ಚಿತ್ರದುರ್ಗ|ಮಾನವ ಜನ್ಮ ಪಾವನಗೊಳ್ಳಲು ಸತ್ಸಂಗ ಅಗತ್ಯ: ಶ್ರೀ ಮಾಧವಾನಂದ ಶ್ರೀಗಳು.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಫೆ. 16

ಶಿವನ ಚಿಂತನೆಯನ್ನು ಮಾಡಲು ಭಗವಂತ ನಮಗೆ ಮಾನವ ಜನ್ಮವನ್ನು ನೀಡಿದ್ದಾನೆ, ಸತ್ಸಂಗದಿಂದ ಮಾನವನ ಜನ್ಮ ಪಾವನವಾಗುತ್ತದೆ ಎಂದು ಬಾಗಲಕೋಟೆಯ ಅರಕೆರೆಯ ಶ್ರೀ ಕೌದಿಶ್ವರ ಮಹಾ ಸಂಸ್ಥಾನದ ಶ್ರೀ ಮಾಧವಾನಂದ ಶ್ರೀಗಳು ತಿಳಿಸಿದರು.

ಚಿತ್ರದುರ್ಗ ನಗರದ ಕಬೀರಾನಂದ ನಗರದಲ್ಲಿನ ಶ್ತೀ ಕಬೀರಾನಂದ ಆಶ್ರಮದಲ್ಲಿ ಕಳೆದ ಫೆ. 11 ರಿಂದ ನಡೆಯುತ್ತಿರುವ 96ನೇ ಮಹಾ ಶಿವರಾತ್ರಿ ಮಹೋತ್ಸವದ ಐದನೇ ದಿನವಾದ ಭಾನುವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶ್ರೀಗಳು, ಮಾನವ ಜನ್ಮಕ್ಕೆ ಸತ್ಸಂಗ ಅತಿ ಅವಶ್ಯಕವಾಗಿದೆ. ಸಂತರ ಸಂಘವನ್ನು ಮಾಡುವುದರಿಂದ ನಮ್ಮಲ್ಲಿನ ದುಃಖವನ್ನು ದೂರ ಮಾಡುತ್ತದೆ. ಜ್ಞಾನದ ಉಪದೇಶವನ್ನು ಮಾಡುವುದರ ಮೂಲಕ ಮುಕ್ತಿಯನ್ನು ನೀಡಲಾಗುತ್ತದೆ. ಸತ್ಸಂಗವನ್ನು ಪರಿಚಯವಿದ್ದವರ ಹತ್ತಿರ ಮಾಡಬೇಕು ಇದರಿಂದ ಉತ್ತಮವಾದ ಮಾರ್ಗದರ್ಶನ ಸಿಗುತ್ತದೆ ಇಲ್ಲವಾದಲ್ಲಿ ಬೇರೆ ದಾರಿ ಹಿಡಿಯಬೇಕಾಗುತ್ತದೆ. ಮಾನವ ಜನ್ಮ ಕೂನೆಯದಾಗಿದೆ, ಇಲ್ಲಿ ನಾವುಗಳು ಪಾಪದ ಕೆಲಸಕ್ಕಿಂತ ಪುಣ್ಯದ ಕೆಲಸವನ್ನು ಹೆಚ್ಚಾಗಿ ಮಾಡುವುದರಿಂದ ಮುಕ್ತಿ ಸಿಗುತ್ತದೆ. ನಮಗೆ ಅನೇಕ ಜನ್ಮ ಕಳೆದ ಮೇಲೆ ಮಾನವ ಜನ್ಮ ಸಿಕ್ಕಿದೆ ಇದನ್ನು ಹಾಳು ಮಾಡದೇ ಪರಮಾತ್ಮನ ಧ್ಯಾನವನ್ನು ಮಾಡುವುದರ ಮೂಲಕ ಮುಕ್ತಿಯನ್ನು ಹೊಂದಬೇಕಿದೆ ಎಂದರು.

ಶಿವರಾತ್ರಿ ಮಹೋತ್ಸವದಲ್ಲಿ ಭಾಗವಹಿಸಿ ಇಲ್ಲಿ ಬರುವ ಮಠಾಧೀಶರ ಮಾತುಗಳನ್ನು ಕೇಳುವುದರ ಮೂಲಕ ನಮ್ಮ ಅಂತಕರಣವನ್ನು ಪವಿತ್ರವಾಗಿ ಇಡಬೇಕಿದೆ, ಗುರುಗಳ ಮೊರೆ ಹೋದಲ್ಲಿ ಭಗವಂತ ದರ್ಶನವನ್ನು ಮಾಡಲು ಸಹಾಯವಾಗುತ್ತದೆ. ಶಿವನ ಧಾನ್ಯವನ್ನು ಮಾಡುವುದರ ಮೂಲಕ ಶಿವರಾತ್ರಿಯನ್ನು ಆಚರಣೆ ಮಾಡಬೇಕಿದೆ, ಸತ್ಸಂಗದ ಸಂಘದಿಂದ ಮಾನಸ್ಸಿನಲ್ಲಿನ ಅಜ್ಞಾನ ದೂರವಾಗುವುದು. ಮಹಾತ್ಮರ ದರ್ಶನದಿಂದ ಪಾಪಗಳು ಸಹಾ ದೂರವಾಗಲಿವೆ ಎಂದು ಶ್ರೀ ಮಾಧವಾನಂದ ಶ್ರೀಗಳು ತಿಳಿಸಿದರು.

ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಶ್ರೀಗಳು ಮಾತನಾಡಿ, ಈ ಆಶ್ರಮದಲ್ಲಿ ಜಾತಿ, ಧರ್ಮದವರಿಗಿಂತ ಭಕ್ತಿಯನ್ನು ನಂಬಿದವರು ಹೆಚ್ಚಾಗಿ ಬರುತ್ತಾರೆ, ಈ ಕಾರ್ಯಕ್ರಮದಲ್ಲಿ ಎಲ್ಲರನ್ನು ಸಹಾ ಶಿವ ಚಿಂತನೆಗೆ ಒಳ ಪಡಿಸಲಾಗುತ್ತದೆ. ಮನೆಯಲ್ಲಿ ಮಾಡುವ ಶಿವರಾತ್ರಿಗೂ ಮಠದಲ್ಲಿ ಮಾಡುವ ಶಿವರಾತ್ರಿಗೂ ವ್ಯತ್ಯಾಸ ಇದೆ ಈ ಪುಣ್ಯ ಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಪುಣ್ಯ ಲಭ್ಯವಾಗುತ್ತದೆ. ಭಗವಂತನಲ್ಲಿ ನಮ್ಮ ಸ್ವಾರ್ಥಕ್ಕಾಗಿ ಬೇಡುವ ಬದಲು ಎಲ್ಲರ ಒಳಿತಿಗಾಗಿ ಬೇಡುವು ಉತ್ತಮವಾಗಿದೆ. ಎಲ್ಲರಿಗೂ ಬೇರೆ ಬೇರೆ ರೀತಿಯಾದ ಹಬ್ಬಗಳು ಇದ್ದರೆ ಶಿವನಿಗೆ ಶಿವರಾತ್ರಿ ಮಾತ್ರವಾಗಿದೆ, ಒಳ್ಳೆಯವರ ಸಹವಾಸವನ್ನು ಮಾಡುವುದರಿಂದ ಜೀವನ ಪಾವನವಾಗಲಿದೆ ಎಂದರು.

ಶ್ರೀ ದೇವರಾಜು ಅರಸ್ ವಿದ್ಯಾ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಘುಚಂದನ್ ಮಾತನಾಡಿ, ಕಬೀರಾನಂದಾಶ್ರಮ ಜಾತ್ಯಾತೀತವಾಗಿದೆ ಇಲ್ಲಿಗೆ ಬರುವ ಭಕ್ತರು ಇಂತಹ ಜಾತಿ ಧರ್ಮದವರು ಎಂದು ಇಲ್ಲ ಎಲ್ಲಾ ಜಾತಿ, ದರ್ಮ ಜನಾಂಗ ಸಮುದಾಯವರು ಇಲ್ಲಿಗೆ ಬರುತ್ತಾರೆ ಇದು ಯಾವುದೇ ಜಾತಿಗೆ ಸೀಮಿತವಾದ ಮಠವಲ್ಲ ಇಲ್ಲಿಗೆ ಬರುವ ಎಲ್ಲರನ್ನು ಸಹಾ ಶ್ರೀಗಳು ಸ್ವಾಗತಿಸುತ್ತಾರೆ, ಅವರ ಕಷ್ಠಗಳನ್ನು ಕೇಳುತ್ತಾರೆ ಅದಕ್ಕೆ ಪರಿಹಾರವನ್ನು ಸಹಾ ಸೂಚಿಸುತ್ತಾರೆ. ಈ ಆಶ್ರಮ ಯಾವುದಾದರೊಂದು ಜಾತಿಗೆ ಸೀಮಿತವಾಗಿದ್ದರೆ ಇಷ್ಟು ಹೊತ್ತಿಗೆ ಇಲ್ಲಿ ಬಹಳಷ್ಟು ಭಕ್ತು ಸೇರುತ್ತಿದ್ದರು ಆದರೆ ಇದು ಜಾತ್ಯಾತೀತವಾದ ಆಶ್ರಮವಾಗಿದ್ದರಿಂದ ಇಲ್ಲಿ ಭಕ್ತರ ಸಂಖ್ಯೆ ಕಡಿಮೆ ಇದೆ ಎಂದರು.

ಇಂದಿನ ದಿನಮಾನದಲ್ಲಿ ಜನರಲ್ಲಿ ಅಧ್ಯಾತ್ಮಿಕತೆ ಕಡಿಮೆಯಾಗುತ್ತಿದೆ, ಇಂತಹ ಕಾರ್ಯಕ್ರಮಗಳಿಗೆ ಬರುವವರ ಸಂಖ್ಯೆಯೂ ಸಹಾ ಕಡಿಮೆಯಾಗುತ್ತಿದೆ ಅದರಲ್ಲೂ ಇಂದಿನ ಯುವ ಪೀಳೀಗೆಯಲ್ಲಿ ಅಧ್ಮಾತ್ಮಿಕತೆ ಎಂದು ಸಾಕು ದೂರ ಹೋಗುತ್ತಾರೆ ಅದೇ ಸಿನಿಮಾ, ಕ್ರಿಕೇಟ್, ಸೆಲಬ್ರಟಿಗಳು ಎಂದರೆ ಸಾಕು ಓಡಿಕೊಂಡು ಬರುತ್ತಾರೆ. ಅನ್ನ, ಜ್ಞಾನ ಇಲ್ಲದಿದರೆ ಯಾವ ಜಾತಿ, ಧರ್ಮ ಇದ್ದರೂ ಸಹಾ ಪ್ರಯೋಜನವಾಗುವುದಿಲ್ಲ, ಭಾರತ ವಿಶ್ವ ಗುರುವಾಗುತ್ತಿರುವುದು ಅಧ್ಮಾತಿಕ ಚಿಂತನೆಯಿಂದ ಆದರೆ ಶೇ.70 ರಷ್ಟು ಜನರಿಗೆ ಅಧ್ಮಾತ್ಮಿಕತೆಯ ಬಗ್ಗೆ ತಿಳಿದಿಲ್ಲ, ಹಬ್ಬಗಳ ಆಚರಣೆಯೂ ಸಹಾ ಇಂದಿನ ದಿನಮಾನದಲ್ಲಿ ಕಡಿಮೆಯಾಗುತ್ತಿವೆ. ಮಕ್ಕಳಿಗೆ ಅಧ್ಮಾತ್ಮಿಕತೆಯನ್ನು ತಿಳಿಸುತ್ತಿಲ್ಲ, ನಮ್ಮ ದೇವರು, ಸ್ವಾಮಿಗಳು ಮಠಗಳು, ಆಶ್ರಮಗಳ ಇದರ ಬಗ್ಗೆ ತಿಳಿಸುತ್ತಿಲ್ಲ, ಎಲ್ಲರಿ ಅಂಕಗಳ ಹಿಂದೆ ಓಡುತ್ತಾ ನಮ್ಮ ಮಗ ಇಂಜಿನಿಯರ್, ಡಾಕ್ಟರ್ ಆಗಬೇಕು, ಹೆಚ್ಚಿನ ಹಣವನ್ನು ಸಂಫಾದನೆ ಮಾಡಬೇಕು ಜೀವನದಲ್ಲಿ ಸುಖವಾಗಿ ಇರಬೇಕೆಂದು ಮಾತ್ರ ಬಯಸುತ್ತಾನೆ ಈ ರೀತಿಯಾದ ಅಧ್ಮಾತ್ಮಿಕತೆ, ಹಬ್ಬ, ಪೂಜೆ, ಜಾತ್ರೆಗಳು ಕಾರ್ಯಕ್ರಮಗಳು ಬೇಕಿಲ್ಲ ಎಂದರು.

ಕಾರ್ಯಕ್ರಮದಲ್ಲಿ ನಗರಸಭೆಯ ಮಾಜಿ ಸದಸ್ಯರಾದ ವೆಂಕಟೇಶ್, ಡಾಶ್ರೀಧರಮೂರ್ತಿ, ಬೆನಕಪ್ಪ, ಹುರಳಿ ಬಸವರಾಜು, ಧರ್ಮಪ್ರಸಾದ್, ಮಂಜುನಾಥ್ ರಾವ್, 96ನೇ ಶಿವರಾತ್ರಿ ಮಹೋತ್ಸವದ ಅಧ್ಯಕ್ಷರಾದ ಭಾಸ್ಕರ್ ಭಾಗವಹಿಸಿದ್ದರು ಇದೆ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಜಾನಪದ ಆಕಾಡೆಮಿ ಪ್ರಶಸ್ತ್ರಿ ಪುರಸ್ಕøತರಾಧ ವಿರೂಪಾಕ್ಷಪ್ಪ ಹಾಗೂ ಡಾ.ಮಹಮ್ಮದ್ ಖಾಸಿಂರವರನ್ನು ಗೌರವಿಸಲಾಯಿತು.

ಸುಬ್ರಾಯ ಭಟ್ಟರು ವೇದ ಘೋಷ ಮಾಡಿದರೆ, ಜ್ಯೋತಿ ಪ್ರಾರ್ಥಿಸಿದರು, ಮಂಜುನಾಥ್ ಗುಪ್ತ ಸ್ವಾಗತಿಸಿದರು, ಕುಮಾರಿ ಕೀರ್ತನರವರು ಯೋಗ ನೃತ್ಯವನ್ನು ಮಾಡಿದರು. ಪುರುಷೋತ್ತಮ ರವರ ನಿರ್ದೇಶನದ ಸಮಸ್ತರು ಅಭಿನಯಿಸಿದ ವರಭ್ರಷ್ಠ ರಾವಣ ನಾಟಕ ಪ್ರದರ್ಶನವಾಯಿತು.

Leave a Reply

Your email address will not be published. Required fields are marked *