ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯಲ್ಲಿ “ಶಾಲಾ ಮಟ್ಟದ ಇನ್ವೆಸ್ಟಿಟ್ಯುರ್” ಉದ್ಘಾಟನಾ ಸಮಾರಂಭ ನಡೆಯಿತು”.

ನಗರದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆ, ಚಿತ್ರದುರ್ಗ ಇಲ್ಲಿ ದಿನಾಂಕ 17.06.2025ರಂದು “ಶಾಲಾ ಮಟ್ಟದ ಇನ್ವೆಸ್ಟಿಟ್ಯುರ್” ಉದ್ಘಾಟನಾ ಸಮಾರಂಭ ನಡೆಯಿತು”. ಮಕ್ಕಳ ಸರ್ವತೋಮುಖ ಅಭಿವೃದ್ಧಿಯ ದೃಷ್ಠಿಯಿಂದ ಶೈಕ್ಷಣಿಕವಾಗಿ, ಕ್ರೀಡೆ ಮತ್ತು ಸಾಂಸ್ಕೃತಿಕವಾಗಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು “ರೂಬಿ, ಸಪೈರ್, ಎಮರಾಲ್ಡ್, ಟೋಪಾಜ್” ಎಂಬ ನಾಲ್ಕು ಹೌಸ್‌ಗಳನ್ನು ರಚಿಸಲಾಯಿತು.


2025-26ನೇ ಸಾಲಿನ ಶಾಲಾ ನಾಯಕನಾಗಿ ಚಕ್ಷ ದೀಕ್ಷಿತ್ ಎಂ, ಶಾಲಾ ನಾಯಕಿಯಾಗಿ ಪುಣ್ಯ ಟಿ.ಜಿ ಅವರು ಆಯ್ಕೆಯಾಗಿದ್ದಾರೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸೋಮಶೇಖರ್ ಬಿ ಅಗಡಿ ಚಿತ್ರದುರ್ಗ ಜಿಲ್ಲಾ ಅಗ್ನಿ ಶಾಮಕ ದಳದ ಅಧಿಕಾರಿಗಳು ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿ ನಂತರ ಮಾತನಾಡುತ್ತಾ ಶಾಲಾ ನಾಯಕ ನಾಯಕಿಯರಿಗೆ ಶುಭ ಹಾರೈಸಿದರು. ಶಾಲೆಯಲ್ಲಿ ನಾಯಕತ್ವ ಗುಣವನ್ನು ಬೆಳೆಸುವಂತಹ ಈ ಕಾರ್ಯಕ್ರಮ ಜೀವನದಲ್ಲಿ ನಿಮ್ಮನ್ನು ಎತ್ತರಕ್ಕೆ ಕರೆದೊಯ್ಯಲು ಸಹಕಾರಿಯಾಗಿದೆ. ವಿದ್ಯಾರ್ಥಿಗಳು
ಜೀವನದಲ್ಲಿ ಶಿಸ್ತನ್ನು ರೂಢಿಸಿಕೊಳ್ಳಬೇಕು. ಹಾಗೂ ಹಾಗೆಯೇ ನಾಯಕರಾದಂತಹವರು ತಮ್ಮಲ್ಲಿ ಶಿಸ್ತನ್ನು ರೂಢಿಸಿಕೊಳ್ಳುವುದರ ಜೊತೆಗೆ ತಮ್ಮೊಂದಿಗಿರುವ ಕಿರಯರಿಗೆ ಅದರ ದಾರಿಯನ್ನು ತೋರಿಸಬೇಕು.


ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯು ಹೊಸ ವಿಷಯಗಳನ್ನು ಹೊಸತನವನ್ನು ಮಕ್ಕಳಲ್ಲಿ ಬೆಳೆಸಿಕೊಳ್ಳಲು ತುಂಬಾ ಉಪಯುಕ್ತವಾದ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ. ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಮಾತ್ರ ಸೀಮಿತವಾಗಿರದೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.

ಸಂಸ್ಥೆಯ ಕಾರ್ಯದರ್ಶಿಗಳಾದ ಬಿ.ವಿಜಯ್‌ಕುಮಾರ್‌ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ವಿದ್ಯಾರ್ಥಿಗಳು
ತಮ್ಮಲ್ಲಿ ಧನಾತ್ಮಕ ಗುಣಗಳನ್ನು ರೂಢಿಸಿಕೊಳ್ಳುವಲ್ಲಿ ಅದನ್ನು ಬೆಳೆಸಿಕೊಳ್ಳುವಲ್ಲಿ ಈ ಕಾರ್ಯಕ್ರಮವು ಸಹಕಾರಿಯಾಗಿದೆ. ಪಠ್ಯಕ್ರಮದಲ್ಲಿ ಉತ್ತಮ ಅಂಕಗಳನ್ನು ಪಡೆದುಕೊಳ್ಳುವುದರ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ಹೆಚ್ಚಿನದಾಗಿ ಭಾಗವಹಿಸಬೇಕಾಗಿ
ತಿಳಿಸಿದರು. ಬಾಲ್ಯದಲ್ಲಿಯೇ ಶಿಸ್ತಿನ ಜೊತೆಗೆ ಗುರು ಹಿರಿಯರಲ್ಲಿ ಭಕ್ತಿಯನ್ನು ಬೆಳೆಸಿಕೊಳ್ಳುವಲ್ಲಿ ಈ ಕಾರ್ಯಕ್ರಮ ಸಹಕಾರಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ಸುನೀತಾ ವಿಜಯ್‌ಕುಮಾರ್, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಎಸ್.ಎಂ ಪೃಥ್ವೀಶ, ಮುಖ್ಯೋಪಾಧ್ಯಾಯರಾದ ತಿಪ್ಪೇಸ್ವಾಮಿ ಎನ್.ಜಿ, ಐಸಿಎಸ್‌ಸಿ ಪ್ರಾಚಾರ್ಯರಾದ ಶ್ರೀ ಬಸವರಾಜಯ್ಯ ಪಿ. ಶಿಕ್ಷಕ/ಶಿಕ್ಷಕೇತರ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಸೈಯೇದಾ ಸಫಾ ಸುಹಾನಿ ನಿರೂಪಿಸಿದರು, ಹಂಸ ಎಂ ಬಿ, ಸ್ವಾಗತಿಸಿದರು, ಮೋನಿಷಾ ಎಸ್
ವಂದಿಸಿದರು.

Leave a Reply

Your email address will not be published. Required fields are marked *