Rocking Star Yash : ಟ್ರೆಂಡ್ ಆಯ್ತು ರಾಕಿ KGF ಲುಕ್…ಸಲಾಂ ರಾಕಿಭಾಯ್‌ ಎಂದ ಜಪಾನಿಯರು..!

KGF carze in Japan : ಪ್ರಶಾಂತ್ ನೀಲ್ ನಿರ್ದೇಶನದ KGF ಸರಣಿ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಧೂಳೆಬ್ಬಿಸಿತ್ತು. ಕರ್ನಾಟಕ ಮಾತ್ರವಲ್ಲದೇ ಅಕ್ಕಪಕ್ಕದ ರಾಜ್ಯಗಳು ಹಾಗೂ ವಿದೇಶಗಳಲ್ಲಿಯೂ ಸಿನಿಮಾ ಕ್ರೇಜ್‌ ಹೆಚ್ಚಸಿದೆ. ಇದೀಗ ಜಪಾನ್‌ನಲ್ಲೂ KGF ಹಾವಳಿ ಶುರುವಾಗಿದ್ದು, ಸಲಾಂ ರಾಕಿಭಾಯ್ ಎನ್ನುವ ಹರ್ಷೋದ್ಘಾರ ಮಾಡುತ್ತಿದ್ದಾರೆ. 

 

Rocking Star Yash : ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ, ಪ್ರಶಾಂತ್ ನೀಲ್ ನಿರ್ದೇಶನದಡಿಯಲ್ಲಿ ಮೂಡಿಬಂದ KGF ಸರಣಿ ಸಿನಿಮಾಗಳು ಭರ್ಜರಿ ಸೌಂಡ್‌ ಮಾಡಿದ್ದು ನಮಗೆಲ್ಲ ಗೊತ್ತೇ ಇದೆ. ಇಂದಿಗೂ ಆ ಚಿತ್ರಗಳ ಕ್ರೇಜ್‌ ಕಡಿಮೆಯಾಗಿಲ್ಲ. ಹೌದು ಇದೀಗ ರಾಕಿಬಾಯ್‌ KGF ಸರಣಿ ಸಿನಿಮಾಗಳು ಜಪಾನ್ ದೇಶದಲ್ಲಿ ಮುನ್ನುಗುತ್ತಿವೆ. ಅಲ್ಲಿನ ಪ್ರೇಕ್ಷಕರು ತಮ್ಮದೇ ಸಿನಿಮಾ ಎನ್ನುವಂತೆ ಅಪ್ಪಿಕೊಂಡಿದ್ದಾರೆ. 

ಸಿನಿಮಾ ಚೆನ್ನಾಗಿದ್ದರೆ ಭಾಷೆ..ದೇಶ..ಯಾವುದು ಲೆಕ್ಕಕ್ಕೆ ಬರಲ್ಲ ಅನ್ನೋದಕ್ಕೆ ಜಪಾನ್ ದೇಶದಲ್ಲಿ KGF ಸಿನಿಮಾ ಸದ್ದು ಮಾಡುತ್ತಿರುವುದೇ ಉತ್ತಮ ನಿರ್ದಶನ. ಹೌದು ಜುಲೈ 14ರಂದು ರಾಕಿಬಾಯ್‌ ಸಿನಿಮಾ ತೆರೆಮೇಲೆ ಅಪ್ಪಳಿಸಿ ಅಲ್ಲಿನ ಪ್ರೇಕ್ಷಕರ ಮನಗೆದ್ದಿದೆ. ನಿಧಾನವಾಗಿ ಸಿನಿಮಾ ಹೆಚ್ಚು ಹೆಚ್ಚು ಹೆಚ್ಚು ಜನರನ್ನು ಸೆಳೆದ ಸಿನಿಮಾ, ಸದ್ಯ 2ನೇ ವಾರ ದೇಶದ ಹಲವು ಥಿಯೇಟರ್‌ಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.

ಇನ್ನು ಈ ಸಿನಿಮಾ ಜಪಾನಲ್ಲಿ ಎಷ್ಟರಮಟ್ಟಿಗೆ ಹವಾ ಸೃಷ್ಟಿಸಿದೆ ಅಂದ್ರೆ ಅಲ್ಲಿನ ಪ್ರೇಕ್ಷಕರು ರಾಕಿಬಾಯ್‌ಗೆ ಜೈಕಾರ ಹಾಕುತ್ತಿದ್ದಾರೆ. ರಾಕಿಭಾಯ್ ರೀತಿ ಸೂಟು ಬೂಟು ಧರಿಸಿ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುತ್ತಿದ್ದಾರೆ. ಎಲ್ಲರೂ ಚಿತ್ರದಲ್ಲಿನ ಯಶ್‌ ಲುಕ್‌ ಟ್ರೈ ಮಾಡುತ್ತಿದ್ದಾರೆ. ಜೊತೆಗೆ ರಾಕಿಯ ಆಯುಧ ಸುತ್ತಿಗೆ ಗನ್, ರೋಸ್ ಬೊಕ್ಕೆ ಹಿಡಿದು ಕಾಣಿಸಿಕೊಂಡಿದ್ದಾರೆ.

ಜಪಾನ್ ಮಲ್ಟಿಪ್ಲೆಕ್ಸ್‌ಗಳಲ್ಲಿ ಕನ್ನಡ ಸಿನಿಮಾ ಆರ್ಭಟ ಜೋರಾಗಿದ್ದು, ಸಲಾಂ ರಾಕಿಭಾಯ್ ಸಾಂಗ್ ಈಗ ಜಪಾನಿಯರ ಹಾಟ್‌ ಫೇವರಿಟ್ ಆಗಿಬಿಟ್ಟಿದೆ. ಅಲ್ಲಿ ಸಿನಿಮಾ ನೋಡುವವರ ಸಂಖ್ಯೆ ಕೂಡ ಕಮ್ಮಿ ಇದ್ದರೂ ಸಹ  ಈ ಸಿನಿಮಾ ನೋಡಿದವರೆಲ್ಲಾ ಸಖತ್ ಎಂಜಾಯ್ ಮಾಡಿ ರಾಕಿಬಾಯ್‌ಗೆ ಜೈಕಾರ ಹಾಕುತ್ತಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಈ ಸಿನಿಮಾ ಮತ್ತಷ್ಟು ಕಲೆಕ್ಷನ್ ಮಾಡುವ ಸುಳಿವು ನೀಡಿದೆ. 

Source : https://zeenews.india.com/kannada/entertainment/rocking-star-yash-rocky-kgf-look-has-become-a-trend-the-japanese-say-salaam-rakibhai-148510

Leave a Reply

Your email address will not be published. Required fields are marked *