Karnataka second puc exam 3 Result Declared: ದ್ವಿತೀಯ ಪಿಯುಸಿ ಪರೀಕ್ಷೆ-3 ಫಲಿತಾಂಶ ಪ್ರಕಟ ಪ್ರಕಟವಾಗಿದೆ. ಇಂದು (ಜುಲೈ 16) 2024ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ3 ರ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಪ್ರಕಟಸಿದ್ದು, ಈ ಪರೀಕ್ಷೆಯಲ್ಲೂ ಸಹ ಮತ್ತೊಮ್ಮೆ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ.
![](https://samagrasuddi.co.in/wp-content/uploads/2024/07/image-118.png)
ಬೆಂಗಳೂರು, (ಜುಲೈ 16): ಇದೇ ಜೂನ್ 25ರಿಂದ ಜುಲೈ5 ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ-3ರ ಫಲಿತಾಂಶ ಪ್ರಕಟವಾಗಿದೆ. 2024ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ3 ರ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಇಂದು(ಜುಲೈ 16) ಪ್ರಕಟಿಸಿದೆ. ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 75466 ವಿದ್ಯಾರ್ಥಿಗಳ ಪೈಕಿ 17,911 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ.21.65 ಬಾಲಕರು ಪಾಸ್ ಆಗಿದ್ದರೆ, ಶೇ. 26.55 ಬಾಲಕಿಯರು ಉತೀರ್ಣರಾಗಿದ್ದಾರೆ. ಈ ಮೂಲಕ ಮತ್ತೊಮ್ಮೆ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ.
ಫಲಿತಾಂಶ ನೋಡುವುದು ಹೇಗೆ?
- ಮೊದಲು, ಅಧಿಕೃತ ಕೆಎಸ್ಇಎಬಿ (KSEAB) ವೆಬ್‌ಸೈಟ್‌ಗೆ ಭೇಟಿ ನೀಡಿ.
- 2ನೇ ಪಿಯುಸಿ ಪರೀಕ್ಷೆ 3 ಫಲಿತಾಂಶ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ನೋಂದಣಿ ಸಂಖ್ಯೆ ಅಥವಾ ಜನ್ಮದಿನಾಂಕ ಮೂಲಕ ಪೋರ್ಟಲ್‌ಗೆ ಲಾಗ್ ಇನ್ ಮಾಡಿ.
- ಒಮ್ಮೆ ನೀವು ವಿವರಗಳನ್ನು ಸಲ್ಲಿಸಿದ ಬಳಿಕ ಕ್ಯಾಪ್ಚಾವನ್ನು ನಮೂದಿಸಿ ಸಬ್ಮಿಟ್ ಬಟನ್ ಅನ್ನು ಕ್ಲಿಕ್ ಮಾಡಿ.
- ನಿಮ್ಮ 2ನೇ ಪಿಯುಸಿ ಪೂರಕ ಪರೀಕ್ಷೆಯ ಫಲಿತಾಂಶಗಳು ನಿಮ್ಮ ಪರದೆಯ ಮೇಲೆ ಗೋಚರಿಸುತ್ತದೆ. ವೆಬ್‌ಸೈಟ್‌ನಿಂದ ತಮ್ಮ ಫಲಿತಾಂಶವನ್ನು ಡೌನ್‌ಲೋಡ್ ಮಾಡಕೊಳ್ಳಿ.