆ ಉಚಿತ ಪಡಿತರ ಸರಬರಾಜು.

3. ಗಾಯಗೊಂಡವರಿಗೆ ಅವರ ತಕ್ಷಣದ ಚೇತರಿಕೆ ಅಗತ್ಯಗಳನ್ನು ಬೆಂಬಲಿಸಲು ಉಚಿತ ಔಷಧಗಳು; ಆಸ್ಪತ್ರೆಯ ಅಗತ್ಯವಿರುವವರಿಗೆ ವೈದ್ಯಕೀಯ ಚಿಕಿತ್ಸೆ.

4. ಭಾವನಾತ್ಮಕ ಮತ್ತು ಮಾನಸಿಕ ಬೆಂಬಲಕ್ಕಾಗಿ ಸಮಾಲೋಚನೆ ಸೇವೆಗಳು.

5. ಅಗತ್ಯದ ಆಧಾರದ ಮೇಲೆ ಮೃತರ ಕುಟುಂಬದ ಒಬ್ಬ ಸದಸ್ಯರಿಗೆ ಜಿಯೋ ಮತ್ತು ರಿಲಯನ್ಸ್ ರೀಟೇಲ್ ಮೂಲಕ ಉದ್ಯೋಗಾವಕಾಶ

6. ಗಾಲಿಕುರ್ಚಿಗಳು, ಕೃತಕ ಅಂಗಗಳು ಸೇರಿದಂತೆ ಅಂಗವೈಕಲ್ಯಕ್ಕೆ ತುತ್ತಾದವರಿಗೆ ಬೆಂಬಲ, ಸಹಾಯ

7. ಹೊಸ ಉದ್ಯೋಗಾವಕಾಶಗಳನ್ನು ಹುಡುಕಲು ವಿಶೇಷ ಕೌಶಲ ತರಬೇತಿ

8. ಕುಟುಂಬದಲ್ಲಿ ದುಡಿಯುತ್ತಿದ್ದ ಒಬ್ಬರೇ ಸದಸ್ಯರನ್ನು ಕಳೆದುಕೊಂಡವರಿದ್ದಲ್ಲಿ ಮಹಿಳೆಯರಿಗೆ ಕಿರುಬಂಡವಾಳ ಮತ್ತು ತರಬೇತಿ ಅವಕಾಶಗಳು

9. ಅಪಘಾತಕ್ಕೆ ಈಡಾದ ಗ್ರಾಮೀಣ ಕುಟುಂಬಗಳಿಗೆ ಪರ್ಯಾಯ ಜೀವನೋಪಾಯಕ್ಕಾಗಿ ಹಸು, ಎಮ್ಮೆ, ಮೇಕೆ, ಕೋಳಿ ಮುಂತಾದ ಜಾನುವಾರುಗಳನ್ನು ಒದಗಿಸುವುದು

10. ವಿಪತ್ತಿಗೆ ಗುರಿಯಾದವರ ಜೀವನೋಪಾಯ ಮತ್ತೆ ಸಾಗುವುದಕ್ಕೆ ಒಂದು ವರ್ಷದವರೆಗೆ ದುಃಖಿತರ ಕುಟುಂಬದ ಸದಸ್ಯರಿಗೆ ಉಚಿತ ಮೊಬೈಲ್ ಸಂಪರ್ಕ.

ಅಪಘಾತ ಸಂಭವಿಸಿದಾಗಿನಿಂದ ಬಾಲಸೋರ್‌ನಲ್ಲಿ ರಿಲಯನ್ಸ್ ಫೌಂಡೇಷನ್‌ನ ವಿಶೇಷ ವಿಪತ್ತು ನಿರ್ವಹಣಾ ತಂಡವು ತುರ್ತು ವಿಭಾಗ, ಕಲೆಕ್ಟರೇಟ್, ಬಾಲಸೋರ್ ಮತ್ತು ರಾಷ್ಟ್ರೀಯ ವಿಪತ್ತು ಪಡೆಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದೆ. ಪ್ರಯಾಣಿಕರಿಗೆ ಎಲ್ಲ ಬಗೆಯಲ್ಲೂ ನೆರವಾಗುತ್ತಿದೆ

ರಕ್ಷಣಾ ಪ್ರಯತ್ನಗಳು ಅಡೆತಡೆಯಿಲ್ಲದೆ ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳಲು ರಿಲಯನ್ಸ್ ಫೌಂಡೇಷನ್ ಸುಮಾರು 1,200 ಜನರಿಗೆ ಶೀಘ್ರವಾಗಿ ಆಹಾರವನ್ನು ತಯಾರಿಸಲು ಪ್ರದೇಶದ ಯುವ ಸ್ವಯಂಸೇವಕರನ್ನು ಗುರುತಿಸಿದೆ ಮತ್ತು ಜಾಲವನ್ನು ರೂಪಿಸಿದೆ. ಅಪಘಾತದ ಸ್ಥಳಕ್ಕೆ ಆಗಮಿಸಿದ ರಕ್ಷಣಾ ಸಿಬ್ಬಂದಿಗೆ ಮತ್ತು ಇತರ ಸಿಬ್ಬಂದಿಗೆ ಅಗತ್ಯವಿರುವ ಮತ್ತು ಸಂತ್ರಸ್ತರ ಕುಟುಂಬಗಳಿಗೆ ಊಟವನ್ನು ಒದಗಿಸಲಾಯಿತು. ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ಒಂದು ದಶಕಕ್ಕೂ ಹೆಚ್ಚು ಕಾಲದಿಂದ ರಿಲಯನ್ಸ್ ಫೌಂಡೇಷನ್‌ನ ವಿಪತ್ತು ನಿರ್ವಹಣಾ ತಂಡವು ನೈಸರ್ಗಿಕ ಅಥವಾ ಇನ್ನಾವುದೇ ವಿಪತ್ತುಗಳಿಗೆ ಪ್ರತಿಕ್ರಿಯಿಸಲು ಮತ್ತು ಚೇತರಿಸಿಕೊಳ್ಳಲು ಸಾಧ್ಯವಾಗುವಂತೆ ಸಮುದಾಯಗಳನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಿದೆ. ಪ್ರವಾಹಗಳು, ಚಂಡಮಾರುತಗಳು, ಭೂಕಂಪಗಳು, ಬರಗಾಲದ ಸಮಯದಲ್ಲಿ ಮತ್ತು ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ವ್ಯಾಪಕವಾಗಿ ಪರಿಹಾರವನ್ನು ರಿಲಯನ್ಸ್ ಫೌಂಡೇಷನ್ ಒದಗಿಸಿದೆ. 

ಅಷ್ಟೇ ಅಲ್ಲದೆ, ಬಾಧಿತರ ಜೀವನ ಮತ್ತು ಜೀವನೋಪಾಯಗಳ ಪುನರ್ ನಿರ್ಮಾಣಕ್ಕೆ ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ. 48 ವಿಪತ್ತುಗಳಲ್ಲಿ 2.1 ಕೋಟಿ ಜನರಿಗೆ ಬೆಂಬಲವಾಗಿ ನಿಂತಿದೆ.

Source :https://zeenews.india.com/kannada/india/balasore-train-disaster-reliance-foundation-announces-ten-points-of-assistance-to-victims-138790

Leave a Reply

Your email address will not be published. Required fields are marked *