Rock Prediction: ಬೆಟ್ಟದಲ್ಲಿ ತೂಗಾಡುವ ಬಂಡೆ: ಚಿತ್ರದುರ್ಗದಲ್ಲೊಂದು ಪವಾಡ!

ಚಿತ್ರದುರ್ಗ ನವೆಂಬರ್ 21: ಪ್ರಕೃತಿ ಸಾಕಷ್ಟು ರಹಸ್ಯಗಳ ದೊಡ್ಡ ತಾಣ. ಬಗೆದಷ್ಟು ಅಪೂರ್ವ ಸಂಗತಿಗಳು ಇಲ್ಲಿ ಕಾಣಸಿಗುತ್ತವೆ. ಇಂತಹ ದೃಶ್ಯಗಳು ನಮ್ಮನ್ನು ಚಕಿತಗೊಳಿಸುತ್ತವೆ. ನಮ್ಮ ಇಂತಹ ಸುಂದರ ಪರಿಸರದಲ್ಲಿ ಸಾಕಷ್ಟು ಅಪೂರ್ವ ಅದ್ಭುತಗಳು ಇವೆ. ನಿಸರ್ಗ ನಿರ್ಮಿತ ಇಂತಹ ಅದ್ಭುತಗಳು ನಮ್ಮನ್ನು ತನ್ಮಯರನ್ನಾಗಿಸುತ್ತವೆ. ಅಂತಹದ್ದೇ ಕೆಲ ಸುಂದರ ತಾಣಗಳು ಇರುವ ಜಿಲ್ಲೆ ಕರ್ನಾಟಕದ ಚಿತ್ರದುರ್ಗ. ಇಲ್ಲಿ ಅಲುಗಾಡುವ ಬಂಡೆಯೊಂದು ಇದ್ದು ಸಾಕಷ್ಟು ವಿಸ್ಮಯಕಾರಿಯಾಗಿದೆ. ಹಾಗಾದರೆ ಆ ಬಂಡೆ ಯಾವುದು? ಎಲ್ಲಿದೆ ಈ ಬಂಡೆ? ಏನಿದರ ವಿಶೇಷತೆ ಎಲ್ಲವನ್ನೂ ತಿಳಿಯೋಣ.

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಲೋಕದೊಳಲು ಊರು ಗ್ರಾಮದ ದೊಡ್ಡಹೊಟ್ಟೆ ರಂಗನಾಥ ಸ್ವಾಮಿ ಬೆಟ್ಟದಲ್ಲಿ ಒಂದು ವಿಸ್ಮಯ ನಡೆಯುತ್ತದೆ. ದೊಡ್ಡಹೊಟ್ಟೆ ರಂಗನಾಥ ಸ್ವಾಮಿ ಬೆಟ್ಟದಲ್ಲಿರುವ ಬಂಡೆಯೊಂದು ಅಲುಗಾಡುತ್ತದೆ. ಈ ಬಂಡೆ ಅಲುಗಾಡುವ ದೃಶ್ಯ ತುಂಬಾ ಸ್ಪಷ್ಟವಾಗಿ ಕಾಣಿಸುತ್ತದೆ. ಇದನ್ನು ರಂಗನಾಥ ಸ್ವಾಮಿಯ ಸಂದೇಶ ಎಂದು ಇಲ್ಲಿನ ಜನ ನಂಬುತ್ತಾರೆ.

ತಮ್ಮ ಬೇಡಿಕೆಗಳನ್ನು ರಂಗನಾಥಸ್ವಾಮಿ ಈಡೇರಿಸುತ್ತಾನಾ ಎನ್ನುವುದನ್ನು ಈ ಬಂಡೆ ಮೂಲಕ ತಿಳಿಯಲಾಗುತ್ತದೆ. ಹಾಗಾದರೆ ಬಂಡೆ ಯಾವಾಗಾ ಅಲುಗಾಡುತ್ತದೆ? ಈ ಬಂಡೆ ಅಲುಗಾಡುವುದರ ಅರ್ಥವೇನು? ಈ ಬಂಡೆ ಹೇಳುವ ಭವಿಷ್ಯ ನಿಜವಾಗುತ್ತಾ? ಎಲ್ಲವನ್ನೂ ಈಗ ತಿಳಿಯೋಣ.

ಬಂಡೆಯ ವಿಶೇಷತೆ ಏನು…?

ಹೊಳಲ್ಕೆರೆಯ ದೊಡ್ಡಹೊಟ್ಟೆ ರಂಗನಾಥ ಸ್ವಾಮಿ ಬೆಟ್ಟದಲ್ಲಿರುವ ಈ ಬಂಡೆ ನೋಡಲು ಸ್ವಲ್ಪ ಬಸವನ ಆಕಾರದಲ್ಲಿ ಇದೆ. ಈ ಬಂಡೆ ಎಲ್ಲಾ ಸಮಯದಲ್ಲೂ ಅಲುಗಾಡುವುದಿಲ್ಲ. ಹಾಗೊಮ್ಮೆ ಅಲುಗಾಡಿದರೂ ಅದಕ್ಕೊಂದು ಅರ್ಥವಿರುತ್ತದೆ ಎಂದು ಇಲ್ಲಿ ಜನ ಭಾವಿಸುತ್ತಾರೆ. ಬಂಡೆ ಬಳಿ ಬಂದು ಬೇಡಿಕೆಯನ್ನಿಟ್ಟರೆ ಆ ಬಂಡೆ ಆ ಬೇಡಿಕೆ ಪೂರ್ಣವಾಗುವ ಸಂದೇಶವನ್ನು ಅಲುಗಾಡುವ ಮೂಲಕ ನೀಡುತ್ತದೆ. ಈ ಸಂದೇಶವನ್ನು ಸಾಕ್ಷಾತ್ ರಂಗನಾಥ ಸ್ವಾಮಿಯೇ ನೀಡಿದ್ದಾನೆ ಎಂದು ಇಲ್ಲಿನ ಜನ ನಂಬುತ್ತಾರೆ. ಹಾಗಾದರೆ ಬಂಡೆ ಯಾವಾಗ ಅಲುಗಾಡುತ್ತದೆ?

ಮೂರು ಸಣ್ಣ ಸಣ್ಣ ಕಡ್ಡಿಗಳನ್ನು ಇಲ್ಲಿನ ಬಂಡೆ ಹಾಗೂ ನೆಲದ ನಡುವಿನ ಅಂತರದಲ್ಲಿ ಇಡಲಾಗುತ್ತದೆ. ಬಳಿಕ ಎಲೆ, ಅಡಿಕೆ, ತಂಬಿಟ್ಟು, ಬಾಳೆಹಣ್ಣು ಇಟ್ಟು ತೆಂಗಿನ ಕಾಯಿ ಒಡೆದು ಪೂಜೆ ಮಾಡಲಾಗುತ್ತದೆ. ಶ್ರದ್ಧೆ ಹಾಗೂ ಭಕ್ತಿಯಿಂದ ಬೇಡಿಕೊಂಡರೆ ಮಾತ್ರ ಈ ಬಂಡೆ ಅಲುಗಾಡುತ್ತದೆ.

ಬಂಡೆ ಅಲುಗಾಡಿದ ವೇಳೆ ಆ ಸಣ್ಣ ಕಡ್ಡಿಗಳು ಮುರಿದು ಬಿದ್ದರೆ ಬೇಡಿಕೆ ಈಡೇರುವುದಿಲ್ಲ ಎನ್ನುವ ಅರ್ಥ. ಒಂದು ವೇಳೆ ಕಡ್ಡಿಗಳು ಮುರಿಯಲಿಲ್ಲ ಎಂದರೆ ಬೇಡಿಕೆ ಈಡೇರುತ್ತದೆ ಎಂದು ನಂಬಲಾಗುತ್ತದೆ. ಹಾಗಾದರೆ ಈ ಬಂಡೆ ಮುಂದೆ ಜನ ಏನೆಲ್ಲಾ ಬೇಡಿಕೊಳ್ಳುತ್ತಾರೆ?

ಪೂಜೆ ಮಾಡಿ ಶ್ರದ್ಧೆ ಹಾಗೂ ಭಕ್ತಿಯಿಂದ ಬೇಡಿಕೊಂಡರೆ ಮಾತ್ರ ಬೇಡಿಕೆಗಳು ಈಡೇರುತ್ತವೆ. ಮಕ್ಕಳು ಆಗುವ ಯೋಗ ಇದ್ದರೆ ಈ ಬಂಡೆ ತೂಗುತ್ತದೆ. ಮಕ್ಕಳ ಭಾಗ್ಯ ಇದ್ದರೆ ಕಡ್ಡಿಗಳು ಕೂಡ ಮುರಿಯುವುದಿಲ್ಲ. ಈ ಬಂಡೆ ತೂಗಾಡಲು ಶುರು ಮಾಡಿ ಭೂಮಿ ಹಾಗೂ ಬಂಡೆಗೆ ಅಡ್ಡಲಾಗಿ ಇಟ್ಟ ಕಡ್ಡಿಗಳು ಮುರಿದೇ ಹೋದಲ್ಲಿ ಮಕ್ಕಳು ಆಗುವ ಯೋಗ ಇದೆ ಎಂದು ನಂಬಲಾಗುತ್ತದೆ. ನಿಜವಾಗಿದೆ ಬಂಡೆ ಹೇಳಿದ ಭವಿಷ್ಯ ಹೀಗೆ ಬಂಡೆ ಭವಿಷ್ಯ ಕೇಳಿದ ಹಲವಾರು ಮಕ್ಕಳಾಗದ ಜನರಿಗೆ ಮಕ್ಕಳಾಗಿದೆ. ಜೊತೆಗೆ ಬೇಡಿಕೆಗಳು ಈಡೇರಿದೆ. ಹೀಗಾಗಿ ಈ ಬಂಡೆ ತೂಗಾಡುವುದರ ಮೇಲೆ ಜನರಿಗೆ ನಂಬಿಕೆ ಹೆಚ್ಚಾಗಿದೆ. ಅಲ್ಲದೆ ಈ ಬಂಡೆ ಪವಾಡವನ್ನು ಇನ್ನಷ್ಟು ತಿಳಿಯಲು ಜನ ಪರೀಕ್ಷೆಗೂ ಇಳಿದಿದ್ದಾರೆ. ಆದರೆ ಈ ಬಂಡೆ ಯಾಕೆ ಅಲುಗಾಡುತ್ತದೆ? ಇದಕ್ಕೆ ವೈಜ್ಞಾನಿಕ ಕಾರಣಗಳು ಇದಿಯಾ ಎನ್ನುವುದು ಮಾತ್ರ ತಿಳಿದು ಬಂದಿಲ್ಲ.

Source : https://kannada.oneindia.com/news/karnataka/swinging-rock-in-doddahotte-ranganatha-swamy-betta-in-chitradurgas-holalkere-what-is-its-specialty-386347.html

Views: 0

Leave a Reply

Your email address will not be published. Required fields are marked *