Prabhas Starrer Salaar Teaser : ಪ್ರಭಾಸ್ – ಪ್ರಶಾಂತ್ ನೀಲ್ ಕಾಂಬಿನೇಷನ್ ನಲ್ಲಿ ಸಲಾರ್ ಸಿನಿಮಾ ತಯಾರಾಗುತ್ತಿದೆ. ಇಂದು ಬೆಳ್ಳಂ ಬೆಳಗ್ಗೆ ಸಲಾರ್ ಟೀಸರ್ ರಿಲೀಸ್ ಆಗಿದೆ.

Salaar Teaser Released: ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅಭಿನಯಿಸುತ್ತಿರುವ ಸಲಾರ್ ಸಿನಿಮಾ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಅದರಲ್ಲೂ ಕೆಜಿಎಫ್ ಡೈರೆಕ್ಟರ್ ಪ್ರಶಾಂತ್ ನೀಲ್ ಕೈಚಳಕ ನೋಡಲು ಸಿನಿಪ್ರಿಯರು ಕಾದು ಕುಳಿತಿದ್ದಾರೆ. ಪ್ರಭಾಸ್ – ಪ್ರಶಾಂತ್ ನೀಲ್ ಕಾಂಬಿನೇಷನ್ ನಲ್ಲಿ ಸಲಾರ್ ಸಿನಿಮಾ ತಯಾರಾಗುತ್ತಿದೆ. ಶ್ರುತಿ ಹಾಸನ್ ನಾಯಕಿಯಾಗಿ ನಟಿಸುತ್ತಿದ್ದು, ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ಸಿನಿಮಾವನ್ನು ಭರ್ಜರಿ ಬಜೆಟ್‌ನಲ್ಲಿ ನಿರ್ಮಿಸುತ್ತಿದ್ದಾರೆ.
ಈ ಸಿನಿಮಾದ ಮತ್ತೊಂದು ವಿಶೇಷ ಅಂದ್ರೆ ಜಗಪತಿ ಬಾಬು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮಲಯಾಳಂನ ಸ್ಟಾರ್ ಹೀರೋ ಪೃಥ್ವಿರಾಜ್ ಸುಕುಮಾರನ್ ವಿಲನ್ ಆಗಿ ಪ್ರಭಾಸ್ ಎದುರು ಕಾಣಿಸಿಕೊಳ್ಳಲಿದ್ದಾರೆ. ಸೆಪ್ಟೆಂಬರ್ 28 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿರುವ ಸಲಾರ್ ಬಗ್ಗೆ ಅಭಿಮಾನಿಗಳು ಬೆಟ್ಟದಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಆದಿಪುರುಷ ಚಿತ್ರ ಪ್ರಭಾಸ್ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದ್ದು ಗೊತ್ತಿರುವ ವಿಚಾರ. ಇದೀಗ ಪ್ರಭಾಸ್ ಅಭಿಮಾನಿಗಳ ಎಲ್ಲ ನಿರೀಕ್ಷೆಗಳೂ ಸಲಾರ್ ಸಿನಿಮಾ ಮೇಲಿದೆ.
ಇಂದು ಸಲಾರ್ ಟೀಸರ್ ರಿಲೀಸ್ ಆಗಿದ್ದು, ಅಭಿಮಾನಿಗಳು ಕಾಯುತ್ತಿದ್ದ ಆ ದಿನ ಬಂದೆ ಬಿಟ್ಟಿದೆ. ಸಿನಿಪ್ರಿಯರ ನಿರೀಕ್ಷೆಯನ್ನು ಪ್ರಶಾಂತ್ ನೀಲ್ ಮತ್ತೊಮ್ಮೆ ಇಮ್ಮಡಿಗೊಳಿಸಿದ್ದಾರೆ. ಸಲಾರ್ ಸಿನಿಮಾ ಟೀಸರ್‌ನಲ್ಲಿ ಪ್ರಭಾಸ್ ಅವರ ಪವರ್ ಫುಲ್ ಲುಕ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ರೌಡಿಗಳ ಗ್ಯಾಂಗ್ ಸುತ್ತುವರೆದು ಶೂಟ್ ಮಾಡಲು ಪ್ರಯತ್ನಿಸುತ್ತಿರುವಾಗ.. ಒಂದು ಡೈಲಾಗ್‌ನೊಂದಿಗೆ ಟೀಸರ್ ಆರಂಭವಾಗುತ್ತದೆ. “ಸಿಂಹ.. ಚಿರತೆ.. ಹುಲಿ.. ಆನೆ.. ತುಂಬಾ ಡೇಂಜರಸ್..” ಎನ್ನುತ್ತಾ ಮಾಸ್ ಡೈಲಾಗ್ ಜೊತೆ ಟೀಸರ್ ಮುಂದುವರೆಯುತ್ತದೆ. ಕೆಜಿಎಫ್ ಶೈಲಿಯಲ್ಲಿ ನಾಯಕ ಪ್ರಭಾಸ್ ಪಾತ್ರವನ್ನು ಪ್ರಶಾಂತ್ ನೀಲ್ ಪವರ್ ಫುಲ್ ಆಗಿ ಡಿಸೈನ್ ಮಾಡಿದ್ದಾರೆ. ಇದು ಪ್ರಭಾಸ್ ಅಭಿಮಾನಿಗಳ ಹೃದಯ ಗೆಲ್ಲುತ್ತಿದೆ.
ಸಲಾರ್ ಟೀಸರ್‌ನ ಕೊನೆಯಲ್ಲಿ ಸಿನಿಮಾ ಎರಡು ಭಾಗಗಳಲ್ಲಿ ಬರುತ್ತಿದೆ. ಭಾಗ 1-ಕದನ ವಿರಾಮ ಎಂದು ಮೇಕರ್‌ಗಳು ಶೀರ್ಷಿಕೆ ನೀಡಿದ್ದಾರೆ. ಟೀಸರ್‌ನಲ್ಲಿ ಪೃಥ್ವಿರಾಜ್ ಸುಕುಮಾರನ್ ಅವರ ಲುಕ್ ಅನ್ನು ಸಹ ತೋರಿಸಲಾಗಿದೆ. ಹಿನ್ನೆಲೆ ಸಂಗೀತವಂತೂ ಮೋಡಿ ಮಾಡುತ್ತಿದೆ.
ಪವರ್ ಫುಲ್ ಫೈಟ್ ನ ದೃಶ್ಯಗಳ ಗ್ಲಿಂಪ್ಸ್‌ನ್ನು ಟೀಸರ್ ನಲ್ಲಿ ತೋರಿಸಲಾಗಿದೆ. ಪ್ರಭಾಸ್ ಗನ್ ಹಿಡಿದು ಗುಂಡು ಹಾರಿಸುತ್ತ ಬರುವ ರೀತಿಯಂತೂ ಅತ್ಯದ್ಭುತ. ಕತ್ತಿ ಹಿಡಿದು ವಿಲನ್ ಗಳ ವಿರುದ್ಧ ಸೆಣಸಾಡುವ ಪ್ರಭಾಸ್ ಮಾಸ್ ಆಕ್ಟಿಂಗ್ ಗೂಸ್‌ಬಂಪ್ಸ್ ಬರಿಸುತ್ತೆ. ನಿರ್ದೇಶಕ ಪ್ರಶಾಂತ್ ನೀಲ್ ನಿರೀಕ್ಷೆಯಂತೆಯೇ ಪ್ರಭಾಸ್‌ಗೆ ಬಿಗ್ ಸಕ್ಸಸ್ ತಂದುಕೊಡಲಿದ್ದಾರೆ ಎನ್ನುವುದು ಈ ಟೀಸರ್ ನೋಡಿದ ಫ್ಯಾನ್ಸ್ ಅಭಿಪ್ರಾಯವಾಗಿದೆ.
ಪ್ರಭಾಸ್ ಮುಷ್ಟಿ ಬಿಗಿದುಕೊಂಡು ನಿಂತರೆ ಅಭಿಮಾನಿಗಳಿಗೆ ಗೂಸ್‌ಬಂಪ್ಸ್ ಬರುವುದು ಖಚಿತ. ತಮ್ಮ ನಿರೀಕ್ಷೆಗೆ ತಕ್ಕಂತೆ ಟೀಸರ್ ಮೂಡಿಬಂದಿರುವುದರಿಂದ ಪ್ರಭಾಸ್ ಫ್ಯಾನ್ಸ್ ಖುಷಿಯಲ್ಲಿ ತೇಲಾಡುತ್ತಿದ್ದಾರೆ. ಬ್ಲಾಕ್ ಬಸ್ಟರ್ ಹಿಟ್ ಆಗುವುದು ಖಚಿತ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಸಲಾರ್ ಟೀಸರ್ ಎಲ್ಲಾ ದಾಖಲೆಗಳನ್ನು ಮುರಿಯುವ ಸಾಧ್ಯತೆ ಇದೆ.