35 ಪರೀಕ್ಷೆಗಳಲ್ಲಿ ವಿಫಲರಾದರು, UPSC ಪರೀಕ್ಷೆ ಬರೆದು IAS ಆದ ವಿಜಯ್ ವರ್ಧನ್ ಸಕ್ಸಸ್‌ ಜರ್ನಿ ಹೇಗಿತ್ತು ನೋಡಿ..!

ಸೋಲೆ ಗೆಲುವಿನ ಮೆಟ್ಟಿಲು ಎಂಬ ನಾಣ್ಣುಡಿ ಒಂದಿದೆ. ಹಾಗೆಯೇ ಪ್ರಯತ್ನ ಎಂಬುದು ನಿರಂತರವಾಗಿರಲಿ ಒಂದಲ್ಲಾ ಒಂದು ದಿನ ಸಕ್ಸಸ್ ಸಿಕ್ಕೇ ಸಿಗುತ್ತೆ ಎಂದು ಆತ್ಮವಿಶ್ವಾಸ ತುಂಬುವವರು ಸಹ ನಮ್ಮ ನಿಮ್ಮೆಲ್ಲರ ಸುತ್ತಮುತ್ತ ಸಾಕಷ್ಟು ಜನರಿದ್ದಾರೆ. ಆದ್ರೆ 30 ಪರೀಕ್ಷೆ ಬರೆದರು ಯಶಸ್ಸು ಸಿಕ್ಕಿಲ್ಲ ಎಂದಾಕ್ಷಣ ಇನ್ನು ಓದುತ್ತಲೇ ಇರು, ಗೆಲುವು ಸಿಕ್ಕೇ ಸಿಗುತ್ತೆ ಎಂದು ಯಾರಾದ್ರು ಹೇಳುತ್ತಾರಾ. ಬಹುಶಃ ಇದು ಸಾಧ್ಯವಿಲ್ಲ. ಕಾರಣ ನೀವು ಆಯ್ಕೆ ಮಾಡಿಕೊಂಡ ಮಾರ್ಗವೇ ತಪ್ಪಿದೆ ಎಂದು ದಾರಿ ಬದಲಿಸಿ ಎಂದು ಯಾರಾದರೂ ಹೇಳಿಬಿಡುತ್ತಾರೆ. ಆದ್ರೆ ನಿಮಗೆ ಗೊತ್ತಾ.. ಯುಪಿಎಸ್‌ಸಿ ಪರೀಕ್ಷೆ ಗೆದ್ದೇ ಗೆಲ್ಲುತ್ತೇನೆ ಎಂಬ ಹಠದಿಂದ ಅದಕ್ಕಾಗಿ 35 ವೈಫಲ್ಯಗಳನ್ನು ಸಹಿಸಿಕೊಂಡು ಮುಂದೆ ಯಶಸ್ಸು ಪಡೆದಿರುವವರು ಇದ್ದಾರೆ. ಇದನ್ನ ನಂಬ್ತಿರಾ..! ಬಹುಶಃ ಇದೊಂದು ಅತಿದೊಡ್ಡ ಆಶ್ಚರ್ಯಕರ ಸಂಗತಿ, ತಾಳ್ಮೆಯ ಲೆವೆಲ್ಲೇ ಬೇರೆ ಇದೆ ಎಂದು ಹೇಳಬಹುದು. ಯುಪಿಎಸ್‌ಸಿ ಆಕಾಂಕ್ಷಿಗಳೇ.. ಆದರೆ ಇದು ನಿಜವಾಗಿದೆ.
ಹೌದು.. ಹರಿಯಾಣ ಮೂಲದ ವಿಜಯ್ ವರ್ಧನ್‌ ರವರ ಯುಪಿಎಸ್‌ಸಿ ಸಕ್ಸಸ್‌ ಸ್ಟೋರಿ ಇದು ಸ್ನೇಹಿತರೇ..

ವಿಜಯ್ ವರ್ಧನ್ ಸಕ್ಸಸ್‌ ಜರ್ನಿ

ಇದು ವಿಜಯ್ ವರ್ಧನ್‌ ರವರ ಐಎಎಸ್‌ ಪರೀಕ್ಷೆ ಜರ್ನಿಯ ಪೀಠಿಕೆ ಓದುಗರೆ. ಅವರ ಜರ್ನಿಯು ಪದೇ ಪದೇ ಪರೀಕ್ಷೆಗಳಲ್ಲಿ ಫೇಲಾದರೂ ಸಹ ಅವರು ತಮ್ಮ ಗುರಿಯನ್ನು ಬಿಡಲಿಲ್ಲ. ನಿರಂತರ ಪ್ರಯತ್ನ ಇತ್ತು. ಎಷ್ಟೆಂದರೆ ಅವರು 30 ಕ್ಕೂ ಹೆಚ್ಚು ಬಾರಿಯ ಪರೀಕ್ಷೆಗಳಲ್ಲಿ ವೈಪಲ್ಯವನ್ನು ಕಂಡರೂ ಸಹ ಯಶಸ್ಸಿನ ಅನ್ವೇಷಣೆಯಲ್ಲಿ ಅವರು ಎಂದೂ ಹಿಂಜರಿಯಲಿಲ್ಲ ಎಂಬುದನ್ನು, ಫೇಲ್ಯೂರ್ ಸಾಧನೆಯ ವಿರುದ್ಧವಲ್ಲ, ಆದರೆ ಅದೊಂದು ಅವಿಭಾಜ್ಯ ಅಂಗವಾಗಿದೆ ಎಂಬ ಗಾದೆಗೆ ಪೂರಕವಾಗಿರುವ ಕಥೆ ಅವರ ಜರ್ನಿ ಆಗಿದೆ.

ವರ್ಧನ್‌ ರವರ ಶಿಕ್ಷಣ ಹಿನ್ನೆಲೆ

ವರ್ಧನ್ ಮೂಲತಃ ಹರಿಯಾಣದ ಸಿರ್ಸಾದವರು. ಇವರ ಶೈಕ್ಷಣಿಕ ಪ್ರಯಾಣವು ಅವರ ತವರೂರಿನಲ್ಲೇ ಆರಂಭವಾಯಿತು. ನಂತರ ಬಿ.ಟೆಕ್ ಇನ್‌ ಇಲೆಕ್ಟ್ರಾನಿಕ್ಸ್‌ ಇಂಜಿನಿಯರಿಂಗ್‌ ಅನ್ನು ಹಿಸಾರ್‌ನಲ್ಲಿ ಪಡೆದರು. ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸಬೇಕು ಎನ್ನುವ ಅವರ ಮಹತ್ವಕಾಂಕ್ಷೆಯು ಅವರನ್ನು ದೆಹಲಿಗೆ ಕರೆದುಕೊಂಡು ಬಂತು. ಯುಪಿಎಸ್‌ಸಿ’ಗೆ ಓದುವ ಜತೆಗೆ ಅವರು ಹರಿಯಾಣ ಪಬ್ಲಿಕ್ ಸರ್ವೀಸ್‌ ಕಮಿಷನ್, ಯುಪಿಪಿಎಸ್‌ಸಿ, ಎಸ್‌ಎಸ್‌ಸಿ, ಪಿಸಿಎಸ್‌ ಸೇರಿದಂತೆ ಅವರು 30 ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದರು ಎಲ್ಲದರಲ್ಲಿಯೂ ನಿರಾಶೆ ಎದುರಿಸಿದರು. ಅವರ ಒಟ್ಟು ವಿಫಲಗಳು 35 ಎಂದೇ ಹೇಳಲಾಗಿದೆ.

​2014 ರಲ್ಲಿ ಮೊದಲ ಬಾರಿಗೆ ಸಿಎಸ್‌ಇ ಪರೀಕ್ಷೆ ಬರೆದರು


ಇಷ್ಟೆಲ್ಲಾ ಪರೀಕ್ಷೆಗಳನ್ನು ಬರೆದ ಅವರಿಗೆ ಯುಪಿಎಸ್‌ಸಿ ಪರೀಕ್ಷೆ ಖಂಡಿತ ಸುಲಭವಲ್ಲ ಎಂಬುದು ತಿಳಿಯಿತು. ಅದೊಂದು ಅಸಾಧಾರಣ ಸವಾಲು ಎಂದು ಅವರಿಗೆ ತಿಳಿಯಿತು. ಮೊದಲು 2014 ರಲ್ಲಿ ಮೊದಲ ಬಾರಿಗೆ ಸಿವಿಲ್ ಸೇವೆಗಳ ಪರೀಕ್ಷೆ ಬರೆದರು, ನಂತರದ 4 ಪ್ರಯತ್ನಗಳು ಸಹ ಯಾವುದೇ ಯಶಸ್ಸನ್ನು ನೀಡಲಿಲ್ಲ. ಈ ಫೇಲ್‌ಗಳಿಂದ ಹತಾಶೆಗೆ ಒಳಗಾಗುವ ಬದಲು, ವರ್ಧನ್ ರವರು ಈ ಸೋಲುಗಳನ್ನೇ ತಮ್ಮ ಮೆಟ್ಟಿಲುಗಳಾಗಿ ಸ್ವೀಕಾರ ಮಾಡಿದರು. ಅವರು ತಮ್ಮ ಪ್ರತಿ ಹಿನ್ನಡೆಯನ್ನು ಕಲಿಕೆಯ ಅವಕಾಶವಾಗಿ ಭಾವಿಸಿದರು. ಅವರ ಪ್ರಯತ್ನದ ವಿಧಾನವನ್ನು ಪರಿಷ್ಕರಿಸಲು ಅವರ ಸೋಲುಗಳು ಮತ್ತಷ್ಟು ಪ್ರೇರೇಪಿಸಿದವು.

​2018 ರಲ್ಲಿ ಮೊದಲ ಯಶಸ್ಸು ​

ಅಂತಿಮವಾಗಿ ವಿಜಯ್ ವರ್ಧನ್‌ ರವರು 2018 ರಲ್ಲಿ 104th Rank ನೊಂದಿಗೆ ಯುಪಿಎಸ್‌ಸಿಯನ್ನು ಗೆದ್ದರು. ಈ ಫಲಿತಾಂಶದೊಂದಿಗೆ ಐಪಿಎಸ್‌ ಸೇವೆಗೆ ಸೇರುವ ಮೂಲಕ ತಮ್ಮ ಯಶಸ್ಸಿನ ಬಾಗಿಲು ಕೊನೆಗೂ ತೆರೆದು ಪ್ರವೇಶಿಸಿದರು. ಆದರೆ ಈ ಸಾಧನೆಯ ಹೊರತಾಗಿಯೂ ಅವರು ತಮ್ಮ ಗುರಿ ಇನ್ನು ಮುಟ್ಟಿರಲಿಲ್ಲ ಎಂಬುದು ಕುತೂಹಲಕಾರಿ ಆಗಿತ್ತು. ಕಾರಣ ಅವರ ಉದ್ದೇಶ ಐಎಎಸ್‌ ಸೇವೆಯ ಕಡೆ ಪ್ರೇರೇಪಿಸಿತ್ತು. ನಿರಂತರ ಪರಿಶ್ರಮದಿಂದ ತಮ್ಮ ಸಾಧನೆಗಳ ಸಾಲಿಗೆ 2021 ರಲ್ಲಿ ಸಿಎಸ್‌ಇ ಪಾಸ್‌ ಮಾಡುವ ಮೂಲಕ ತಮ್ಮ ಐಎಎಸ್‌ ಗುರಿಯನ್ನು ಮುಟ್ಟಿ, ಸೇವೆಗೆ ಸೇರಿಸಿದರು.

ಸೋಲೇ ಗೆಲುವಿನ ಮೆಟ್ಟಿಲು

ಇಲ್ಲಿ ವರ್ಧನ್‌ ರವರ ಯುಪಿಎಸ್‌ಸಿ ಪ್ರಯಾಣವು ಆತ್ಮಾವಲೋಕನ ಮತ್ತು ಹೊಂದಾಣಿಕೆಯ ಪ್ರಾಮುಖ್ಯತೆಯನ್ನು, ತಾಳ್ಮೆಯ ಪ್ರಾಮುಖ್ಯತೆಯನ್ನು ಒತ್ತಿಹೇಳುವ ಸ್ಥಿತಿಸ್ಥಾಪಕತ್ವದ ಸಾರವನ್ನು ಒಳಗೊಂಡಿದೆ. ಅವರ ಸಲಹೆಯು ಅನುಭವದ ಮೂಲಕ ಪಡೆದ ಬುದ್ಧಿವಂತಿಕೆಯನ್ನು ಪ್ರತಿಧ್ವನಿಸುತ್ತದೆ. ವ್ಯಕ್ತಿಗಳು ತಮ್ಮದೇ ಆದ ಅತ್ಯುತ್ತಮ ಶಿಕ್ಷಕರು, ತಂತ್ರಗಳನ್ನು ಹೊಂದಿಕೊಳ್ಳುವ ಇಚ್ಛೆಗಾಗಿ ಪ್ರತಿಪಾದಿಸುವಾಗ ಒಬ್ಬರ ಸಾಮರ್ಥ್ಯಗಳಲ್ಲಿ ನಂಬಿಕೆಯ ಅಗತ್ಯವನ್ನು ಅವರು ಒತ್ತಿಹೇಳುತ್ತಾರೆ. ಅವರ ಮಾರ್ಗದರ್ಶನ, ವಿಶೇಷವಾಗಿ ಅನುಭವಿ ಅರ್ಜಿದಾರರಿಗೆ, ಸ್ಥಾಯೀ ವಿಧಾನಕ್ಕೆ ಬದ್ಧವಾಗಿರುವುದಕ್ಕಿಂತ ಹೆಚ್ಚಾಗಿ ವಿಕಸನ ವಿಧಾನಗಳ ಮಹತ್ವವನ್ನು ಎತ್ತಿ ತೋರಿಸುತ್ತದೆ.

ಸೋಲಿನಿಂದ ಹತಾಶರಾಗುವವರಿಗೆ ಇವರು ಸ್ಫೂರ್ತಿಯ ಅಧ್ಯಾಯ

ವಿಜಯ್ ವರ್ಧನ್ ರವರ ಯಶಸ್ಸಿನ ಪ್ರಯಾಣವು ಕೇವಲ ಅವರ ವೈಯಕ್ತಿಕ ಸಾಧನೆಗೆ ಸಾಕ್ಷಿಯಲ್ಲ. ಯುಪಿಎಸ್‌ಸಿ ನಾಗರೀಕ ಸೇವೆಗಳ ಪರೀಕ್ಷೆ ಎಂಬ ಕಠಿಣ ದಾರಿಯಲ್ಲಿ ಸಾಗುವ ಆಕಾಂಕ್ಷಿಗಳಿಗೆ ಇದು ಭರವಸೆ ಮತ್ತು ಸ್ಫೂರ್ತಿಯ ದಾರಿದೀಪವಾಗಿದೆ. ಆತ್ಮವಿಶ್ವಾಸವನ್ನು ಹೆಚ್ಚಿಸುವ ಒಂದು ಸಾಧನವಾಗಿದೆ. ಇದು ಒಬ್ಬರ ಪರಿಶ್ರಮ ಮತ್ತು ಒಬ್ಬರ ಆಕಾಂಕ್ಷೆಗಳ ನಿರಂತರ ಅನ್ವೇಷಣೆಯ ಶಕ್ತಿಯನ್ನು ಬೆಳಗಿಸುವುದಾಗಿದೆ.
ಮನಸ್ಸಿದ್ರೆ ಮಾರ್ಗ ಖಂಡಿತ ಇದೆ ಎಂಬುದಕ್ಕೆ, ಗುರಿ ಖಂಡಿತ ಮುಟ್ಟಬಹುದು ಎಂಬುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಿಲ್ಲ.

Source : https://vijaykarnataka.com/jobs/upsc-recruitment/upsc-success-story-of-ias-vijay-wardhan-who-overcome-35-failures-to-achieve-upsc-exam/articleshow/109037085.cms?story=3

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *