ಚಿತ್ರದುರ್ಗ, ಅಕ್ಟೋಬರ್. 23 : ನಗರದ ಜೆಸಿಆರ್ ಬಡಾವಣೆ ನಿವಾಸಿ, ನಿವೃತ್ತ ಸಹಾಯಕ ಕೃಷಿ ಅಧಿಕಾರಿ ಎಸ್. ಹನುಮಂತ ರಾಯ ರೆಡ್ಡಿ (79 ವರ್ಷ) ಅವರು ಅನಾರೋಗ್ಯದಿಂದ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ಬೆಳಿಗ್ಗೆ ನಿಧನರಾದರು.
ಮೃತರು ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ವರ್ಗದವರನ್ನು ಅಗಲಿದ್ದಾರೆ.
ಅವರ ಪಾರ್ಥೀವ ಶರೀರ ಇಂದು ಸಂಜೆ ಚಿತ್ರದುರ್ಗಕ್ಕೆ ಬರಲಿದ್ದು ನಾಳೆ ಬೆಳಿಗ್ಗೆ 11 : 30 ರವರೆಗೂ ನಗರದ ಜೆಸಿಆರ್ ಬಡಾವಣೆಯ 6 ನೇ ಕ್ರಾಸ್ ನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಂತ್ಯಕ್ರಿಯೆಯನ್ನು ನಾಳೆ(ಅಕ್ಟೋಬರ್. 23) ಮಧ್ಯಾಹ್ನ 3 ಗಂಟೆಗೆ ಅವರ ಸ್ವಗ್ರಾಮವಾದ ಚಳ್ಳಕೆರೆ ತಾಲೂಕಿನ ಪಿ. ಮಹದೇವಪುರದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
Views: 0