SA vs WI, 2nd T20I: ಒಂದೇ ಪಂದ್ಯದಲ್ಲಿ 7 ವಿಶ್ವ ದಾಖಲೆಗಳು ನಿರ್ಮಾಣ..!

SA vs WI, 2nd T20I: ಸೌತ್ ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ ನಡುವೆ ನಡೆದ 2ನೇ ಟಿ20 ಪಂದ್ಯದಲ್ಲಿ ಬರೋಬ್ಬರಿ 6 ವಿಶ್ವ ದಾಖಲೆಗಳು ನಿರ್ಮಾಣವಾಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡವು 20 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 258 ರನ್​ ಕಲೆಹಾಕಿತ್ತು.ಇದಕ್ಕುತ್ತರವಾಗಿ ಬ್ಯಾಟ್ ಬೀಸಿದ ಸೌತ್ ಆಫ್ರಿಕಾ ತಂಡವು 18.5 ಓವರ್​ನಲ್ಲಿ 4 ವಿಕೆಟ್​ ನಷ್ಟಕ್ಕೆ 259 ರನ್​ಗಳ ಬೃಹತ್ ಗುರಿ ಮುಟ್ಟಿತು. ಈ ಭರ್ಜರಿ ಚೇಸಿಂಗ್ ಗೆಲುವಿನೊಂದಿಗೆ ಹಲವು ವಿಶ್ವ ದಾಖಲೆಗಳಿಗೆ ಈ ಪಂದ್ಯ ಸಾಕ್ಷಿಯಾಯಿತು. ಹಾಗಿದ್ರೆ ಸೌತ್ ಆಫ್ರಿಕಾ-ವೆಸ್ಟ್ ಇಂಡೀಸ್ ನಡುವಣ ಪಂದ್ಯದಲ್ಲಿ ನಿರ್ಮಾಣವಾದ ದಾಖಲೆಗಳಾವುವು ಎಂದು ನೋಡೋಣ...
1- ಟಿ20 ಪಂದ್ಯದಲ್ಲಿ ಅತ್ಯಧಿಕ ರನ್: ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಈ ಪಂದ್ಯದ ಮೂಲಕ ಮೊದಲ ಬಾರಿಗೆ 500 ರನ್​ಗಳು ಮೂಡಿಬಂದಿದೆ. ಅಂದರೆ ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ (258) ಹಾಗೂ ಸೌತ್ ಆಫ್ರಿಕಾ (259) ಜೊತೆಯಾಗಿ ಕಲೆಹಾಕಿರುವುದು ಬರೋಬ್ಬರಿ 517 ರನ್​ಗಳು. ಇದು ಟಿ20 ಕ್ರಿಕೆಟ್​ನ ಹೊಸ ವಿಶ್ವ ದಾಖಲೆ ಎಂಬುದು ವಿಶೇಷ.2- ಅತ್ಯಧಿಕ ಮೊತ್ತದ ಚೇಸ್: ವೆಸ್ಟ್ ಇಂಡೀಸ್ ನೀಡಿದ 259 ರನ್​ಗಳ ಗುರಿಯನ್ನು ಬೆನ್ನತ್ತುವ ಮೂಲಕ ಸೌತ್ ಆಫ್ರಿಕಾ ತಂಡವು ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ಮೊತ್ತ ಚೇಸ್ ಮಾಡಿದ ತಂಡ ಎನಿಸಿಕೊಂಡಿದೆ. 
3- ಬೌಂಡರಿಗಳ ದಾಖಲೆ: ಟಿ20 ಪಂದ್ಯವೊಂದರಲ್ಲಿ ಮೂಡಿಬಂದ ಅತ್ಯಧಿಕ ಬೌಂಡರಿಗಳ ದಾಖಲೆ ಕೂಡ ಈ ಪಂದ್ಯದ ಪಾಲಾಗಿದೆ. ಈ ಪಂದ್ಯದಲ್ಲಿ 46 ಫೋರ್​ಗಳು ಮತ್ತು 35 ಸಿಕ್ಸ್​ಗಳು ಮೂಡಿಬಂದಿವೆ. ಅಂದರೆ ಸೌತ್ ಆಫ್ರಿಕಾ-ವೆಸ್ಟ್ ಇಂಡೀಸ್​ ಪಂದ್ಯದಲ್ಲಿ ಒಟ್ಟು 81 ಬೌಂಡರಿಗಳು ಮೂಡಿಬಂದಿವೆ. ಇದರೊಂದಿಗೆ ಟಿ20 ಪಂದ್ಯವೊಂದರಲ್ಲಿ ಅತಿ ಹೆಚ್ಚು ಬೌಂಡರಿಗಳು ಮೂಡಿಬಂದ ವಿಶೇಷ   ದಾಖಲೆಯೊಂದು ಈ ಪಂದ್ಯದ ಪಾಲಾಗಿದೆ.4- ಅತೀ ಹೆಚ್ಚು ಸಿಕ್ಸರ್​: ಟಿ20 ಪಂದ್ಯವೊಂದರಲ್ಲಿ ಮೂಡಿಬಂದ ಅತ್ಯಧಿಕ ಸಿಕ್ಸ್​ಗಳ ದಾಖಲೆ ಕೂಡ ಈ ಪಂದ್ಯದ ಪಾಲಾಗಿದೆ. ಉಭಯ ತಂಡಗಳ ಬ್ಯಾಟರ್​ಗಳು ಈ ಪಂದ್ಯದಲ್ಲಿ ಒಟ್ಟು 35 ಸಿಕ್ಸ್​ಗಳನ್ನು ಬಾರಿಸಿದ್ದರು.5- ಪವರ್​ಪ್ಲೇ ದಾಖಲೆ: ಪವರ್‌ಪ್ಲೇನಲ್ಲಿ ಅತ್ಯಧಿಕ ರನ್‌ ಕಲೆಹಾಕಿದ ( ಐಸಿಸಿ ಪೂರ್ಣ ಸದಸ್ಯ ರಾಷ್ಟ್ರ) ದಾಖಲೆ ಸೌತ್ ಆಫ್ರಿಕಾ ತಂಡದ ಪಾಲಾಗಿದೆ. ಈ ಪಂದ್ಯದಲ್ಲಿಸ ಸೌತ್ ಆಫ್ರಿಕಾ ಮೊದಲ 6 ಓವರ್​ನಲ್ಲಿ ಬರೋಬ್ಬರಿ 102 ರನ್​ ಬಾರಿಸಿದ್ದರು.6- ವೇಗದ ಶತಕದ ದಾಖಲೆ: ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಬ್ಯಾಟರ್ ಜಾನ್ಸನ್ ಚಾರ್ಲ್ಸ್ ಕೇವಲ 39 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಈ ಮೂಲಕ ಟಿ20 ಕ್ರಿಕೆಟ್​ನಲ್ಲಿ ವಿಂಡೀಸ್ ಪರ ಅತೀ ವೇಗದ ಶತಕ ಬಾರಿಸಿದ ದಾಖಲೆ ನಿರ್ಮಿಸಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಕ್ರಿಸ್ ಗೇಲ್ (47 ಎಸೆತ) ಹೆಸರಿನಲ್ಲಿತ್ತು. ಅಲ್ಲದೆ ಟಿ20 ಕ್ರಿಕೆಟ್​ನಲ್ಲಿ ಸ್ಪೋಟಕ ಶತಕ ಸಿಡಿಸಿದ ವಿಶ್ವದ 6ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.7- ಅತಿ ವೇಗದ ಅರ್ಧಶತಕ: ಪಂದ್ಯದಲ್ಲಿ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಸಿಡಿಸುವ ಮೂಲಕ ಕ್ವಿಂಟನ್ ಡಿಕಾಕ್ ಸೌತ್ ಆಫ್ರಿಕಾ ಪರ ಅತೀ ವೇಗದ ಅರ್ಧಶತಕ ಬಾರಿಸಿದ ದಾಖಲೆಯನ್ನು ಬರೆದರು.

source https://tv9kannada.com/photo-gallery/cricket-photos/sa-vs-wi-2nd-t20i-over-500-runs-scored-record-breaking-match-kannada-news-zp-au50-543997.html

Leave a Reply

Your email address will not be published. Required fields are marked *