Rinku Singh: ಒಂದೇ ಓವರ್​​ನಲ್ಲಿ 5 ಸಿಕ್ಸರ್: ರಿಂಕು ಸಿಂಗ್ ಸಿಡಿಸಿದ ಒಂದೊಂದು ಸಿಕ್ಸ್ ಹೇಗಿತ್ತು ನೋಡಿ

Rinku Singh: ಒಂದೇ ಓವರ್​​ನಲ್ಲಿ 5 ಸಿಕ್ಸರ್: ರಿಂಕು ಸಿಂಗ್ ಸಿಡಿಸಿದ ಒಂದೊಂದು ಸಿಕ್ಸ್ ಹೇಗಿತ್ತು ನೋಡಿ
Rinku Singh 5 Sixes

ಇಂಡಿಯನ್ ಪ್ರೀಮಿಯರ್ ಲೀಗ್ (IPL 2023) 16ನೇ ಆವೃತ್ತಿಯಲ್ಲಿ ಭಾನುವಾರ ನಡೆದ ಗುಜರಾತ್ ಟೈಟಾನ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ (GT vs KKR) ತಂಡಗಳ ನಡುವಣ ಕಾದಾಟ ರೋಚಕ ಕ್ಷಣಕ್ಕೆ ಸಾಕ್ಷಿಯಾಯಿತು. ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್ ಯಾರೂ ಊಹಿಸದ ರೀತಿಯಲ್ಲಿ ಗೆದ್ದು ಬೀಗಿತು. ಕೊನೆಯ ಓವರ್ ವರೆಗೂ ಜಿಟಿ ಪರವಾಗಿದ್ದ ಜಯ 20ನೇ ಓವರ್ ಮುಗಿದಾಗ ಕೆಕೆಆರ್ ಪಾಲಾಯಿತು. ಸಂಪೂರ್ಣ ಪಂದ್ಯದ ಚಿತ್ರಣವನ್ನೇ ಬದಲಾಯಿಸಿದ್ದು 25 ವರ್ಷ ಪ್ರಾಯದ ಬ್ಯಾಟರ್ ರಿಂಕು ಸಿಂಗ್ (Rinku Singh).

ಗುಜರಾತ್ ನೀಡಿದ್ದ 205 ರನ್​ಗಳ ಕಠಿಣ ಟಾರ್ಗೆಟ್ ಬೆನ್ನಟ್ಟಿದ ಕೋಲ್ಕತ್ತಾ ಹೇಳಿಕೊಳ್ಳುವಂತಹ ಆರಂಭ ಪಡೆದುಕೊಳ್ಳಲಿಲ್ಲ. ಓಪನರ್​ಗಳಾದ ಎನ್. ಜಗದೀಸನ್ 6 ಹಾಗೂ ರೆಹಮಾನುಲ್ಲ ಗುರ್ಬಜ್ 15 ರನ್​ಗೆ ಔಟಾದರು. ಈ ಸಂದರ್ಭ ಜೊತೆಯಾದ ವೆಂಕಟೇಶ್ ಅಯ್ಯರ್ ಹಾಗೂ ನಾಯಕ ನಿತೀಶ್ ರಾಣ ಭರ್ಜರಿ ಆಟ ಆಡಿದರು. ವೆಂಕಿ ಸ್ಫೋಟಕ ಬ್ಯಾಟಿಂಗ್ ನಡೆಸಿದರೆ ರಾಣ ಇವರಿಗೆ ಸಾಥ್ ನೀಡಿ ಶತಕದ ಜೊತೆಯಾಟ ಆಡಿದರು. ರಾಣ 29 ಎಸೆತಗಳಲ್ಲಿ 4 ಫೋರ್, 3 ಸಿಕ್ಸರ್​ನೊಂದಿಗೆ 45 ರನ್ ಬಾರಿಸಿದರೆ, ಅಯ್ಯರ್ 40 ಎಸೆತಗಳಲ್ಲಿ 8 ಫೋರ್, 5 ಸಿಕ್ಸರ್​ ಮೂಲಕ 83 ರನ್ ಸಿಡಿಸಿದರು. ಆಂಡ್ರೆ ರಸೆಲ್ 1 ಹಾಗೂ ಸುನಿಲ್ ನರೈನ್, ಶಾರ್ದೂಲ್ ಠಾಕೂರ್ ಸೊನ್ನೆ ಸುತ್ತಿದರು.

IPL 2023: LSG ವಿರುದ್ಧದ ಪಂದ್ಯಕ್ಕೆ RCB ತಂಡದ ಇಬ್ಬರು ಆಟಗಾರರು ಅಲಭ್ಯ..?

ಒಂದೇ ಓವರ್​ನಲ್ಲಿ 5 ಸಿಕ್ಸರ್:

16.3 ಓವರ್ ಆಗುವಾಗ ಕೆಕೆಆರ್ 7 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿ ಸೋಲಿನ ಸುಳಿಯಲ್ಲಿತ್ತು. ರಿಂಕಿ ಸಿಂಗ್ ಹೋರಾಟ ನಡೆಸಿ ಕೊನೆಯ ಓವರ್​ನ 6 ಎಸೆತದಲ್ಲಿ ಗೆಲುವಿಗೆ 29 ರನ್ ಬೇಕಾಗುವಂತೆ ಮಾಡಿದರು. ಇಲ್ಲಿ ಕೆಕೆಆರ್​ಗೆ ಗೆಲುವು ಅಸಾಧ್ಯ ಎಂದೇ ನಂಬಲಾಗುತ್ತು. ಆದರೆ, 20ನೇ ಯಶ್ ದಯಾಳ್ ಓವರ್​ನ ಮೊದಲ ಬಾಲ್​ಗೆ ಉಮೇಶ್​ ಯಾದವ್​ ಒಂದು ರನ್​ ತೆಗೆದು ರಿಂಕುಗೆ ಕ್ರೀಸ್ ಬಿಟ್ಟು​ ಕೊಟ್ಟರು. 5 ಬಾಲ್​ನಲ್ಲಿ ಗೆಲುವಿಗೆ 28 ರನ್​ ಅವಶ್ಯಕತೆ ಇತ್ತು. ಆದರೆ ಮಿಕ್ಕ ಐದೂ ಎಸೆತವನ್ನೂ ರಿಂಕು ಸಿಕ್ಸರ್​ಗಟ್ಟಿ ನೈಟ್‌ರೈಡರ್ಸ್‌ಗೆ 3 ವಿಕೆಟ್​ಗಳ ಅವಿಸ್ಮರಣೀಯ ಗೆಲುವು ತಂದುಕೊಟ್ಟರು. ಇಲ್ಲಿದೆ ನೋಡಿ ವಿಡಿಯೋ.

 

ಕೇವಲ 21 ಎಸೆತಗಳಲ್ಲಿ 1 ಫೋರ್ ಹಾಗೂ 6 ಸಿಕ್ಸರ್ ಮೂಲಕ ರಿಂಕು ಅಜೇಯ 48 ರನ್ ಚಚ್ಚಿದರು. ಪಂದ್ಯಶ್ರೇಷ್ಠ ಪ್ರಶಸ್ತಿ ಕೂಡ ಬಾಚಿಕೊಂಡರು. ಐಪಿಎಲ್‌ನಲ್ಲಿ ಓವರೊಂದರಲ್ಲಿ ಐದು ಸಿಕ್ಸ್​ ಬಾರಿಸಿದ ದಾಖಲೆಯ ಸಾಲಿಗೆ ರಿಂಕು ಸೇರಿಕೊಂಡರು. ಯಶ್ ದಯಾಳ್ 4 ಓವರ್​ ಮಾಡಿ 69 ರನ್​ ಬಿಟ್ಟು ಕೊಟ್ಟು ಐಪಿಎಲ್​ನ ಎರಡನೇ ಅತಿ ದುಬಾರಿ ಬೌಲರ್​ ಆದರು. ಕೊನೆಯ ಓವರ್​ನಲ್ಲಿ ಅತಿ ಹೆಚ್ಚು ರನ್​ (29) ಚೇಸ್​ ಮಾಡಿದ ತಂಡ ಎಂಬ ಖ್ಯಾತಿಗೆ ಕೂಡ ಕೆಕೆಆರ್​ ಪಾತ್ರವಾಯಿತು.

ಇದಕ್ಕೂ ಮುನ್ನ ಗುಜರಾತ್‌ ಟೈಟನ್ಸ್‌ಗೆ ಆರಂಭಿಕರಾದ ವೃದ್ಧಿಮಾನ್‌ ಸಾಹ (17) ಹಾಗೂ ಶುಭಮನ್ ಗಿಲ್‌ (39) ಉತ್ತಮ ಆರಂಭ ಒದಗಿಸಿಕೊಟ್ಟರು. ಅಭಿನವ್‌ ಮನೋಹರ್‌(14) ನಿರಾಸೆ ಮೂಡಿಸಿದರೆ ಸಾಯಿ ಸುದರ್ಶನ್‌ 38 ಎಸೆತಗಳಲ್ಲಿ 3 ಫೋರ್, 2 ಸಿಕ್ಸರ್​ ಸಿಡಿಸಿ 53 ರನ್‌ ಬಾರಿಸಿದರು. ವಿಜಯ್‌ ಶಂಕರ್‌ ಕೇವಲ 24 ಎಸೆತಗಳಲ್ಲಿ 4 ಫೋರ್, 5 ಸಿಕ್ಸರ್ ಸಿಡಿಸಿ ಅಜೇಯ 63 ರನ್ ಗಳಿಸಿ ತಂಡದ ಮೊತ್ತ 200ರ ಗಡಿ ದಾಟಲು ನೆರವಾದರು. ಜಿಟಿ 20 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 204 ರನ್ ಕಲೆಹಾಕಿತು. ಕೆಕೆಆರ್‌ ಪರ ಸುನೀಲ್‌ ನರೈನ್‌ 3 ವಿಕೆಟ್‌ ಪಡೆದರು.

ರಶೀದ್ ಖಾನ್ ಹ್ಯಾಟ್ರಿಕ್ ವಿಕೆಟ್:

ಒಂದು ಹಂತದಲ್ಲಿ ಸುಭದ್ರ ಸ್ಥಿತಿಯಲ್ಲಿದ್ದ ಕೆಕೆಆರ್‌ ಕೇವಲ 1 ರನ್‌ಗಳ ಅಂತರದಲ್ಲಿ ನಾಲ್ಕು ಪ್ರಮುಖ ವಿಕೆಟ್‌ ಕಳೆದುಕೊಂಡಿತು. ಆಂಡ್ರೆ ರಸೆಲ್(1), ಸುನಿಲ್ ನರೈನ್ (0), ಶಾರ್ದೂಲ್ ಠಾಕೂರ್ (0) ರಶೀದ್ ಖಾನ್​ಗೆ ಬಲಿಯಾದರು. ರಶೀದ್ ಖಾನ್​ 17ನೇ ಓವರ್​ನಲ್ಲಿ ಹ್ಯಾಟ್ರಿಕ್​ ವಿಕೆಟ್​ ಸಾಧನೆ ಮಾಡಿದರು. ಇದು ರಶೀದ್ ಖಾನ್ ಅವರ ಮೊದಲ ಐಪಿಎಲ್ ಹ್ಯಾಟ್ರಿಕ್ ವಿಕೆಟ್. ಈ ಮೂಲಕ ಈ ಸಾಧನೆ ಮಾಡಿದ ಮೊದಲ ಅಫ್ಘಾನಿಸ್ತಾನ್ ಬೌಲರ್ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಟಿ20 ಕ್ರಿಕೆಟ್​ನಲ್ಲಿ ಅತೀ ಹೆಚ್ಚು ಹ್ಯಾಟ್ರಿಕ್ ವಿಕೆಟ್ ಪಡೆದ ವಿಶ್ವ ದಾಖಲೆಯನ್ನು ಕೂಡ ನಿರ್ಮಿಸಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/kolkata-knight-riders-rinku-singh-slammed-five-consecutive-sixes-in-gt-vs-kkr-match-watch-viral-video-vb-au48-552791.html

Leave a Reply

Your email address will not be published. Required fields are marked *