ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ಜಯದೇವ ಹೃದಯ ಘಟಕ ಮತ್ತು ಕಿದ್ವಾಯಿ ಕ್ಯಾನ್ಸರ್ ಘಟಕ ಸ್ಥಾಪನೆಗೆ ಮನವಿ.

ಚಿತ್ರದುರ್ಗ ಆ. 31

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್


ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಜಯದೇವ ಹೃದಯ ಆಸ್ಪತ್ರೆಯ ಘಟಕ ಮತ್ತು ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ಘಟಕವನ್ನು ಸ್ಥಾಪಿಸಲು ಕ್ರಮಕ್ಕೆಗೊಳ್ಳವಂತೆ ಮನವಿಯನ್ನು ವೈದ್ಯಕೀಯ ಶಿಕ್ಷಣ ಇಲಾಖೆಯ  ಪ್ರಧಾನ ಕಾರ್ಯದರ್ಶಿಗಳಾದ ಮೊಹಮ್ಮದ್ ಮೊಹ್ಸಿನ್‍ರ್ ಮತ್ತು ಫಿಸ್ಕಲ್ ರೀಫಾರ್ಮಸ್ ಕಾರ್ಯದರ್ಶಿ ಡಾ. ವಿಶಾಲ್ ಆರ್ ರವರಿಗೆ ಮನವಿಯನ್ನು ಸಲ್ಲಿಸಲಾಯಿತು. 


2023ರಲ್ಲಿ ಸರ್ಕಾರದ ಆದೇಶದಂತೆ ಚಿತ್ರದುರ್ಗ ನಗರದಲ್ಲಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯನ್ನು ಪ್ರಾರಂಭಿಸಿ ಪ್ರಸ್ತುತ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯನ್ನು ಬೋಧನಾ ಅಸ್ಪತ್ರೆಯಾಗಿ ಪರಿವರ್ತಿಸಲು ಪ್ರಕ್ರಿಯೆ ಆರಂಭಿಸಿವೆ ಮತ್ತು ಶೀಘ್ರವಾಗಿ ವೈದ್ಯರುಗಳನ್ನು ನೇಮಕಾತಿ ಮಾಡಿ, ಸದರಿ ವೈದ್ಯರ ಸೇವೆಯೊಂದಿಗೆ ಈ ಜಿಲ್ಲೆಯ ಜನತೆಗೆ ಉತ್ತಮ ಗುಣಮಟ್ಟದ ಸೇವೆಯನ್ನು ನೀಡಲಾಗುತ್ತಿದ್ದು ಸದರಿ ಜಿಲ್ಲಾ ಆಸ್ಪತ್ರೆಗೆ ಹೃದಯ ಸಂಬಂಧಿ ರೋಗಿಗಳು ಹಾಗೂ ಕ್ಯಾನ್ಸರ್ ರೋಗಿಗಳು ತಪಾಸಣೆಗಾಗಿ ಬರುತ್ತಿದ್ದು, ಚಿತ್ರದುರ್ಗ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಚಿತ್ರದುರ್ಗ ಸಂಸ್ಥೆಯಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ಘಟಕ ಹಾಗೂ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ಘಟಕವನ್ನು ಸ್ಥಾಪಿಸಲು ಕ್ರಮಕೈಗೊಳ್ಳಲು ಮನವಿ ಮಾಡಲಾಯಿತು.


ಸದರಿ ಸಮುದಾಯಗಳನ್ನು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಆರ್ಥಿಕವಾಗಿ ಬಹಳ ಹಿಂದುಳಿದಿದ್ದಾರೆ. ಈ ಸಮುದಾಯದ ಜನರಿಗೆ ಹೃದಯ ಸಂಬಂಧಿ ಕಾಯಿಲೆಗಳಿಗೆ ಹಾಗೂ ಕ್ಯಾನ್ಸರ್ ಕಾಯಿಲೆಗಳಿಗೆ ಚಿಕಿತ್ಸೆಯನ್ನು ನೀಡಬೇಕಾಗಿರುವುದು ಅನಿವಾರ್ಯವಾಗಿರುತ್ತದೆ. ಈ ಚಿತ್ರದುರ್ಗ ನಗರದಿಂದ ಪ್ರತಿ ದಿನ ಹೆಚ್ಚಿನ ಚಿಕಿತ್ಸೆಯನ್ನು ಪಡೆಯಲು ಬೆಂಗಳೂರು, ಮಂಗಳೂರು, ದಾವಣಗೆರೆ, ಉಡುಪಿ, ಮಣಿವಾಲ ಮುಂತಾದ ಸ್ಥಳಗಳಿಗೆ ಶಸ್ತ್ರಚಿಕಿತ್ಸೆ. ಕಿಮೋ ಥೆರಪಿ, ರೇಡಿಯೋ ಥೆರಪಿ ಮುಂತಾದ ಸೌಲಭ್ಯಗಳನ್ನು ಪಡೆಯಲು ಹೋಗುತ್ತಿರುವುದು ನಮ್ಮ ಗಮನಕ್ಕೆ ಬಂದಿರುತ್ತದೆ.

ಪ್ರತಿ ತಿಂಗಳು ಕನಿಷ್ಠ 150 ರಿಂದ 200 ಹೃದ್ರೋಗ ಚಿಕಿತ್ಸೆಗಾಗಿ ಹಾಗೂ ಕ್ಯಾನ್ಸರ್ ಸಂಬಂಧ ಚಿಕಿತ್ಸೆಗಾಗಿ ತೆರಳುತ್ತಿರುವುದು ನಮ್ಮ ಗಮನಕ್ಕೆ ಬಂದಿರುತ್ತದೆ. ಆದ್ದರಿಂದ ಚಿತ್ರದುರ್ಗ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಗೆ ಸಂಬಂಧಪಟ್ಟಂತೆ ಅಒಅಖI ಬೋಧಕ ಆಸ್ಪತ್ರೆ (ಜಿಲ್ಲಾ ಆಸ್ಪತ್ರೆ) ಚಿತ್ರದುರ್ಗದಲ್ಲಿ ಜಯದೇವ ಹೃದ್ರೋಗ ಘಟಕವನ್ನು ತೆರೆಯಲು ಆಗತ್ಯ ಕ್ರಮಕೈಗೊಳ್ಳಲು ಕೋರಿದ್ದು ಇದಕ್ಕೆ ಜಿಲ್ಲಾ ಆಸ್ಪತ್ರೆ ಚಿತ್ರದುರ್ಗದಲ್ಲಿ ಸ್ಥಳಾವಕಾಶವೂ ಲಭ್ಯವಿರುತ್ತದೆ ಎಂದು ತಿಳಿಸಲಾಯಿತು. 


ಈ ಸಂದರ್ಭದಲ್ಲಿ ಡಾ. ಸಿ. ಶಿವಲಿಂಗಪ್ಪ ಮೀರಾಸಾಬಿಹಳ್ಳಿ.,ಪ್ರೊ. ಸಿ. ವೀರಣ್ಣ.   ಡಾ. ಜಿ. ಎನ್. ಮಲ್ಲಿಕಾರ್ಜುನಪ್ಪ ಪ್ರೊ. ಎಂ. ಶಿವಲಿಂಗಪ್ಪ.  ಡಾ. ದೊಡ್ಡಮಲ್ಲಯ್ಯ.  ಪ್ರೊ. ವೀರನಾಯಕ.  ಪ್ರೊ. ಜಿ. ಬಸವರಾಜು. ಕಸವನಹಳ್ಳಿ ರಮೇಶ್ ಉಪಸ್ಥಿತರಿದ್ದರು.

Views: 22

Leave a Reply

Your email address will not be published. Required fields are marked *