
ದುಚೇರಿಯಿಂದ ವಿಚಿತ್ರ ರೀತಿಯಲ್ಲಿ 120 ಮದ್ಯದ ಬಾಟಲುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೈಮೇಲೆಲ್ಲಾ ಬಾಟಲುಗಳನ್ನು ಅಂಟಿಸಿಕೊಂಡು ತಂದಿದ್ದ. ಪುದುಚೇರಿಯಲ್ಲಿ ಮದ್ಯದ ಬೆಲೆ ತಮಿಳುನಾಡಿನ ಟಾಸ್ಮಾಕ್‌ಗಿಂತ ಕಡಿಮೆ. ಹೀಗಾಗಿ ಅಲ್ಲಿಂದ ಮದ್ಯ ಕಳ್ಳಸಾಗಣೆ ಮಾಡುವುದು ಸಾಮಾನ್ಯ. ಈಗ ವ್ಯಕ್ತಿಯೊಬ್ಬ ವಿಚಿತ್ರ ರೀತಿಯಲ್ಲಿ ಮದ್ಯ ಕಳ್ಳಸಾಗಣೆ ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ.

ಶನಿವಾರ ಪುದುಚೇರಿಯಿಂದ ಹೊಸ ರೀತಿಯಲ್ಲಿ ಮದ್ಯದ ಬಾಟಲುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದರು. ಆತ ವಿಲ್ಲುಪುರಂ ಜಿಲ್ಲೆಯ ನಾಗಮಣಿ ಎಂದು ತಿಳಿದುಬಂದಿದೆ.

ಬಂಧಿತ ನಾಗಮಣಿ ತನ್ನ ಮೈಮೇಲೆಲ್ಲಾ ಮದ್ಯದ ಬಾಟಲುಗಳನ್ನು ಅಂಟಿಸಿಕೊಂಡಿದ್ದ. ಹೊಟ್ಟೆ, ಸೊಂಟ, ಬೆನ್ನು, ತೊಡೆ, ಕಾಲುಗಳ ಮೇಲೆ ಒಟ್ಟು 120 ಬಾಟಲುಗಳನ್ನು ಟೇಪ್‌ನಿಂದ ಅಂಟಿಸಿಕೊಂಡು ತಂದಿದ್ದ.

ಅನುಮಾನದ ಮೇರೆಗೆ ನಾಗಮಣಿಯನ್ನು ತಡೆದು ಪರಿಶೀಲಿಸಿದಾಗ ಪೊಲೀಸರಿಗೆ ಆತನ ಮೈಮೇಲೆಲ್ಲಾ ಬಾಟಲುಗಳಿರುವುದು ಕಂಡುಬಂದಿತು. ಮದ್ಯದ ಬಾಟಲುಗಳನ್ನು ವಶಪಡಿಸಿಕೊಂಡ ಪೊಲೀಸರು ನಾಗಮಣಿಯನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.