![](https://samagrasuddi.co.in/wp-content/uploads/2025/01/IMG-20250102-WA0036.jpg)
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ, ಜ.02: ಸಂಜು ವೆಡ್ಸ್ ಗೀತಾ-2 ಚಿತ್ರದ ಆಡಿಯೋವನ್ನು ಇಂದು ಚಿತ್ರದುರ್ಗದ ಬಿಗ್‍ಬಾಸ್ ಹೋಟಲ್‍ನಲ್ಲಿ ಬಿಡುಗಡೆ ಮಾಡಲಾಯಿತು.
ಈ ವೇಳೆ ಚಿತ್ರದ ನಟ ಶ್ರೀನಗರ ಕಿಟ್ಟಿ ಮಾತನಾಡಿ, ರೇಷ್ಮೇ ಬೆಳೆಗಾರರ ಸಮಸ್ಯೆಗಳನ್ನು ಕುರಿತು ಚಿತ್ರದಲ್ಲಿ ತೋರಿಸಲಾಗಿದ್ದು,
ಅವರಿಗೆ ರೇಷ್ಮೇ ಬೆಳೆಯಿಂದ ಯಾವ ರೀತಿಯ ಸಮಸ್ಯೆ ಎದುರಾಗುವುದು ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ ಎಂದು ವಿವರಣೆ
ನೀಡಿದರು.
ಇದೇ ಜನವರಿ 10 ರಂದು ಸಂಜುವೆಡ್ಸ್ ಗೀತಾ-2 ಚಿತ್ರ ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. ಚಿತ್ರದುರ್ಗದಲ್ಲಿ ಪ್ರಸನ್ನ
ಥೇಯೇಟರ್‍ಗಳಲ್ಲಿ ಮ್ಯಾಕ್ಸ್, ಹಾಗೂ ವೆಂಕಟೇಶ್ವರ ಚಿತ್ರದಮಂದಿರದಲ್ಲಿ Ui ಚಿತ್ರ ಓಡುತ್ತಿದ್ದು, Ui ಚಿತ್ರದ ನಿರ್ಮಾಪಕರೊಂದಿಗೆ
ಮಾತನಾಡಿರುವುದಾಗಿ ತಿಳಿಸಿದ ಅವರು, ಚಿತ್ರವನ್ನು ನೋಡಿ ಹಾರೈಸಬೇಕು ಎಂದು ಜನರಲ್ಲಿ ಮನವಿ ಮಾಡಿದರು.
ಸಂಜು ವೆಡ್ಸ್ ಗೀತಾ-2 ಚಿತ್ರದ ನಿರ್ಮಾಪಕ ಚಲವಾದಿ ಕುಮಾರ್, ಬಿ. ಕಾಂತರಾಜು ಆಡಿಯೋ ಬಿಡುಗಡೆ ಕಾರ್ಯದಲ್ಲಿ
ಉಪಸ್ಥಿತರಿದ್ದರು.