
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಡಿ. 30 : ನಗರದಲ್ಲಿ ಜೋರು ಸದ್ದು ಮಾಡುವ ಬೈಕ್‍ಗಳಿಗೆ ಕಡಿವಾಣ ಜೊತೆಗೆ ಗಾಂಜಾ ವ್ಯಸನಮುಕ್ತವನ್ನಾಗಿಸಲು ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಜಿಲ್ಲಾಡಳಿತ ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ವೇದಿಕೆವತಿಯಿಂದ ಸೋಮವಾರ ಮನವಿಯನ್ನು ಸಲ್ಲಿಸಲಾಯಿತು.
ಇತ್ತೀಚೆಗೆ ಯುವಪೀಳಿಗೆ ಬೈಕ್‍ಗಳ ಸೈಲೆನ್ಸರ್ ತೆಗೆಸಿ ಹೆಚ್ಚು ಅದರಲ್ಲೂ ಕರ್ಕಶ ಶಬ್ಧ ಮಾಡಿಕೊಂಡು ಬೈಕ್ ಚಲಾಯಿಸುತ್ತಿದ್ದಾರೆ.
ಕೆಲವರು ಹಾರನ್‍ಗಳನ್ನು ಕೂಡ ಕರ್ಕಶ ಶಬ್ದ ಮಾಡಿಕೊಂಡಿದ್ದಾರೆ.ವ ಶಾಲಾ-ಕಾಲೇಜ್ ಸೇರಿ ಜನಸಂದಣಿ ಪ್ರದೇಶದಲ್ಲಿ ದಿಢೀರನೆ
ಕರ್ಕಶ ಶಬ್ದ ಮಾಡಿಕೊಂಡು ಸಾಗುವ ಬೈಕ್‍ಗಳು ಎದೆಯನ್ನೇ ಝಲ್ ಎನಿಸುತ್ತವೆ. ಇದಕ್ಕೆ ಕಡಿವಾಣ ಹಾಕಲು ಗ್ಯಾರೇಜ್
ಮೆಕಾನಿಕ್‍ಗಳ ಸಭೆ ಕರೆದು, ಇಂತಹ ವ್ಯವಸ್ಥೆ ಮಾಡಿಕೊಡದಂತೆ ಕಟ್ಟಪ್ಪಣೆ ಮಾಡಬೇಕು. ಜೊತೆಗೆ ಅಲ್ಲಲ್ಲಿ ಗಸ್ತು ಪೊಲೀಸರು
ಇಂತಹ ಬೈಕ್‍ಗಳನ್ನು ವಶಕ್ಕೆ ಪಡೆದು, ಯುಪೀಳಿಗೆ ಬುದ್ಧಿ ಹೇಳಬೇಕು. ಜೊತೆಗೆ ಅವರ ಕುಟುಂಬದವರಿಗೆ ಮಾಹಿತಿ ನೀಡಬೇಕು.
ಸಾಧ್ಯವಾದರೆ ಅಂತಹವರಿಗೆ ದಂಡದ ಜೊತೆಗೆ ಚಾಲನ ಪರವಾನಗಿ ರದ್ದುಗೊಳಿಸಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬಹಳಷ್ಟು ಮಂದಿ ಮಕ್ಕಳನ್ನು ಬೈಕ್‍ಲ್ಲಿ ಕೂರಿಸಿಕೊಂಡು ನಿಧಾನವಾಗಿ ಸಾಗುತ್ತಿದ್ದ ಸಂದರ್ಭದಲ್ಲಿ ದಿಢೀರನೆ ಇಂತಹ ಬೈಕ್ ಪಕ್ಕದಲ್ಲಿ
ಕರ್ಕಶ ಶಬ್ದ ಮಾಡಿಕೊಂಡು ಸಾಗುವುದು ಅವಘಡಕ್ಕೆ ಕಾರಣವಾಗುತ್ತದೆ. ಮಕ್ಕಳು ಭಯಭೀತಿಗೆ ಒಳಗಾಗುತ್ತಿದ್ದಾರೆ. ಇನ್ನೂ
ವಯೋವೃದ್ಧರ ಪಾಡು ಹೇಳತೀರದು. ಇದರ ಜೊತೆಗೆ ಚಿತ್ರದುರ್ಗ ಜಿಲ್ಲೆಯಲ್ಲಿ ಗಾಂಜಾ ವ್ಯಸನಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂಬ
ಸುದ್ದಿ ಆತಂಕ ಹುಟ್ಟಿಸಿದೆ. ಈಗಾಗಲೇ ಪೊಲೀಸ್ ಇಲಾಖೆ ಈ ಕುರಿತು ಜಾಗೃತಿ ಮೂಡಿಸುತ್ತಿದ್ದರೂ, ಕಳ್ಳ ಮಾರ್ಗದಲ್ಲಿ ಗಾಂಜಾ
ಸೇವನೆ ನಡೆಯುತ್ತಿದೆ ಎಂಬ ಸುದ್ದಿ ಭಯ ಹುಟ್ಟಿಸುತ್ತಿದೆ.ಆದ್ದರಿಂದ ಗಾಂಜಾ ವ್ಯಸನಿಗಳನ್ನು ವಶಕ್ಕೆ ಪಡೆದು ಅವರಿಗೆ
ಆಪ್ತಸಮಾಲೋಚನೆ ಜೊತೆಗೆ ಸಮಗ್ರ ತನಿಖೆ ಮಾಡಿದರೆ ಚೈನ್‍ಲಿಂಕ್ ಮಾದರಿ ದಂಧೆ ಬೆಳಕಿಗೆ ಬರಬಹುದು ಎಂದು ತಿಳಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಕರ್ಕಶ ಶಬ್ಧ ಮಾಡುವ ಬೈಕ್ ಹಾವಳಿಗೆ ಯುವಪೀಳಿಗೆ ಹೆಚ್ಚು ಆಕರ್ಷಣೆಗೊಂಡು ಸ್ವಯಂ ಸಂಕಷ್ಟಕ್ಕೆ
ಸಿಲುಕುತ್ತಿದೆ. ಅನೇಕರು ಶಾಲಾ-ಕಾಲೇಜ್‍ಗಳಿಗೆ ಚಕ್ಕರ್ ಹೊಡೆದು ಇಂತಹ ರೈಡಿಂಗ್ ಮಾಡುತ್ತಿದ್ದಾರೆ. ಆದ್ದರಿಂದ ಯುವ
ಪೀಳಿಗೆಯ ಹಿತದೃಷ್ಠಿಯಿಂದ ಹಾಗೂ ರಸ್ತೆಯಲ್ಲಿ ಸಮಾಧಾನವಾಗಿ ಸಾಗುವ ಸಾರ್ವಜನಿಕರ ಹಿತದೃಷ್ಟಿಯಿಂದ ಸದ್ದು ಮಾಡುವ
ಬೈಕ್‍ಗಳ ಚಾಲನೆಗೆ ಕಡಿವಾಣ ಹಾಕಬೇಕು ಎಂದು ಜಿಲ್ಲಾಡಳಿತ ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳಲ್ಲಿ ವಿನಂತಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮಾಹಿತಿ ಹಕ್ಕು ಬಳಕೆದಾರರಾದ ವೇದಮೂರ್ತಿ, ಎಂ.ಬೀಮಸಮುದ್ರ, ಜ್ಯೋತಿ ಲಕ್ಷ್ಮೀ, ವಿನೋದಮ್ಮ
ಎಂ.ರಾಮಪ್ಪ ಭಾಗವಹಿಸಿದ್ದರು.