Skip to content
  • Monday, March 23, 2026
  • ABOUT US
  • CONTACT US
  • PRIVACY POLICY

  • Home
  • Chitradurga
  • National
  • States
  • Cities
  • Business
  • Entertainment
  • Health
  • Sports
  • Tech
  • General Konwledge
  • PRIVACY POLICY
  • Horoscope
  • Home
  • Sports
  • Rohit Sharma: ರೋಹಿತ್ ಶರ್ಮಾಗೆ ಇದುವೇ ಕೊನೆಯ ಚಾನ್ಸ್​..!
Sports

Rohit Sharma: ರೋಹಿತ್ ಶರ್ಮಾಗೆ ಇದುವೇ ಕೊನೆಯ ಚಾನ್ಸ್​..!

June 12, 2023
samagrasuddi

ಹೊಸ ನಾಯಕ...ಹೊಸ ಕೋಚ್...ಹೊಸ ತಂಡವನ್ನು ಕಣಕ್ಕಿಳಿಸಿದರೂ ಟೀಮ್ ಇಂಡಿಯಾದ ಐಸಿಸಿ ಟ್ರೋಫಿ ಗೆಲ್ಲುವ ಕನಸು ಮಾತ್ರ ಈಡೇರಿಲ್ಲ. 2021ರ ಟಿ20 ವಿಶ್ವಕಪ್ ಸೋಲಿನ ಬೆನ್ನಲ್ಲೇ ಟೀಮ್ ಇಂಡಿಯಾಗೆ ಮೇಜರ್ ಸರ್ಜರಿ ಮಾಡಲಾಗಿತ್ತು.ಈ ಮಹತ್ವದ ಬದಲಾವಣೆಯಲ್ಲಿ ನಾಯಕತ್ವದಿಂದ ವಿರಾಟ್ ಕೊಹ್ಲಿಯನ್ನು ಕೆಳಗಿಳಿಸಿ ರೋಹಿತ್ ಶರ್ಮಾಗೆ ಪಟ್ಟ ಕಟ್ಟಲಾಗಿತ್ತು. ಅತ್ತ ರವಿಶಾಸ್ತ್ರಿ ಬದಲಿಗೆ ಹೊಸ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರನ್ನು ನೇಮಿಸಲಾಗಿತ್ತು. 
ಏಷ್ಯಾಕಪ್, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಹಾಗೂ ಏಕದಿನ ವಿಶ್ವಕಪ್​ ಅನ್ನು ಮುಂಗಂಡು ಮಾಡಲಾಗಿದ್ದ ಈ ಬದಲಾವಣೆ ಇದುವರೆಗೆ ಫಲ ಕೊಟ್ಟಿಲ್ಲ. ಏಕೆಂದರೆ ಆಡಿರುವ ಎರಡು ಪ್ರಮುಖ ಟೂರ್ನಿಗಳ ಫಲಿತಾಂಶಗಳು ಹೊರಬಿದ್ದಿದೆ.ಏಷ್ಯಾಕಪ್​ನಲ್ಲಿ ಸೂಪರ್-4 ಹಂತದಿಂದ ಹೊರಬಿದ್ದಿದ್ದ ಭಾರತ ತಂಡವು ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ ಪಂದ್ಯದಲ್ಲಿ ಮುಗ್ಗರಿಸಿದೆ. ಇದರೊಂದಿಗೆ 2013 ರ ಬಳಿಕ ಐಸಿಸಿ ಟ್ರೋಫಿ ಗೆಲ್ಲುವ ಟೀಮ್ ಇಂಡಿಯಾ ಕನಸು ಕೂಡ ಕಮರಿದೆ.
ಇದಾಗ್ಯೂ ಇನ್ನೊಂದು ದೊಡ್ಡ ಕನಸು ಟೀಮ್ ಇಂಡಿಯಾ ಮುಂದಿದೆ. ಅದುವೇ ಏಕದಿನ ವಿಶ್ವಕಪ್. ಅಕ್ಟೋಬರ್-ನವೆಂಬರ್​ನಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್​ನಲ್ಲಿ ಚಾಂಪಿಯನ್​ ಆಗಿ ಹೊರಹೊಮ್ಮುವುದು ಟೀಮ್ ಇಂಡಿಯಾ ಮುಂದಿರುವ ಅತೀ ದೊಡ್ಡ ಸವಾಲು.
ಆದರೆ ಕೇವಲ 4 ತಿಂಗಳುಗಳಲ್ಲಿ ಈ ದೊಡ್ಡ ಸವಾಲಿಗೆ ಸಜ್ಜಾಗುವುದೇ ಅದಕ್ಕಿಂತ ದೊಡ್ಡ ಸವಾಲು ಎನ್ನಬಹುದು. ಏಕೆಂದರೆ ಮುಂಬರುವ ಸರಣಿಗಳ ಮೂಲಕ ಟೀಮ್ ಇಂಡಿಯಾ ಬಲಿಷ್ಠ ತಂಡ ಕಟ್ಟಬೇಕಿದೆ. ಈ ತಂಡವನ್ನು ಯಶಸ್ವಿಯಾಗಿ ರೋಹಿತ್ ಶರ್ಮಾ ಮುನ್ನಡೆಸಬೇಕಿದೆ.ಅಂದರೆ ಏಕದಿನ ವಿಶ್ವಕಪ್​ವರೆಗೂ ರೋಹಿತ್ ಶರ್ಮಾ ನಾಯಕರಾಗಿ ಮುಂದುವರೆಯಲಿದ್ದಾರೆ. ಆದರೆ ಏಕದಿನ ವಿಶ್ವಕಪ್​ನಲ್ಲೂ ಭಾರತ ತಂಡ ಚಾಂಪಿಯನ್​ ಪಟ್ಟ ಅಲಂಕರಿಸಲು ವಿಫಲವಾದರೆ ರೋಹಿತ್ ಶರ್ಮಾ ಹಾಗೂ ರಾಹುಲ್ ದ್ರಾವಿಡ್ ಅವರ ತಲೆದಂಡವಾಗುವುದು ಖಚಿತ.
ಹೀಗಾಗಿ ರೋಹಿತ್ ಶರ್ಮಾ ಹಾಗೂ ರಾಹುಲ್ ದ್ರಾವಿಡ್ ಪಾಲಿಗೆ ಏಕದಿನ ವಿಶ್ವಕಪ್ ಬಹುಮುಖ್ಯ. ಅದರಲ್ಲೂ ನಾಯಕತ್ವದೊಂದಿಗೆ ಇನ್ನೊಂದು ವರ್ಷ ಟೀಮ್ ಇಂಡಿಯಾ ಪರ ಆಡಬೇಕೆಂದರೆ ರೋಹಿತ್ ಶರ್ಮಾ ಏಕದಿನ ವಿಶ್ವಕಪ್ ಗೆಲ್ಲಲೇಬೇಕು. ಹೀಗಾಗಿಯೇ ಮುಂಬರುವ ಏಕದಿನ ವಿಶ್ವಕಪ್ ಹಿಟ್​ಮ್ಯಾನ್ ಪಾಲಿಗೆ ಕೊನೆಯ ಅವಕಾಶ ಎಂದು ವಿಶ್ಲೇಷಿಸಲಾಗುತ್ತಿದೆ.

source https://tv9kannada.com/photo-gallery/cricket-photos/rohit-sharma-eyes-world-cup-2023-glory-for-india-kannada-news-zp-599725.html

Tags: Cricket, samagrasuddi, ಸಮಗ್ರ ಸುದ್ದಿ

Post navigation

ಧೋನಿಯನ್ನು ವಿಶ್ವಕಪ್​ ಹೀರೋ ಮಾಡಿದ್ದು ಆತನ PR ಟೀಮ್: ಗಂಭೀರ್ ಗಂಭೀರ ಆರೋಪ
Virat Kohli vs Babar Azam: ವಿರಾಟ್ ಕೊಹ್ಲಿಗೆ ತಿರುಗೇಟು ನೀಡಿದ ಬಾಬರ್ ಆಝಂ

Leave a Reply Cancel reply

Your email address will not be published. Required fields are marked *

CITIES

Cities

ಕರ್ನಾಟಕ ಹವಾಮಾನ ಎಚ್ಚರಿಕೆ Weather Alert Karnataka Today.

March 22, 2026
samagrasuddi

ಇಂದಿನ ಹವಾಮಾನ ಸ್ಥಿತಿಕರ್ನಾಟಕ ರಾಜ್ಯದಲ್ಲಿ ಇಂದಿನ ಹವಾಮಾನವು ಬಿಸಿಲು ಹಾಗೂ ಮೋಡ ಕವಿದ ವಾತಾವರಣದ ಮಿಶ್ರಣವಾಗಿರಲಿದೆ. ಕೆಲವು ಜಿಲ್ಲೆಗಳಲ್ಲಿ ಮಧ್ಯಾಹ್ನದಿಂದ ಸಂಜೆವರೆಗೆ ಗುಡುಗು-ಮಿಂಚಿನೊಂದಿಗೆ ಮಳೆಯಾಗುವ ಸಾಧ್ಯತೆ ಇದೆ.ತಾಪಮಾನ: ಸುಮಾರು 34°C ರಿಂದ 37°Cಬೆಳಗ್ಗೆ: ಬಿಸಿಲು ಹೆಚ್ಚಾಗಿರುತ್ತದೆಮಧ್ಯಾಹ್ನ/ಸಂಜೆ: ಮೋಡ ಕವಿದು ಮಳೆಯ ಸಾಧ್ಯತೆಮಳೆ…

Cities

ತುರುವೇಕೆರೆಯ ವಿದ್ಯಾರಣ್ಯ”D Ed College”ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಭರ್ಜರಿ ಯಶಸ್ಸು.

March 18, 2026
samagrasuddi
Cities

Karnataka Weather Today: ರಾಜ್ಯದಲ್ಲಿಂದು ಮಳೆಯ ಮುನ್ಸೂಚನೆ, ಹೇಗಿರಲಿದೆ ಹವಾಮಾನ?

March 18, 2026
samagrasuddi
Cities

LPG Helpline Karnataka: ಗ್ಯಾಸ್ ಸಿಲಿಂಡರ್ ಸಮಸ್ಯೆಗೆ ಆಹಾರ ಇಲಾಖೆಯ ಟೋಲ್ ಫ್ರೀ ನಂಬರ್.

March 16, 2026
samagrasuddi
Cities

ಯುಗಾದಿ ಮತ್ತು ರಂಜಾನ್ ಹಬ್ಬದ ಸಂಭ್ರಮ: KSRTCಯಿಂದ 2,000 ವಿಶೇಷ ಬಸ್‌ಗಳ ವ್ಯವಸ್ಥೆ, ಮುಂಗಡ ಟಿಕೆಟ್ ಮೇಲೆ ಭರ್ಜರಿ ರಿಯಾಯಿತಿ!

March 15, 2026
samagrasuddi

You may Missed

Spiritual

Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 8 | ದಿನ 80

March 23, 2026
samagrasuddi
Spiritual

Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 7 | ದಿನ 79

March 22, 2026
samagrasuddi
Spiritual

Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 6 | ದಿನ 78

March 21, 2026
samagrasuddi
Home Spiritual

Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 4.5 | ದಿನ 77

March 20, 2026
samagrasuddi
  • ಹವಾಮಾನ ಬದಲಾವಣೆಯಿಂದ ಕಾಡುತ್ತಿರುವ ಒಣ ಕೆಮ್ಮು: ಕಾರಣ, ಲಕ್ಷಣ ಮತ್ತು ಪರಿಹಾರ.
  • ​Day Special, ಮಾರ್ಚ್ 23: ದೇಶಪ್ರೇಮದ ಕಿಚ್ಚು ಮತ್ತು ಜಾಗತಿಕ ಬದಲಾವಣೆಯ ದಿನ – ಒಂದು ಸಮಗ್ರ ನೋಟ
  • Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 8 | ದಿನ 80
  • Horoscope Today, 23 March ಇಂದು ಈ ರಾಶಿಯವರು ಗೃಹೋಪಯೋಗಿ ವಸ್ತುಗಳ ಖರೀದಿಗಾಗಿ ಹಣ ವ್ಯಯಿಸುವ ಸಾಧ್ಯತೆ ಇದೆ.
  • ಚಿತ್ರದುರ್ಗ: ಮಾ. 23ರಂದು ಉಜ್ಜಯಿನಿ ಮಠದಲ್ಲಿ ಜಗದ್ಗುರು ಶ್ರೀ ಮರುಳಾರಾಧ್ಯ ಶಿವಾಚಾರ್ಯರ 31ನೇ ಪುಣ್ಯ ಸ್ಮರಣೋತ್ಸವ.
Copyright © 2026
CONTACT US
Theme by: Theme Horse
Proudly Powered by: WordPress