ಗಣರಾಜ್ಯೋತ್ಸವದ ಆಹ್ವಾನಪತ್ರಿಕೆಯಲ್ಲಿ ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಕ್ರೀಡಾಂಗಣ ಎಂದು ನಮೂದಿಸುವಂತೆ ಮನವಿ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಜ. 24 : ಗಣರಾಜ್ಯೋತ್ಸವದ ಆಹ್ವಾನಪತ್ರಿಕೆಯಲ್ಲಿ ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಕ್ರೀಡಾಂಗಣ ಎಂದು ನಮೂದಿಸುವಂತೆ ನಾಗರಿಕರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.

ಚಿತ್ರದುರ್ಗ ನಗರದ ಚಳ್ಳಕೆರೆ ಟೋಲ್‍ಗೇಟ್ ಬಳಿ ಇರುವ ಕ್ರೀಡಾಂಗಣವು ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ
ಮಹಾಸ್ವಾಮಿಗಳ ಹೆಸರಿನಲ್ಲಿ ದಿನಾಂಕ: 06-09-1962 ರಲ್ಲಿ ಮೈಸೂರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಕರ್ನಾಟಕರತ್ನ
ದಿವಂಗತ ಎಸ್ ನಿಜಲಿಂಗಪ್ಪ ನವರ ಅಮೃತಹಸ್ತದಿಂದ ಕ್ರೀಡಾಂಗಣವು ಉದ್ಘಾಟಿಸಲ್ಪಟ್ಟಿದೆ. ಅಂದಿನಿಂದ ಈ ಕ್ರೀಡಾಂಗಣದ
ಹೆಸರನ್ನು ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಕ್ರೀಡಾಂಗಣವೆಂದು ಕರೆಯಲ್ಪಡುತ್ತಿದೆ. ಅಲ್ಲಿ ನಡೆಯುವ
ಕಾರ್ಯಕ್ರಮಗಳ ಆಹ್ವಾನಪತ್ರಿಕೆಯಲ್ಲೂ ಸಹ ಇದೇ ಹೆಸರು ನಮೂದಿಸಲಾಗಿದೆ. ಆದರೆ ದಿನಾಂಕ: 26-01-2025 ರಂದು
ನಡೆಯಲಿರುವ ಗಣರಾಜ್ಯೋತ್ಸವದ ಆಹ್ವಾನಪತ್ರಿಕೆಯಲ್ಲಿ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನ ಎಂದು ನಮೂದಿಸಿ
ಸ್ವಾಮೀಜಿಗಳ ಹೆಸರನ್ನು ಬಿಟ್ಟಿರುವುದು ಖಂಡನೀಯ ಮತ್ತು ಇದು ತ್ರಿವಿದ ದಾಸೋಹಿಗಳಾದ ಶ್ರೀ ಜಗದ್ಗುರು ಜಯದೇವ
ಮುರುಘರಾಜೇಂದ್ರ ಮಹಾಸ್ವಾಮಿಜೀಗಳ ಭಕ್ತರಿಗೆ ನೋವುಂಟು ಮಾಡಿದೆ. ತಕ್ಷಣ ಈಗ ಮುದ್ರಿಸಿರುವ ಆಹ್ವಾನಪತ್ರಿಕೆಯನ್ನು
ಹಿಂಪಡೆದು ಶ್ರೀಗಳ ಹೆಸರನ್ನು ಮುದ್ರಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಜೀತೇಂದ್ರ.ಎನ್, ಮಂಜುನಾಥ್.ಎ.ಬಿ, ರುದ್ರೇಶ್.ವಿ.ಹೆಚ್.ಪಿ, ಅಭಿಲಾಶ್, ಯರಿಸ್ವಾಮಿ, ಛಲವಾಧಿ ತಿಪ್ಪೇಸ್ವಾಮಿ
ಇನ್ನು ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *