ಮಾರುಕಟ್ಟೆಗೆ ‘ಭಾರತ್​ ಬ್ರ್ಯಾಂಡ್​ ಅಕ್ಕಿ’ ಲಗ್ಗೆ; KGಗೆ ಕೇವಲ 29 ರೂಪಾಯಿ- ರಿಲಯನ್ಸ್​ ಸ್ಮಾರ್ಟ್​, ಫ್ಲಿಪ್​ಕಾರ್ಟ್ ಲಭ್ಯ.

ಕೇವಲ ಮೊಬೈಲ್ ವಾಹನಗಳಲ್ಲದೆ, ರಿಲಯನ್ಸ್ ಮಾರ್ಟ್, ಫ್ಲಿಪ್ ಕಾರ್ಡ್, ಬ್ಲಿಂಕಿಟ್ ಸೇರಿದಂತೆ ಅನೇಕ ಆನ್‌ಲೈನ್ ಶಾಪಿಂಗ್ ಆ್ಯಪ್‌ಗಳಲ್ಲೂ ಭಾರತ್ ಅಕ್ಕಿ 29 ರೂಪಾಯಿಗೆ ಸಿಗಲಿದೆ.‌

ಬೆಂಗಳೂರು: ಇತ್ತಿಚೆಗೆ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ. ಇನ್ನು ಅಕ್ಕಿಯ ಬೆಲೆ (Rice Price) ಅಂತು ಕೇಳೋದಕ್ಕೆ ಆಗೋದಿಲ್ಲ. ಈ ಹಿನ್ನೆಲೆ ಕೇಂದ್ರ ಸರ್ಕಾರ (Union Government) ಜನರಿಗೆ ಅನುಕೂಲ ಆಗಲಿ ಅನ್ನೋ ಕಾರಣಕ್ಕೆ 29 ರೂಪಾಯಿಗೆ ಅಕ್ಕಿ ನೀಡಲು ಮುಂದಾಗಿದೆ. ಹೌದು, ಇತ್ತಿಚೆಗೆ ಆಹಾರ ಪದಾರ್ಥಗಳ ರೇಟ್ (Price of Food items) ಹೆಚ್ಚಾಗಿದೆ. ಮಧ್ಯಮ ವರ್ಗ ಹಾಗೂ ಬಡವರು ನೂರಾರು ರೂಪಾಯಿ ಕೊಟ್ಟು ಅಕ್ಕಿ ಬೇಳೆ ಕೊಂಡುಕೊಳ್ಳೋ ಪರಿಸ್ಥಿತಿ ಎದುರಾಗಿದೆ. ಈ ಹಿನ್ನೆಲೆ‌ಯಲ್ಲಿ ಕೇಂದ್ರ ಸರ್ಕಾರ 29 ರೂಪಾಯಿಗೆ ಅಕ್ಕಿ ನೀಡಲು ಮುಂದಾಗಿದ್ದು, ಮಂಗಳವಾರ ಬೆಂಗಳೂರಿನನ ನಾಫೆಡ್ಸ್ (NAFED) ಬಳಿ ಚಾಲನೆ ನೀಡಲಾಯ್ತು.

ಅಮೇಜಾನ್​ನಲ್ಲಿ ಕೇಂದ್ರದ ಅಕ್ಕಿ ಲಭ್ಯ

ಮೊದಲ‌ ಹಂತದಲ್ಲಿ 120 ಕ್ವಿಂಟಾಲ್ ಅಕ್ಕಿ ಬೆಂಗಳೂರಿಗೆ ಬಂದಿದೆ. ರೈತರು ಬೆಳೆಯುವ ಅಕ್ಕಿಯನ್ನ ಖರೀದಿಸಿ ಜನರಿಗೆ ಕಡಿಮೆ ದರದಲ್ಲಿ ಮಾರಾಟ ಮಾಡಲಾಗ್ತಿದೆ. ಇದಕ್ಕಾಗಿ ಒಟ್ಟು 25 ವಾಹನಗಳನ್ನ ನೇಮಿಸಲಾಗಿದೆ. ಬೆಂಗಳೂರಿನಲ್ಲಿ 5 ಕಡೆಗಳಲ್ಲಿ ಮೊಬೈಲ್ ವಾಹನಗಳು ಇರಲಿದ್ದು, ಜನರು ಅಕ್ಕಿ ಖರೀದಿ ಮಾಡಬಹುದು. ಜೊತೆಗೆ ಬೇರೆ ಜಿಲ್ಲೆಗಳಲ್ಲೂ ಕೂಡಾ ಅಕ್ಕಿ ವಿತರಣೆಗೆ ಸಿದ್ಧತೆ ಮಾಡಿಕೊಂಡಿದ್ದು ಮೊಬೈಲ್ ವಾಹನಗಳು ಸಂಚಾರ ಮಾಡಲಿವೆ.

ಭಾರತ್​ ಅಕ್ಕಿ ವಿತರಣೆಗೆ ಯಡಿಯೂರಪ್ಪ ಚಾಲನೆ

ಕೇವಲ ಮೊಬೈಲ್ ವಾಹನಗಳಲ್ಲದೆ, ರಿಲಯನ್ಸ್ ಮಾರ್ಟ್, ಫ್ಲಿಪ್ ಕಾರ್ಡ್, ಬ್ಲಿಂಕಿಟ್ ಸೇರಿದಂತೆ ಅನೇಕ ಆನ್‌ಲೈನ್ ಶಾಪಿಂಗ್ ಆ್ಯಪ್‌ಗಳಲ್ಲೂ ಭಾರತ್ ಅಕ್ಕಿ 29 ರೂಪಾಯಿಗೆ ಸಿಗಲಿದೆ.‌ ಅಕ್ಕಿ ಖರೀದಿಸುವವರು ತಮ್ಮ ಮೊಬೈಲ್‌ ನಂಬರ್‌ ರಿಜಿಸ್ಟರ್ ಮಾಡಿಸಿ ಅಕ್ಕಿಯನ್ನ ಪಡೆಯಬಹುದು. ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿಯನ್ನ ನೀಡಲಾಗುವುದು. ಕಡಿಮೆ ದರದಲ್ಲಿ ಅಕ್ಕಿ ಸಿಗ್ತಿರೋದು ಉಪಯುಕ್ತ ಎನ್ನುತ್ತಿದ್ದಾರೆ ಜನ.

ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಡಾಲರ್ಸ್ ಕಾಲೋನಿಯಲ್ಲಿ ಅಕ್ಕಿ ವಿತರಣೆಗೆ ಚಾಲನೆ ನೀಡಿದರು. ಕಡಿಮೆ ಬೆಲೆಯಲ್ಲಿ 10 ಕೆ.ಜಿ ಅಕ್ಕಿ ಸಿಗ್ತಿರೋದು ಜನರಿಗೆ ಸಂತಸ ತಂದಿದೆ. ನೀವು ಕೂಡ ನಿಮ್ಮ ಹತ್ತಿರದ ರಿಲಯನ್ಸ್ ಮಾರ್ಟ್ ಅಥವಾ ನಾಫೆಟ್‌ನಲ್ಲಿ ಅಕ್ಕಿಯನ್ನು ನೇರವಾಗಿ ಖರೀದಿ ಮಾಡಬಹುದು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *