ಚಿತ್ರದುರ್ಗ: ನಗರದ ಅನುಪಮ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಶಾಲಾ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ನಡೆಸಲಾಯಿತು, ಶಾಲೆಯ 1ನೇ ತರಗತಿಯಿಂದ 10ನೇ ತರಗತಿಯ ವಿದ್ಯಾರ್ಥಿಗಳ ಸೃಜನಶೀಲತೆ, ವಿಚಾರವಂತಿಕೆ, ನವೀನ ವಿಜ್ಞಾನ ಮಾದರಿಗಳ ಪ್ರದರ್ಶನ, ಗ್ರಾಮೀಣ ಕ್ರೀಡೆಗಳ ಮಾಹಿತಿ, ಇನ್ನೂ ಹತ್ತು ಹಲವು ವಿಶೇಷ ವಸ್ತುಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಮಕ್ಕಳು ಉತ್ಸಾಹದಿಂದ ಭಾಗವಹಿಸಿ, ತಮ್ಮ ವಿಷಯಗಳ ವಿವರಣೆಯನ್ನು ಪೋಷಕರಿಗೆ, ತೀರ್ಪುಗಾರರಿಗೆ, ಶಿಕ್ಷಕರಿಗೆ ನೀಡುತ್ತಿದ್ದರು. ವಸ್ತು ಪ್ರದರ್ಶವನ್ನು ಉದ್ಘಾಟಿಸಿದ ಕಾರ್ಯದರ್ಶಿಗಳಾದ ರಕ್ಷಣ್.ಎಸ್.ಬಿ ಮಾತನಾಡಿ, ಮಕ್ಕಳಲ್ಲಿನ ಪ್ರತಿಭೆಯನ್ನು ಹೊರಹಾಕಲು ವಸ್ತು ಪ್ರದರ್ಶನವು ಒಂದು ಮುಖ್ಯ ವೇದಿಕೆಯಾಗಿದೆ, ಪ್ರಾಚಾರ್ಯರಾದ ಸಿ.ಡಿ.ಸಂಪತ್ ಕುಮಾರ್‌ರವರು ಮತನಾಡಿ, ಮಕ್ಕಳ ಬುದ್ದಿವಂತಿಕೆಯನ್ನು ಹೊರಹಾಕಲು ಇದು ಸರಿಯಾದ ಸಮಯ, ಮಕ್ಕಳು ತಮ್ಮಲ್ಲಿರುವ ಯೋಚನಾಶಕ್ತಿ, ಕಲ್ಪನಾಶಕ್ತಿ ಮತ್ತು ವಿವರಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಲು ಸಹಾಯಕವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಶಾಲೆಯ ಅಧ್ಯಕ್ಷರಾದ ಭಾಸ್ಕರ್.ಎಸ್, ಕಾರ್ಯದರ್ಶಿಗಳಾದ ರಕ್ಷಣ್.ಎಸ್.ಬಿ, ಪ್ರಾಚಾರ್ಯರಾದ ಸಿ.ಡಿ.ಸಂಪತ್ ಕುಮಾರ್ ಮತ್ತು ಮುಖ್ಯೋಪಾಧ್ಯಾಯರಾದ ವೆಂಕಟೇಶ್, ಹೆಡ್ ಕೋಆರ್ಡಿನೇಟರ್ ಕೆ.ಬಸವರಾಜು ಮತ್ತು ಶಾಲೆಯ ಶಿಕ್ಷಕ /ಶಿಕ್ಷಕಿಯರು ಸೇರಿದಂತೆ, ವಿದ್ಯಾರ್ಥಿಗಳು ಶಾಲಾ ವಸ್ತು ಪ್ರದರ್ಶನದ ಮಾದರಿಗಳನ್ನು ವೀಕ್ಷಿಸಿದರು.
Views: 0