
ಚಿತ್ರದುರ್ಗ, (ಏ.22) : ದ್ವಿತೀಯ ಪಿಯು ಫಲಿತಾಂಶದಲ್ಲಿ ಚಳ್ಳಕೆರೆ ತಾಲೂಕಿನ ಸಾಣಿಕೆರೆಯ ವೇದ ಪಿಯು ಕಾಲೇಜು ಸತತ ಎರಡು ವರ್ಷಗಳಿಂದ ಶೇಕಡ ನೂರಕ್ಕೆ ನೂರರಷ್ಟು ಫಲಿತಾಂಶ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದೆ.
ಚಳ್ಳಕೆರೆ ತಾಲೂಕಿನಲ್ಲಿ ವಿಜ್ಞಾನ ವಿಭಾಗದಲ್ಲಿ 582 ಅಂಕಗಳಿಸುವ ಮೂಲಕ ಕಾಲೇಜಿನ ಮಂಜುಳ ಜೆ. ತಾಲೂಕು ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ಇಷ್ಟೇ ಅಲ್ಲದೇ ತಾಲ್ಲೂಕಿನ ಫಲಿತಾಂಶದಲ್ಲಿ ದ್ವಿತೀಯ ಸ್ಥಾನ ಮಂಜುನಾಥ.ಬಿ ಹಾಗೂ ತೃತೀಯ ಸ್ಥಾನ ಅಜಯ್ ಕುಮಾರ್ ಪಡೆದು ವೇದ ಕಾಲೇಜು ಪಡೆದು ಶೈಕ್ಷಣಿಕವಾಗಿ ತನ್ನ ನಾಗಾಲೋಟವನ್ನು ಮುಂದುವರಿಸಿದೆ.
ವಿಜ್ಞಾನ ವಿಭಾಗದಲ್ಲಿ ;
ಪರೀಕ್ಷೆಗೆ ಹಾಜರಾದ ಒಟ್ಟು 66 ವಿದ್ಯಾರ್ಥಿಗಳಲ್ಲಿ 36 ಅತ್ಯುತ್ತಮ ಶ್ರೇಣಿ, 19 ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ನೂರರಷ್ಟು ಫಲಿತಾಂಶ ದಾಖಲಿಸಿದೆ.
ಉತ್ತಮ ಫಲಿತಾಂಶ ತಂದುಕೊಟ್ಟ ವಿದ್ಯಾರ್ಥಿಗಳಿಗೂ ಹಾಗೂ ಉಪನ್ಯಾಸಕ ವರ್ಗದವರಿಗೆ ಕಾಲೇಜಿನ ಅಧ್ಯಕ್ಷ ಡಿಟಿ ರವೀಂದ್ರ ಅವರು ಅಭಿನಂದನೆಗಳನ್ನು ತಿಳಿಸಿದ್ದಾರೆ.
The post ದ್ವಿತೀಯ ಪಿಯು ಫಲಿತಾಂಶ : ಸಾಣಿಕೆರೆಯ ವೇದ ಪಿಯು ಕಾಲೇಜಿನ ಉತ್ತಮ ಸಾಧನೆ, ಚಳ್ಳಕೆರೆ ತಾಲೂಕಿಗೆ ಪ್ರಥಮ first appeared on Kannada News | suddione.
from ಚಿತ್ರದುರ್ಗ – Kannada News | suddione https://ift.tt/X5dCicY
via IFTTT
Views: 0