ಗಾಂಧಿನಗರ: ಆಶ್ರಮದ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ ಆರೋಪದ ಮೇಲೆ ಅರೆಸ್ಟ್ ಆಗಿದ್ದ ಅಸರಾಂ ಬಾಪುಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿದೆ. 2013ರಲ್ಲಿಯೇ ಈ ಪ್ರಕರಣ ದಾಖಲಾಗಿತ್ತು. ಈಗ ಶಿಕ್ಷೆ ಪ್ರಕಟವಾಗಿದೆ.
ಅಸರಾಂ ಬಾಪು ಸ್ವಯಂ ಘೋಷಿತ ದೇವಮಾನವ. ರಾಜಸ್ಥಾನದಲ್ಲಿ ಆಶ್ರಮ ನಡೆಸುತ್ತಿದ್ದು, ಈ ಆಶ್ರಮದಲ್ಲಿ ವಾಸಿಸುತ್ತಿದ್ದ 16 ವರ್ಷದ ಬಾಲಕಿ ಮೇಲೆ ನಿರಂತರವಾಗಿ ಅತ್ಯಾಚಾರ ಮಾಡಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಬಾಲಕಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ಬಾಲಕಿಯ ದೂರಿನ ಆಧಾರದ ಮೇಲೆ 2013ರ ಸೆಪ್ಟೆಂಬರ್ 1ರಂದೇ ಅತ್ಯಾಚಾರ ಪ್ರಕರಣ ಆರೋಪದ ಮೇಲೆ ಅಸರಾಂ ಬಾಪು ಸೇರಿದಂತೆ ಮತ್ತಿಬ್ಬರು ದೂಷಿಗಳನ್ನು ಅರೆಸ್ಟ್ ಮಾಡಲಾಗಿತ್ತು. ಬಳಿಕ ಆರೋಪಿಗಳನ್ನು ಜೋಧ್ ಪುರ ಜೈಲಿಗೂ ಕಳುಹಿಸಲಾಗಿತ್ತು. ಇದೀಗ ಗಾಂಧಿನಗರದ ಸೆಷನ್ ಕೋರ್ಟ್ ತೀರ್ಪು ನೀಡಿದ್ದು, ಆರೋಪಿಗಳಿಗೆ ಜೀವಾವಧಿ ಶಕ್ಷೆ ವಿಧಿಸಿದೆ.
The post ಸ್ವಯಂ ಘೋಷಿತ ದೇವಮಾನವ ಅಸರಾಂ ಬಾಪುಗೆ ಜೀವಾವಧಿ ಶಿಕ್ಷೆ..! first appeared on Kannada News | suddione.
from ರಾಜ್ಯ ಸುದ್ದಿ – Kannada News | suddione https://ift.tt/Cqxm9pX
via IFTTT