RR vs RCB: ನಾಳೆ ಆರ್​ಸಿಬಿ ಪಂದ್ಯ: ಬೆಂಗಳೂರಿಗೆ ಗೆದ್ದರಷ್ಟೇ ಉಳಿಗಾಲ: ಸೋತರೆ?

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮಹತ್ವದ ಘಟ್ಟದತ್ತ ತಲುಪುತ್ತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಾಯಿಂಟ್ ಟೇಬಲ್​ನಲ್ಲಿ ಆರನೇ ಸ್ಥಾನದಲ್ಲಿದೆ. ಆಡಿದ ಹನ್ನೊಂದು ಪಂದ್ಯಗಳ ಪೈಕಿ ಐದರಲ್ಲಿ ಗೆಲುವು ಆರರಲ್ಲಿ ಸೋಲು ಕಂಡು 10 ಅಂಕ ಸಂಪಾದಿಸಿ -0.345 ರನ್​ರೇಟ್ ಹೊಂದಿದೆ.ಪ್ಲೇ ಆಫ್​ಗೇರಲು ಗೆಲ್ಲಲೇ ಬೇಕಾದ ಒತ್ತಡದಲ್ಲಿರುವ ಬೆಂಗಳೂರಿಗೆ ಉಳಿದಿರುವುದು ಕೇವಲ ಮೂರು ಪಂದ್ಯ ಮಾತ್ರ. ಇದರಲ್ಲಿ ಮೇ 14 ಭಾನುವಾರದಂದು ಜೈಪುರದ ಸವಾಯ್ ಮಾನ್​ಸಿಂಗ್ ಸ್ಟೇಡಿಯಂನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕಣಕ್ಕಿಳಿಯಲಿದೆ.ಆರ್​ಆರ್​ ವಿರುದ್ಧದ ಪಂದ್ಯದಕ್ಕೆ ಈಗಾಗಲೇ ಆರ್​ಸಿಬಿ ಪ್ಲೇಯರ್​ಗಳು ಜೈಪುರಕ್ಕೆ ತಲುಪಿದ್ದಾರೆ. ವಿರಾಟ್ ಕೊಹ್ಲಿ, ಫಾಫ್ ಡುಪ್ಲೆಸಿಸ್, ಗ್ಲೆನ್ ಮ್ಯಾಕ್ಸ್​ವೆಲ್ ಸೇರಿದಂತೆ ಆರ್​ಸಿಬಿ ಎಲ್ಲ ಆಟಗಾರರು ಕಠಿಣ ಅಭ್ಯಾಸ ಶುರು ನಡೆಸುತ್ತಿದ್ದಾರೆ.ನಾಳಿನ ಪಂದ್ಯ ಹೈವೋಲ್ಟೇಜ್ ಆಗುವುದು ಖಚಿತ. ಏಕೆಂದರೆ ಪ್ಲೇಆಫ್​ ರೇಸ್​ನಲ್ಲಿರುವ ಎರಡೂ ತಂಡಗಳಿಗೂ ಈ ಪಂದ್ಯದಲ್ಲಿ ಜಯಗಳಿಸಬೇಕಾದ ಅನಿವಾರ್ಯತೆ ಇದೆ. ಅದರಲ್ಲೂ 12 ಅಂಕಗಳನ್ನು ಸಂಪಾದಿಸಿರುವ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮುಂದಿನ ಪಂದ್ಯದಲ್ಲಿ ಸೋಲಿಸಿದರೆ ಆರ್​ಸಿಬಿ ತಂಡದ ಒಟ್ಟು ಪಾಯಿಂಟ್ಸ್ 12 ಆಗಲಿದೆ.ಈ ಮೂಲಕ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರುವ ಅವಕಾಶ ಆರ್​ಸಿಬಿ ತಂಡಕ್ಕೆ ಸಿಗಲಿದೆ. ಅಲ್ಲದೆ ಆರ್​ಸಿಬಿ ಮುಂದಿನ 3 ಪಂದ್ಯಗಳಲ್ಲಿ ಜಯ ಸಾಧಿಸಿದರೆ ಮಾತ್ರ ಪ್ಲೇಆಫ್ ರೇಸ್​ನಲ್ಲಿ ಉಳಿದುಕೊಳ್ಳಬಹುದು. ಇದರ ಜೊತೆಗೆ ಲಖನೌ ಮುಂದಿನ 3 ಪಂದ್ಯಗಳಲ್ಲಿ ಒಂದರಲ್ಲಿ ಸೋತರೆ, ಆರ್​ಸಿಬಿ ತಂಡಕ್ಕೆ ಪ್ಲೇಆಫ್ ಹಂತಕ್ಕೇರಲು ಸುವರ್ಣಾವಕಾಶ ದೊರೆಯಲಿದೆ.ಹೀಗೆ ಕೆಲವು ಲೆಕ್ಕಚಾರಗಳ ಮೂಲಕ ಆರ್​ಸಿಬಿಗೆ ಪ್ಲೇ ಆಫ್ ಪ್ರವೇಶಿಸುವ ಅವಕಾಶ ಇನ್ನೂ ಜೀವಂತವಾಗಿದೆ. ಆದರೆ, ಮುಂದಿನ ಮೂರು ಪಂದ್ಯಗಳಲ್ಲಿ ಬೆಂಗಳೂರು ಯಾವರೀತಿ ಪ್ರದರ್ಶನ ತೋರುತ್ತೆ ಎಂಬುದರ ಮೇಲೆ ಈ ಎಲ್ಲ ಲೆಕ್ಕಚಾರ ನಿಂತಿದೆ. ಇದಕ್ಕಾಗಿ ಫಾಫ್ ಮಾಸ್ಟರ್ ಪ್ಲಾನ್ ರೂಪಿಸುವುದು ಖಚಿತ.ಮೇ. 14 ರಂದು ಆರ್​ಸಿಬಿ ತಂಡ ಆರ್​ಆರ್ ವಿರುದ್ಧ ಆಡಿದರೆ ಬಳಿಕ ಮೇ. 18 ರಂದು ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಕಣಕ್ಕಿಳಿಯಲಿದೆ. ನಂತರ ಮೇ. 21 ರಂದು ಲೀಗ್​ನ ಕೊನೆಯ ಪಂದ್ಯ ಆರ್​ಸಿಬಿ ಆಡಲಿದ್ದು ಗುಜರಾತ್ ಟೈಟಾನ್ಸ್ ಎದುರಾಳಿ ಆಗಿದೆ.

source https://tv9kannada.com/photo-gallery/cricket-photos/rcb-match-tomorrow-against-rajastan-royals-faf-duplessis-team-only-survive-if-they-win-rr-vs-rcb-ipl-2023-vb-577195.html

Leave a Reply

Your email address will not be published. Required fields are marked *