ತಮ್ಮ ಸಿನಿಮಾಗಳನ್ನು ತಾವೇ ನಿರ್ದೇಶಿಸಿಕೊಂಡ ಸ್ಯಾಂಡಲ್‌ವುಡ್‌ ನಟರಿವರು..!

Sandalwood Directors : ಸ್ಯಾಂಡಲ್‌ವುಡ್‌ನ ಹಲವು ಕಲಾವಿದರು ನಟನೆ ಮತ್ತು ನಿರ್ದೇಶನದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ನಟನೆಯ ಜೊತೆಗೆ ತಮ್ಮದೇ ಶೈಲಿಯಲ್ಲಿ ಸಿನಿಮಾ ನಿರ್ದೇಶನ ಮಾಡಿ, ಕನ್ನಡ ಚಿತ್ರರಂಗದಲ್ಲಿ ಜನಪ್ರಿಯವಾಗಿದ್ದಾರೆ. ಜೊತೆಗೆ ಹಲವಾರು ಸೂಪರ್‌ ಹಿಟ್‌ ಸಿನಿಮಾಗಳನ್ನು ನೀಡಿದ್ದಾರೆ.   

Sadalwood Actors : ಕನ್ನಡದಲ್ಲಿ ಇನ್ನೂ ಕೆಲವು ನಟರು ತಮ್ಮ ಸಿನಿಮಾವನ್ನು ತಾವೇ ನಿರ್ದೇಶಿಸಿ ನಟಿಸಿದ್ದಾರೆ. ಅಂತಹ ಪ್ರತಿಭಾನಿವತ ನಟರ ಪಟ್ಟಿ ಇಲ್ಲಿದೆ ನೋಡಿ.

ಕಿಚ್ಚ ಸುದೀಪ್‌ : ಅವರು ಬಹುಮಖ ಹಾಗೂ ಬಹುಭಾಷಾ ನಟ. ಇವರು ಕೇವಲ ನಟ ಮಾತ್ರವಲ್ಲ ಪ್ರತಿಭಾನ್ವಿತ ನಿರ್ದೇಶಕನು ಹೌದು. ಅಭಿನಯ ಚಕ್ರವರ್ತಿ ಎಂದೇ ಕರೆಸಿಕೊಳ್ಳುವ ಕಿಚ್ಚ ನಿರ್ದೇಶನ ಮಾಡಿದ ಮೊದಲ ಸಿನಿಮಾ ಎಂದರೇ ಅದು ಮೈ ಆಟೋಗ್ರಾಫ್.‌ ಕೇವಲ ನಿರ್ದೇಶನ ಅಲ್ಲದೇ ಕಿಚ್ಚ ಕ್ರಿಯೆಷನ್‌ ಅಡಿಯಲ್ಲಿ ಸಿನಿಮಾವನ್ನು ನಿರ್ಮಾಣ ಕೂಡ ಮಾಡಿದ್ದರು. 

ಈ ಸಿನಿಮಾ ಉತ್ತಮ ರೆಸ್ಪಾನ್ಸ್‌ ಪಡೆದುಕೊಂಡಿತ್ತು. ಅಲ್ಲದೇ 175 ದಿನಗಳ ಕಾಲ ಸಿನಿಮಾ ಪ್ರದರ್ಶನ ಕಂಡಿತ್ತು. ಜೊತೆಗೆ ವೀರ ಮದಕರಿ, ಜಸ್ಟ್‌ ಮಾತ್‌ ಮಾತಲ್ಲಿ, ಕೆಂಪೇಗೌಡ ಮತ್ತು ಮಾಣಿಕ್ಯ ಸಿನಿಮಾಗಳನ್ನು ನಿರ್ದೇಶಿ ನಟಿಸಿದ್ದರು.

ಕಾಶೀನಾಥ್‌ : ಚಿತ್ರರಂಗದಲ್ಲಿ ಕಾಶೀನಾಥ್‌ ಅವರು ತಮ್ಮ ನಟನೆ, ನಿರ್ದೇಶನ, ಸಂಗೀತ ನಿರ್ದೇಶನ ಹಾಗೂ ಚಿತ್ರನಿರ್ಮಾಣದಲ್ಲಿ ತಮ್ಮ ಪ್ರತಿಭೆಯನ್ನು ತೋರಿ, ಸ್ಯಾಂಡಲ್‌ವುಡ್‌ನಲ್ಲಿ ವಿಶೇಷ ನಿರ್ದೇಶಕರಾಗಿ ಗುರುತಿಸಿಕೊಂಡವರು. ಇವರ ವಿಭಿನ್ನ ಶೈಲಿಯ ಚಿತ್ರಗಳು ಕನ್ನಡ ಸಿನಿರಂಗದಲ್ಲಿ ಯಶಸ್ಸು ಕಂಡಿವೆ. ಇವರ ಅಡಿಯಲ್ಲಿ ಕಲಿತ ಅನೇಕ ಯುವಕರು ಇಂದು ಚಿತ್ರರಂಗದಲ್ಲಿ ಯಶಸ್ವಿಯಾಗಿದ್ದಾರೆ. 

ಕಾಶೀನಾಥ್‌ ಅವರು ಅನುಭವ ಸಿನಿಮಾವನ್ನು ನಿರ್ದೇಶಿಸುವುದರ ಮೂಲಕ ತಾವೇ ನಟನಾಗಿಯೂ ಕಾಣಿಸಿಕೊಂಡರು. ಈ ಸಿನಮಾ ಯಶಸ್ಸನ್ನು ಕಂಡಿತು. ಇವರು ಹೆಚ್ಚಾಗಿ ಹಾಸ್ಯ ಚಿತ್ರಗಳಿಂದಲೇ ಗುರುತಿಸಿಕೊಂಡವರು.

ಶಂಕರ್‌ನಾಗ್‌ : ವಿಭಿನ್ನವಾಗಿ ನಡೆಯುವ ಶೈಲಿ, ಕಂಚಿನ ಕಂಠ, ಆಕರ್ಷಕ ನೋಟದಿಂದ ಎಲ್ಲರ ಗಮನ ಸೆಳೆದ ನಟ ಶಂಕರ್‌ ನಾಗ್.‌ ಇವರ ಮೊದಲ ನಿರ್ದೇಶನದ ಸಿನಿಮಾ ಮಿಂಚಿನ ಓಟ. ಈ ಸಿನಿಮಾದಲ್ಲಿ ಅನಂತ್‌ನಾಗ್‌ ಹಾಗೂ ಶಂಕರ್‌ನಾಗ್‌ ಇಬ್ಬರು ಮುಖ್ಯ ಪಾತ್ರದಲ್ಲಿ  ನಟಿಸಿದ್ದರು. ಈ ಚಿತ್ರ ಸಾಕಷ್ಟು ಪ್ರಶಸ್ತಿಗಳನ್ನು ಸಹ ಪಡೆಯಿತು. ಸ್ಯಾಂಡಲ್‌ವುಡ್‌ನ ಹಲವು ಕಲಾವಿದರು ನಟನೆ ಮತ್ತು ನಿರ್ದೇಶನದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ.

ಅತ್ಯುತ್ತಮ ನಟನೆಯ ಜೊತೆಗೆ ತಮ್ಮದೇ ಆದ ವಿಭಿನ್ನ ಶೈಲಿಯಲ್ಲಿ ಸಿನಿಮಾವನ್ನು ನಿರ್ದೇಶನ ಮಾಡಿ ಕನ್ನಡ ಚಿತ್ರರಂಗದಲ್ಲಿ ಎಂದು ಅಳಿಸಲಾಗದ ನೆನಪಾಗಿ ಉಳಿದಿದ್ದಾರೆ. ಅಲ್ಲದೇ ತಾವೇ ಸಖತ್‌ ಸೂಪರ್‌ ಹಿಟ್‌ ಸಿನಿಮಾಗಳನ್ನು ಸಿನಿರಸಿಕರಿಗೆ ನೀಡಿದ್ದಾರೆ. 

ರಿಷಭ್‌ ಶೆಟ್ಟಿ: ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ, ನಿರ್ದೇಶಕ ಮತ್ತು ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ರಿಷಭ್‌ ಶೆಟ್ಟಿ ಹಲವಾರು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಇವರು ನಿರ್ದೇಶಿಸಿ ನಟಿಸಿರುವ ಮೊದಲ ಸಿನಿಮಾ ಬೆಲ್‌ ಬಾಟಮ್‌. ಬಳಿಕ ಕಾಂತಾರ ಸಿನಿಮಾಗೆ ಆಕ್ಷನ್‌ ಕಟ್‌ ಹೇಳಿದರು. ಈ ಸಿನಿಮಾ ಭಾರತೀಯ ಸಿನಿರಂಗದಲ್ಲಿ ಹೊಸ ದಾಖಲೆಯನ್ನು ಬರೆದಿದೆ. ಜೊತೆಗೆ ರಿಷಭ್‌ ಅವರು ಫ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಗುರುತಿಸಿಕೊಂಡಿದ್ದಾರೆ. 

Source: https://zeenews.india.com/kannada/entertainment/sandalwood-actors-who-directed-their-own-movies-135262

Leave a Reply

Your email address will not be published. Required fields are marked *