ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್

ಕಳೆದ ಒಂದು ವರ್ಷಗಳಿಂದ ರಾಜ್ಯ ಸರ್ಕಾರದ ಮಂತ್ರಿಗಳು ಕಟ್ಟಡ ಕಾರ್ಮಿಕರಿಗೆ ಯಾವುದೇ ರೀತಿಯ ಹಣಕಾಸಿನ ಸೌಲಭ್ಯಗಳನ್ನು ನೀಡುವುದರಲ್ಲಿ ವಿಫಲರಾಗಿದ್ದಾರೆ ಮಂಡಳಿಯಲ್ಲಿ ಇರುವ ಹಣವನ್ನು ತಡೆ ಹಿಡಿದು ಒಂದು ವರ್ಷಕ್ಕೆ ಬರುವ ಬಡ್ಡಿಯಿಂದ ಸಂತೋಷ ಲಾರ್ಡ್ ಫೌಂಡೇಶನ್‍ಗೆ ಮಂಡಳಿಯ ಹಣ ಹೋಗುತ್ತಿದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವೈ ಕುಮಾರ್ ಆರೋಪಿಸಿದ್ದಾರೆ.
ಚಿತ್ರದುರ್ಗ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ ಕಾರ್ಮಿಕ ದಿನಾಚರಣೆಯ ಕೇವಲ ಸರ್ಕಾರಿ ಅಧಿಕಾರಿಗಳ ರಜೆಗೆ ಸೀಮಿತವಾಗಿದ್ದು ಯಾವುದೇ ಕಚೇರಿಗಳಲ್ಲಿ ಕಾರ್ಮಿಕ ದಿನಾಚರಣೆಯನ್ನು ಆಚರಿಸುವಲ್ಲಿ ಎಲ್ಲಾ ಇಲಾಖೆಗಳು ಮತ್ತು ರಾಜ್ಯದ ಎಲ್ಲಾ ಅಧಿಕಾರಿಗಳು ವಿಫಲರಾಗಿರುವುದರಿಂದ ಕಾರ್ಮಿಕ ದಿನಾಚರಣೆಗೆ ಅರ್ಥಪೂರ್ಣವಿಲ್ಲದಂತಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗಳಲ್ಲಿ ತಾಲೂಕು ಕಚೇರಿಗಳಲ್ಲಿ ಮೇ ಒಂದನೇ ತಾರೀಕು ಸರ್ಕಾರಿ ಗ್ರಾಮ ಕಾರ್ಯಕ್ರಮದ ಭಾಗವಾಗಿ ಕಾರ್ಮಿಕ ದಿನಾಚರಣೆಯನ್ನು ಮಾಡಲು ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಲಾಯಿತು.
ಕಾರ್ಮಿಕ ದಿನಾಚರಣೆಗಾಗಿ ಸರ್ಕಾರವು ಹಣವನ್ನು ನೀಡುತ್ತಾ ಬಂದಿದ್ದರು ಕೂಡ ಅಧಿಕಾರಿಗಳ ಇಚ್ಛಾಶಕ್ತಿಯಿಂದ ಕಾರ್ಮಿಕರಿಗೆ ಯಾವುದೇ ರೀತಿಯ ಗೌರವ ಸಮರ್ಪಣೆ ಮಾಡುವುದರಲ್ಲಿ ಹಿಂದೆ ಬೀಳಾಗಿದೆ. ಇದರ ಬಗ್ಗೆ ಹಿಂದಿನ ರಾಜ್ಯ ಸರ್ಕಾರಗಳು ವಿಫಲವಾಗಿವೆ ಈ ನಿಟ್ಟಿನಲ್ಲಿ ಈ ಸಭೆಯಲ್ಲಿ ನಾವು ರಾಜ್ಯ ಸರ್ಕಾರಕ್ಕೆ ಎಚ್ಚರಿಸುವುದೇನೆಂದರೆ ಪ್ರತಿವರ್ಷ ಮೇ 1ನೇ ತಾರೀಖು ಕಾರ್ಮಿಕ ಸಂಘಟನೆಗಳ ಮುಖಂಡರನ್ನು ಕರೆದು ನೋಂದಾಯಿತ ಕಟ್ಟಡ ಕಾರ್ಮಿಕರನ್ನು ಅವರ ಅನುಭವದ ಗುರುತಿಸಿ ಅವರಿಗೆ ಸನ್ಮಾನ ಮಾಡುವಂಥದ್ದು ಮತ್ತೆ ಸರ್ಕಾರದಿಂದ ಗೌರವ ಸರ್ವ ಸಮರ್ಪಣೆ ಮಾಡುವಂತಹ ಕೆಲಸವನ್ನು ಸರ್ಕಾರ ಮಾಡಬೇಕಾಗಿರುತ್ತದೆ ಎಂದು ತಿಳಿಸಿದ್ದಾರೆ.
ಒಂದು ವರ್ಷದಿಂದ ಪಿಂಚಿಣಿ ಹಣ ಬಿಡುಗಡೆಯಾಗಿಲ್ಲ ಅಪಘಾತ ಮರಣದ ಹಣ ಬಿಡುಗಡೆಯಾಗಿಲ್ಲ ಮದುವೆ ಸಹಾಯಧನ ಬಿಡುಗಡೆಯಾಗಿಲ್ಲ ಮೆಡಿಕಲ್ ಬಿಲ್ ಬಿಡುಗಡೆಯಾಗಿಲ್ಲ ವಿದ್ಯಾರ್ಥಿ ವೇತನ ಮರೀಚಿಕೆಯಾಗಿದೆ ಇದರ ಬಗ್ಗೆ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದೇವೆ ಇದೇ ರೀತಿ ಮುಂದುವರೆದರೆ ರಾಜ್ಯಾದ್ಯಂತ ಉಗ್ರವಾದ ಪ್ರತಿಭಟನೆಯನ್ನು ನಡೆಸುತ್ತಿವೆ ಬೋಗಸ್ ಕಾರ್ಯಕ್ರಮಗಳ ಹೆಸರಿನಲ್ಲಿ ಹಣನ ಲೂಟಿ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ನಾವು ಎಚ್ಚರಿಕೆ ಗಂಟೆಯನ್ನು ಹೊಡೆಯುತ್ತಿದ್ದೇವೆ ಎಂದು ಕುಮಾರ್ ತಿಳಿಸಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದಿಂದ ಸಭೆಯನ್ನು ನಡೆಸಿ ದಿನಾಂಕ 20.05.2025ರ ಮಂಗಳವಾರ ನಮ್ಮ ಸಂಘದ ವತಿಯಿಂದ ಕಾರ್ಮಿಕ ದಿನಾಚರಣೆಯನ್ನು ಆಚರಿಸಲು ತೀರ್ಮಾನಿಸಲಾಯಿತು ಹಾಗೂ ಕಾರ್ಮಿಕ ದಿನಾಚರಣೆ ಅಂಗವಾಗಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲು ಸಭೆಯು ತೀರ್ಮಾನಿಸಲಾಯಿತು.
ಪತ್ರಿಕಾಗೋಷ್ಠಿ ರಾಜ್ಯ ಉಪಾಧ್ಯಕ್ಷರಾದ ಕೆ ಗೌಸ್‍ಪೀರ್, ರಾಜ್ಯ ಖಜಾಂಚಿ ಡಿ ಈಶ್ವರಪ್ಪ, ಉಪಾಧ್ಯಕ್ಷರು ಗೌಸ್‍ಖಾನ್, ರಾಜ್ಯ ನಿರ್ದೇಶಕರು ಮಾಹಾಂತೇಶ್, ಗೌರವಾಧ್ಯಕ್ಷರು ತಿಮ್ಮಯ್ಯ ಎಂ, ರಾಜ್ಯ ನಿರ್ದೇಶಕರು ಉಮೇಶ್, ಸಂಘದ ಪದಾಧಿಕಾರಿಗಳು ಹಾಗೂ ಮುಖಂಡರು ಹಾಜರಿದ್ದರು.