ಬೆಂಗಳೂರು, ಮೇ. 21: 2 ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು ಇಂದು (ಮೇ 21) ದ್ವಿತೀಯ ಪಿಯುಸಿ 2 ನೇ ಪರೀಕ್ಷೆಯ ಫಲಿತಾಂಶ 2024 ಅನ್ನು ಪ್ರಕಟಿಸಿದೆ. ಏಪ್ರಿಲ್ 29 ಮತ್ತು ಮೇ 16 ರ ನಡುವೆ 2024 ರ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ನಡೆದಿತ್ತು.
ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು ತಮ್ಮ ಪಿಯುಸಿ ಫಲಿತಾಂಶಗಳನ್ನು ಅಧಿಕೃತ ವೆಬ್‌ಸೈಟ್ – karresults.nic.in ನಿಂದ ಡೌನ್‌ಲೋಡ್ ಮಾಡಬಹುದು. ಈ ವರ್ಷ 2ನೇ ಪಿಯುಸಿ ದ್ವಿತೀಯ ಪರೀಕ್ಷೆಗೆ ಒಟ್ಟು 1,49,824 ವಿದ್ಯಾರ್ಥಿಗಳು ನೋಂದಣಿ ಮಾಡಿದ್ದು, ಈ ಪೈಕಿ 1,48,942 ಮಂದಿ ಪರೀಕ್ಷೆಗೆ ಹಾಜರಾಗಿದ್ದು, 52,505 ಮಂದಿ ಉತ್ತೀರ್ಣರಾಗಿದ್ದಾರೆ. 35.25 ರಷ್ಟು ಉತ್ತೀರ್ಣರಾಗಿದ್ದಾರೆ.
ಒಟ್ಟು 84,632 ಹುಡುಗರು ಮತ್ತು 64,310 ಹುಡುಗಿಯರು ಕರ್ನಾಟಕ ಪಿಯುಸಿ ಪೂರಕ ಪರೀಕ್ಷೆಗೆ ಹಾಜರಾಗಿದ್ದರು. ಅವರಲ್ಲಿ ಹುಡುಗರು 26,496 ಶೇಕಡಾ 31.31 ರಷ್ಟು ಉತ್ತೀರ್ಣರಾಗಿದ್ದಾರೆ ಮತ್ತು ಹುಡುಗಿಯರು 35.25% (26,009) ಅಂಕಗಳನ್ನು ಗಳಿಸಿದ್ದಾರೆ.
ದ್ವಿತೀಯ ಪಿಯುಸಿ ಪರೀಕ್ಷೆ 2 ರಿಸಲ್ಟ್ ಚೆಕ್ ಮಾಡುವ ವಿಧಾನ
ಪರೀಕ್ಷೆ ಬರೆದ ವಿದ್ಯಾರ್ಥಿಗಳು ವೆಬ್‌ಸೈಟ್ ಲಿಂಕ್ http://www.karresults.nic.in/# ಗೆ ಭೇಟಿ ನೀಡಿ.
– ತೆರೆದ ವೆಬ್‌ಪೇಜ್‌ನಲ್ಲಿ ‘2nd PUC Main Examination 2 Results’ ಎಂದಿರುವ ಲಿಂಕ್ ಕ್ಲಿಕ್ ಮಾಡಿ.
– ಮತ್ತೊಂದು ವೆಬ್‌ಪೇಜ್ ತೆರೆಯುತ್ತದೆ.
– ಇಲ್ಲಿ ದ್ವಿತೀಯ ಪಿಯುಸಿ ರಿಜಿಸ್ಟರ್ ನಂಬರ್ ಕೇಳಲಾಗುತ್ತದೆ. ನಮೂದಿಸಿ.
– ನಂತರ ಸಬ್ಜೆಕ್ಟ್ ಕಾಂಬಿನೇಷನ್ ಅನ್ನು ಸೆಲೆಕ್ಟ್ ಮಾಡಿ.
– ಆರ್ಟ್ಸ್ / ಸೈನ್ಸ್ / ಕಾಮರ್ಸ್ ಮೂರರಲ್ಲಿ ನೀವು ಪರೀಕ್ಷೆ ಬರೆದ ಕಾಂಬಿನೇಷನ್ ಒಂದನ್ನು ಸೆಲೆಕ್ಟ್ ಮಾಡಬೇಕು.
– ನಂತರ ‘Submit’ ಎಂಬಲ್ಲಿ ಕ್ಲಿಕ್ ಮಾಡಿ.
– ಫಲಿತಾಂಶ ಪ್ರದರ್ಶಿತವಾಗುತ್ತದೆ. ಡೌನ್‌ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ.
ವಿದ್ಯಾರ್ಥಿಗಳಿಗೆ ಸೂಚನೆ
- 2023-24ನೇ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ 3 ಪರೀಕ್ಷೆಯನ್ನು ಜಾರಿ ಮಾಡಿದೆ. ಆದರೆ ಅಧಿಕ ಫಲಿತಾಂಶವನ್ನು ಆಯ್ಕೆ ಮಾಡಲು ಅವಕಾಶ ಇಲ್ಲ. ಬದಲಿಗೆ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳು ತೃಪ್ತಿಕರವಾಗಿರದಿದ್ದಲ್ಲಿ, ಅಂಕಗಳನ್ನು ತಿರಸ್ಕರಿಸಲು ಅವಕಾಶ ಮಾಡಿಕೊಡಲಾಗಿದೆ.
- ವಿದ್ಯಾರ್ಥಿಗಳು ಹಿಂದಿನ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಪರಿಗಣಿಸದೇ ಸರಳ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ಮಾತ್ರ ವಿದ್ಯಾರ್ಥಿ ಅಂತಿಮ ಅಂಕಗಳೆಂದು ಪರಿಗಣಿಸಲಾಗುತ್ತದೆ.
- ದ್ವಿತೀಯ ಪಿಯುಸಿ ವಿದ್ಯಾರ್ಥಿ ತನ್ನ 2 ಪರೀಕ್ಷೆಗಳಲ್ಲಿಯ ಅಧಿಕ ಅಂಕಗಳನ್ನು ಆಯ್ಕೆ ಮಾಡಲು ಅವಕಾಶ ಇರುವುದಿಲ್ಲ. ಹೀಗಾಗಿ ಸುಧಾರಣಾ ವ್ಯವಸ್ಥೆಯನ್ನು ಅಳವಡಿಸಿಕೊಂಡರೆ 1, 2 ಮತ್ತು 3 ಪರೀಕ್ಷೆಗಳಲ್ಲಿ ಗಳಿಸಿದ ವಿಷಯವಾರು ಅಂಕವನ್ನು ಉಳಿಸಿಕೊಳ್ಳಲು ಅವಕಾಶವನ್ನು ನೀಡಿದಂತಾಗುತ್ತದೆ ಎಂದು ಮಂಡಲಿ ತಿಳಿಸಿದೆ.
- ಈ ಪರೀಕ್ಷೆಯಲ್ಲಿಯೂ ತಮ್ಮ ಅಂಕಗಳು ಸುಧಾರಿಸದಿದ್ದಲ್ಲಿ, ತೇರ್ಗಡೆ ಆಗದಿದ್ದವರೂ ಪರೀಕ್ಷೆ 3 ತೆಗೆದುಕೊಳ್ಳಬಹುದು.