ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಸೆ. 19: ಚಿತ್ರದುರ್ಗದ ರೇಣುಕಾಸ್ವಾಮಿಯವರನ್ನು ಕೂಲೆ ಮಾಡಿದ ಅರೋಪಿಗೆ ಗಲ್ಲು ಶಿಕ್ಷೆ ವಿಧಿಸುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಗಲ್ಲು ವಿಧಿಸುವ ವಿಧೇಯಕವನ್ನು ಶಿಫಾರಸ್ಸು ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಎ.ಎ.ಪಿಯ ಮಾಜಿ ಜಿಲ್ಲಾ ಅಧ್ಯಕ್ಷರಾದ
ಹೆಚ್.ಎಂ.ಫಾರೂಕ್ ಅಜ್ಜತ್ ಅಲಿ ಮಾಡಿದ ಮನವಿ ಸಲ್ಲಿಸಿದ್ದಾರೆ.
ಈ ಬಗ್ಗೆ ಹೇಳಿಕೆಯನ್ನು ನೀಡಿರುವ ಅವರು, ಚಿತ್ರದುರ್ಗದ ರೇಣುಕಾಸ್ವಾಮಿ ಇವರ ಕೊಲೆ ಸಂಬಂಧ ದಿನಾಂಕ:08-06-2024 ರಂದು ಚಿತ್ರನಟ ದರ್ಶನ್ ಇವರು ರೇಣುಕಾಸ್ವಾಮಿ ಇವರನ್ನು ಚಿತ್ರದುರ್ಗದಿಂದ ರಾಘವೇಂದ್ರ ಎಂಬುವವರಿಗೆ ಸಂಪರ್ಕಿಸಿ ಕರೆದುಕೊಂಡು ಬರುವಂತೆ ಸೂಚಿಸಿ, ಯಾವುದೇ ವಿಷಯವನ್ನು ರೇಣುಕಾಸ್ವಾಮಿ ಇವರಿಗೆ ಎಲ್ಲಿ, ಏಕೆ ಎಂದು ಹೇಳದೇ ಸುಳ್ಳು ಹೇಳಿ ಕಿಡ್ನಾಪ್ ಮಾಡಿ ಬೆಂಗಳೂರಿನ ಅಜ್ಞಾತ ಸ್ಥಳದಲ್ಲಿ ಕೂಡಿಹಾಕೊಂಡು 13 ಜನ ಸೇರಿ ತುಂಬಾ ಬರ್ಬರ ರೀತಿಯಲ್ಲಿ ಹಲ್ಲೆ ಗೈದಿರುತ್ತಾರೆ. ಇದು ಮಾನವ
ಕುಲಕ್ಕೆ ತುಂಬಾ ಆಘಾತಕಾರಿ ವಿಷಯವಾಗಿರುತ್ತದೆ.
ನಮ್ಮ ಕರ್ನಾಟಕ ರಾಜ್ಯದಲ್ಲಿ ಈ ರೀತಿ ಹಾಡುಹಗಲೇ ನಿರ್ಭಯವಾಗಿ ಯಾರ ಭಯವು ಇಲ್ಲದೇ ಕೊಲೆ ಮಾಡುತ್ತಾರೆ ಎಂದರೆ ಇವರ
ಹಣಬಲ, ರಾಜಕೀಯ ಬಲ, ಅಧಿಕಾರಿಗಳ ಬಲ ಹೆಚ್ಚಾದಂತೆ ಕಾಣುತ್ತದೆ. ಮೇಲಾಗಿ ಕಾನೂನಿನ ಬಗ್ಗೆ ಭಯವೇ ಇಲ್ಲದಂತಾಗಿ ಇಂತಹ
ಘಟನೆಗಳು ಮರುಕಳಿಸುತ್ತಲೆ ಬಂದಿರುತ್ತವೆ. ಈ ಪ್ರಕರಣವನ್ನು ರಾಜ್ಯ ಸರ್ಕಾರವು ತುಂಬಾ ಗಂಭೀರವಾಗಿ ಪರಿಗಣಿಸಿ, ಪೊಲೀಸ್
ಇಲಾಖೆಗೆ ಕಠಿಣ ಕ್ರಮಕ್ಕೆ ಮುಖ್ಯಮಂತ್ರಿಗಳು ನಿರ್ದೇಶನ ನೀಡಿರುವುದು ಸ್ವಾಗತಾರ್ಹ.
ತಾವು ಈ ಪ್ರಕರಣವನ್ನು ಇಲ್ಲಿಗೆ ಕೈಬಿಡದಂತೆ ವಿಧಾನಸಭೆಯಲ್ಲಿ ವಿಶೇಷ ಅಧಿವೇಶನವನ್ನು ಕರೆದು ಚರ್ಚೆ ಮಾಡಿ, ಕೇಂದ್ರ ಸರ್ಕಾರಕ್ಕೆ
ಗಲ್ಲು ವಿಧಿಸುವ ವಿಧೇಯಕವನ್ನು ಶಿಫಾರಸ್ಸು ಮಾಡಿ, ಇಂತಹ ಘಟನೆಗಳು ಮರುಕಳಿಸದಂತೆ ಹಾಗೂ ಕಾನೂನು ಜಾರಿಗೆ ಬಂದರೆ
ರಾಜ್ಯದಲ್ಲಿ ಕೊಲೆ, ಅತ್ಯಾಚಾರಗಳು, ಅನೈತಿಕ ಸಂಬಂಧ, ಅಕ್ರಮ ಚಟುವಟಿಕೆಗಳು ನಡೆಯದಂತೆ ಬಿಗಿಗೊಳಿಸಿದಂತಾಗುತ್ತದೆ ಈ
ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕೆಂದು ಹೆಚ್.ಎಂ.ಫಾರೂಕ್ ಅಜ್ಜತ್ ಅಲಿ ಮನವಿ ಮಾಡಿದ್ದಾರೆ.
ನನ್ನ ಮನವಿಗೆ ಸರ್ಕಾರ ಸ್ಪಂದಿಸಿದ್ದು, ಮನವಿಯನ್ನು ಸರ್ಕಾರದ ಅಧೀನ ಕಾರ್ಯದರ್ಶಿಯವರು ಕ್ರಮಕ್ಕಾಗಿ ಮಹಾ ನಿರ್ದೇಶಕರು ಮತ್ತು
ಪೋಲಿಸ್ ಮಹಾ ನಿರೀಕ್ಷಕರಿಗೆ ಕಳುಹಿಸಿದ್ದಾರೆ ಎಂದು ತಿಳಿಸಿದ್ದಾರೆ.