Sadhu Kokila: ನಟ ಸಾಧು ಹೆಸರಿಗೆ ʻಕೋಕಿಲʼ ಪದ ಸೇರಿದ್ದು ಹೇಗೆ ಗೊತ್ತಾ?

Kannada Entertainment News: ಸಾಧು ಅವರು ಒಬ್ಬ ಸಂಗೀತ ನಿರ್ದೇಶಕರಾಗಿ  ಸಿನಿಮಾರಂಗಕ್ಕೆ ಬಂದರು. ಸಾಧು ಕೋಕಿಲ ಎಂದೇ ಖ್ಯಾತರಾದ ಇವರಿಗೆ ಈ ಹೆಸರು ಬಂದ ಇಂಟರೆಸ್ಟಿಂಗ್‌ ಕಥೆಯನ್ನು ನಾವು ನಿಮಗೆ ಹೇಳಲಿದ್ದೇವೆ.    

Sadhu Kokila: ಕನ್ನಡದ ಸಂಗೀತ ನಿರ್ದೇಶಕ, ಹಾಸ್ಯ ನಟ ಸಾಧು ಕೋಕಿಲ ಅವರ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಸಾಕಷ್ಟು ಸಿನಿಮಾಗಳಲ್ಲಿ ಹಾಸ್ಯ ನಟನಾಗಿ ಅಭಿನಯಿಸಿ, ಜನರನ್ನು ರಂಜಿಸಿದ್ದಾರೆ. ಇದೀಗ ಸಾಧು ಕೋಕಿಲ ಎಂದೇ ಖ್ಯಾತರಾದ ಇವರಿಗೆ ಈ ಹೆಸರು ಬಂದ ಇಂಟರೆಸ್ಟಿಂಗ್‌ ಕಥೆಯನ್ನು ನಾವು ನಿಮಗೆ ಹೇಳಲಿದ್ದೇವೆ. ಈ ವಿಷಯವನ್ನ ಸ್ವತಃ ಸಾಧು ಆಗಾಗ ಹೇಳುತ್ತಿರುತ್ತಾರೆ.

ಸಾಧು ಅವರು ಒಬ್ಬ ಸಂಗೀತ ನಿರ್ದೇಶಕರಾಗಿ  ಸಿನಿಮಾರಂಗಕ್ಕೆ ಬಂದರು. 1993 ರಲ್ಲಿ “ಶ್” ಸಿನಿಮಾಗೆ ಸಾಧು ಕೋಕಿಲ ಸಂಗೀತ ನಿರ್ದೇಶನ ಮಾಡಿದ್ದರು. ಆ ಸಿನಿಮಾದಿಂದ ಅವರಿಗೆ ಕೋಕಿಲ ಎಂಬ ಪದ ಸಿಕ್ಕಿದ್ದು. ಹೌದು, ಕೋಕಿಲ ಅಂದರೆ ಸಂಗೀತ. ಹೀಗಾಗಿ ಸಾಧು ಅವರಿಗೆ ಸ್ವತಃ ಉಪೇಂದ್ರ ಅವರೇ ಕೋಕಿಲ ಎಂದು ಕರೆದರಂತೆ. ಬಳಿಕ ಇದು ಸಾಧು ಕೋಕಿಲ ಆಯಿತಂತೆ. ಈ ಹೆಸರಿನ ಮೂಲಕವೇ ಸಾಧು ಕೋಕಿಲ ಖ್ಯಾತಿ ಪಡೆದರು. 

ಶ್ ಚಿತ್ರದಲ್ಲಿ ಇನ್ನೂ ಒಂದು ವಿಶೇಷವಿದೆ. ಈ ಸಿನಿಮಾದಲ್ಲಿ ಸಾಧು ಕೋಕಿಲ ಒಂದು ಪುಟ್‌ ರೋಲ್‌ ಮಾಡಿದ್ದಾರೆ. ಈ ಮೂಲಕ ಅವರ ನಟನಾ ವೃತ್ತಿ ಕೂಡ ಶುರುವಾಯಿತು. ಆದರೆ ಸಾಧು ಕೋಕಿಲ ಅನ್ನುವ ಹೆಸರು 2003 ರಲ್ಲಿ ಬದಲಾಯಿತು. 

ಉಪೇಂದ್ರ ನಟನೆಯ ರಕ್ತ ಕಣ್ಣಿರು ಸಿನಿಮಾ ನಿರ್ಮಾಪಕ ಮುನಿರತ್ನ ಅವರು ಮತ್ತೊಮ್ಮೆ ಸಾಧು ಹೆಸರನ್ನು ಬದಲಿಸಿದರಂತೆ. ಸಂಖ್ಯಾಶಾಸ್ತ್ರದ ಪ್ರಕಾರ ಸಾಧು ಕೋಕಿಲ ಅಂತ ಇದ್ರೆ ಸರಿ ಹೊಂದದ ಕಾರಣ, K ಅನ್ನೋದು ಮೊದಲು ಬರಬೇಕು ಎಂದು ಹೇಳಿ ಕೋಕಿಲ ಸಾಧೂ ಎಂದು ಹೆಸರು ಬದಲಿಸಿದರಂತೆ.  

Source : https://zeenews.india.com/kannada/entertainment/entertainment-news-how-did-actor-sadhu-got-the-word-kokila-to-his-name-143509

Leave a Reply

Your email address will not be published. Required fields are marked *