ಮಾಹಿತಿ ಕೃಪೆ :
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ, (ಜ.25): ಭಾರತದ 74ನೇ ಗಣರಾಜ್ಯೋತ್ಸದ ಹಿನ್ನಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಜಿಲ್ಲೆಯ 14 ಜನರಿಗೆ ಜಿಲ್ಲಾಡಳಿತದ ವತಿಯಿಂದ ಸನ್ಮಾನಿಸಲಾಗುತ್ತಿದೆ.
ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಗುರುವಾರ ಮುರುಘಾರಾಜೇಂದ್ರ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವ ಧ್ವಜಾರೋಹಣ ತರುವಾಯ ಸಾಧಕರನ್ನು ಸನ್ಮಾನಿಸಲಿದ್ದಾರೆ.
ಕ್ರೀಡಾಪುಟುಗಳಾದ ಪ್ರಜಾ.ಸಿ.ಎಸ್, ಸದ್ದಾಂ ಹುಸೇನ್, ವೈಶಾಲಿ, ಗುರುರಾಜ್.ಪಿ., ಛಾಯಾಶ್ರೀ.ಎನ್.ಎಂ., ಲಿಖಿತ್.ಎಂ.ಸಿ, ಪ್ಯಾರಾ ಅಥ್ಲೆಟಿಕ್ಸ್ ರಾಧ.ವಿ, ಕೃಷಿ ಹಾಗೂ ತೋಟಗಾರಿಕೆಯಲ್ಲಿ ಸಾಧನೆ ಮಾಡಿದ ಡಾ.ಹೆಚ್.ಏಕಾಂತಯ್ಯ, ಡಾ.ಎಸ್.ಸಿ.ವೀರಭದ್ರಪ್ಪ, ಸೇವಾದಳ ಬೆಳೆವಣಿಯಲ್ಲಿ ಪ್ರಮುಖ ಪಾತ್ರವಹಿಸಿದ ದೈಹಿಕ ಶಿಕ್ಷಕರಾದ ಟಿ.ಲೋಕೇಶ್ವರ, ಮೆಹಬೂಬಿ, ಗ್ರಾಮ ಒನ್ ಯೋಜಯಡಿ ಸರ್ಕಾರದ ಯೋಜನೆಗಳನ್ನು ನಾಗರಿಕರಿಗೆ ತಲುಪಿಸಲು ಶ್ರಮಿಸಿದ ಇಸ್ಮಾಯಿಲ್, ಶಿವರಾಜ್, ಹುಸೇನ್ ಅವರನ್ನು ಉಪವಿಭಾಗಾಧಿಕಾರಿಗಳ ನೇತೃತ್ವದ ಆಯ್ಕೆ ಸಮಿತಿ ಸನ್ಮಾನಕ್ಕೆ ಆಯ್ಕೆ ಮಾಡಿದೆ.
The post ಗಣರಾಜ್ಯೋತ್ಸವ ದಿನಾಚರಣೆ : ಚಿತ್ರದುರ್ಗ ಜಿಲ್ಲೆಯ 14 ಜನ ಸಾಧಕರಿಗೆ ಸನ್ಮಾನ first appeared on Kannada News | suddione.
from ಚಿತ್ರದುರ್ಗ – Kannada News | suddione https://ift.tt/v3V1zOB
via IFTTT