ರಿಲೀಸ್‌ಗೂ ಮುನ್ನ ಅಪರೂಪದ ದಾಖಲೆ ಬರೆದ ‘ಸಲಾರ್’..! ಮೊದಲ ಭಾರತೀಯ ಚಿತ್ರ ಗೌರವ..

Prabhas Salaar movie : ಯಂಗ್ ರೆಬಲ್ ಸ್ಟಾರ್ ಪ್ರಭಾಸ್ ನಟನೆಯ ‘ಕೆಜಿಎಫ್’ ಖ್ಯಾತಿ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಸಿನಿಮಾ ಬಿಡುಗಡೆಗೂ ಮುನ್ನವೇ ಹೊಸ ದಾಖಲೆ ನಿರ್ಮಿಸಿದೆ. ದಿನದಿಂದ ದಿನಕ್ಕೆ ಕುತೂಹಲ ಸೃಷ್ಟಿಸುತ್ತಿರುವ ಈ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚುತ್ತಿದೆ.

Salaar updates : ಪ್ಯಾನ್ ಇಂಡಿಯಾ ಹೀರೋ ಪ್ರಭಾಸ್ ಸದ್ಯ ಸಾಲು ಸಾಲು ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿರುವುದು ಗೊತ್ತೇ ಇದೆ. ಪ್ರಭಾಸ್‌ನಿಂದ ಈ ವರ್ಷ ಬರುತ್ತಿರುವ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ‘ಸಾಲಾರ್’ ಸಹ ಒಂದು. ‘ಕೆಜಿಎಫ್’ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾದ ಮೇಲೆ ಡಾರ್ಲಿಂಗ್‌ ಫ್ಯಾನ್ಸ್‌ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಸಲಾರ್‌ ಟೀಸರ್ ಸಾಮಾಜಿಕ ಜಾಲತಾಣದಲ್ಲಿ ಹೊಸ ದಾಖಲೆ ಸೃಷ್ಟಿಸಿದೆ. ಯೂಟ್ಯೂಬ್‌ನಲ್ಲಿ 100 ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಪಡೆದಿರುವ ಈ ಟೀಸರ್‌ನಿಂದ ಸಿನಿಮಾದ ಮೇಲಿನ ಕುತೂಹಲ ಹೆಚ್ಚಿದೆ. ಇಂತಹ ಘಳಿಗೆಯಲ್ಲಿ ‘ಸಾಲಾರ್’ ಇದೀಗ ಮತ್ತೊಂದು ಸೆನ್ಸೇಷನಲ್ ದಾಖಲೆ ಸೃಷ್ಟಿಸಿದೆ. 

ಹೌದು.. ಸಲಾರ್‌ ಚಲನಚಿತ್ರವನ್ನು ಉತ್ತರ ಅಮೇರಿಕಾದಲ್ಲಿ USA ನ ಪ್ರತ್ಯಂಗಿರಾ ಚಿತ್ರಮಂದಿರದಿಂದ ವಿತರಿಸಲಾಗಿದೆ. ಉತ್ತರ ಅಮೆರಿಕದ ಸ್ಥಳಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ವಿತರಣಾ ಸಂಸ್ಥೆಯಿಂದ ಈ ವಿಷಯ ಬಹಿರಂಗವಾಗಿದೆಯಂತೆ. ತೆಲುಗು ಸಿನಿಮಾವೊಂದು ಉತ್ತರ ಅಮೆರಿಕದ ಎಲ್ಲಾ ಸ್ಥಳಗಳಲ್ಲಿ ಬಿಡುಗಡೆಯಾಗುತ್ತಿರುವುದು ಇದೇ ಮೊದಲು. ಇದುವರೆಗೆ ಯಾವುದೇ ಭಾರತೀಯ ಸಿನಿಮಾ ಇಷ್ಟು ಸ್ಥಳಗಳಲ್ಲಿ ಬಿಡುಗಡೆಯಾಗಿಲ್ಲ. 

ಸೆಪ್ಟೆಂಬರ್ 27 ರಂದು ಈ ಸ್ಥಳಗಳಲ್ಲಿ ‘ಸಲಾರ್’ ಪ್ರೀಮಿಯರ್ ಶೋ ನಡೆಯಲಿದೆ ಎಂದು ವಿತರಣಾ ಕಂಪನಿ ಬಹಿರಂಗಪಡಿಸಿದೆ. ಈ ಸುದ್ದಿ ಹೊರಬೀಳುತ್ತಿದ್ದಂತೆ ಡಾರ್ಲಿಂಗ್ ಅಭಿಮಾನಿಗಳು ಖುಷಿಯಲ್ಲಿದ್ದಾರೆ. ಮೇಲಾಗಿ ‘ಸಲಾರ್’ ಬಿಡುಗಡೆಯಾದ ನಂತರ ವಿಶ್ವದಾದ್ಯಂತ ಬಾಕ್ಸ್ ಆಫೀಸ್ ಬುಡಮೇಲು ಮಾಡೋದು ಗ್ಯಾರಂಟಿ ಎನ್ನುತ್ತಿದ್ದಾರೆ.

ಅಷ್ಟೆ ಅಲ್ಲ ಈ ಚಿತ್ರವು ಸೆಪ್ಟೆಂಬರ್ 28 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಮತ್ತೊಂದೆಡೆ, ಈ ಚಿತ್ರದ ಡಿಜಿಟಲ್ ಹಕ್ಕುಗಳಿಗಾಗಿ ತೀವ್ರ ಪೈಪೋಟಿಯೂ ಇದೆ. ಇತ್ತೀಚೆಗಷ್ಟೇ ‘ಸಲಾರ್’ OTT ಡೀಲ್ ಕ್ಲೋಸ್ ಆಗಿರುವುದಾಗಿ ಸುದ್ದಿಯಾಗಿತ್ತು. ಪ್ರಸಿದ್ಧ OTT ಕಂಪನಿ ಅಮೆಜಾನ್ ಪ್ರೈಮ್ ‘ಸಲಾರ್’ OTT ಹಕ್ಕುಗಳನ್ನು ಪಡೆದುಕೊಂಡಿದೆ ಎಂದು ವರದಿಯಾಗಿದೆ.

ಸಲಾರ್ ಚಿತ್ರವನ್ನು ಹೊಂಬಾಳೆ ಫಿಲಂಸ್ ಬ್ಯಾನರ್ ನಲ್ಲಿ ರು.200 ​​ಕೋಟಿಗೂ ಅಧಿಕ ಬಜೆಟ್ ನಲ್ಲಿ ನಿರ್ಮಾಣ ಮಾಡಲಾಗಿದೆ. ವಿಜಯ್ ಕಿರಂಗದೂರ್ ಈ ಸಿನಿಮಾಗೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಶ್ರುತಿ ಹಾಸನ್, ಹಿರಿಯ ನಟ ಜಗಪತಿ ಬಾಬು ಮತ್ತು ಮಲಯಾಳಂನ ಟಾಪ್ ಹೀರೋ ಪೃಥ್ವಿರಾಜ್ ಸುಕುಮಾರನ್ ಈ ಸಿನಿಮಾದಲ್ಲಿ ನಟಿಸಿದ್ದಾರೆ. ರವಿ ಬಸ್ರೂರು ಸಂಗೀತ ಭುವನ ಗೌಡ ಛಾಯಾಗ್ರಹಣ ಈ ಚಿತ್ರಕ್ಕಿದೆ.

Source : https://zeenews.india.com/kannada/entertainment/prabhas-salaar-movie-creates-record-before-releas-in-usa-146646

Leave a Reply

Your email address will not be published. Required fields are marked *