ಚಿತ್ರದುರ್ಗ ನ. 30
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ರಾಜ್ಯದಲ್ಲಿ ರೈತರ ಸಮಸ್ಯೆಗಳು ಹೆಚ್ಚಾಗುತ್ತಿದೆ. ಈ ಹಿಂದೆ ರಾಜ್ಯ ಸರ್ಕಾರದಲ್ಲಿ ಆಡಳಿತ ನಡೆಸಿರುವ ಮುಖ್ಯ ಮಂತ್ರಿಗಳು ಲಭ್ಯವಿರುವ ಅನುದಾನದಲ್ಲಿಯೇ ಸ್ಥಳೀಯವಾಗಿಯೇ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತಿದ್ದರು. ಆದರೆ ಇಂದಿನ ದಿನದಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊAಡಿವೆ. ಈ ನಡುವೆ ಅಧಿಕಾರ ಹಂಚಿಕೆ ಎಂಬ ವಿಷಯದಲ್ಲಿ ಜನರ ದಿಕ್ಕನ್ನು ತಪ್ಪಿಸಲು ಆಡಳಿತದಲ್ಲಿರುವವರು ಮಂಗನಾಟವಾಡುತ್ತಿದ್ದಾರೆ ಇದನ್ನು ನಾಡಿನ ಜನರು ಗಮನಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ವಿಧಾನ ಪರಿಷತ್ತಿನ ವಿರೋಧಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ ತಿಳಿಸಿದ್ದಾರೆ.
ಚಿತ್ರದುರ್ಗ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈಗಿನ ಸರ್ಕಾರದ ಆಡಳಿತ ವೈಖರಿ ಭಿನ್ನವಾಗಿದೆ. ಪಕ್ಷದವರು ಕಾನೂನು ಬಾಹಿರವಾಗಿ ಅಧಿಕಾರ ಚಲಾಯಿಸುವ ಮೂಲಕ ಅನ್ಯಾಯ, ಅಕ್ರಮದ ವಿರುದ್ಧ ಹೋರಾಡುವ ಬೇರೆ ಪಕ್ಷದವರನ್ನು ಅಧಿಕಾರಿಗಳನ್ನು ನಡೆಸಿಕೊಳ್ಳುತ್ತಿರುವ ರೀತಿ ಮುಂದೆ ಆಡಳಿತ ನಡೆಸುವವರಿಗೆ, ಅಧಿಕಾರದಲ್ಲಿರುವವರಿಗೆ ಒಂದು ರೀತಿ ಪಾಠ ಹೇಳಿಕೊಡುವಂತಿದೆ ಈ ಬ್ರೇಕ್ ಫಾಸ್ಟ್ ಮೀಟಿಂಗ್‌ನಲ್ಲಿ ಇಡ್ಲಿ, ದೋಸೆ, ಉಪ್ಪಿಟ್ಟು ಬಿಟ್ಟು ಬೇರೇನೂ ಆಗಲ್ಲ, ಸಿಎಂ ಪದವಿ ಸಿದ್ದರಾಮಯ್ಯ ಅವರಿಗೆ ಎರಡೂವರೆ ವರ್ಷ ಎಂದು ಮಾತುಕತೆಯಾಗಿದೆ ಎಂದು ಡಿ.ಕೆ.ಶಿವಕುಮಾರ್ ನೇರವಾಗಿ ಹೇಳಿದ್ದಾರೆ. ಆರು ಜನರ ಮಧ್ಯೆ ಈ ಒಪ್ಪಂದ ಆಗಿದೆ ಎಂದಿದ್ದಾರೆ. ಕಾAಗ್ರೆಸ್ ಹೈಕಮಾಂಡ್‌ಗೆ ಧಂ ಇದ್ದರೆ ಈ ಒಪ್ಪಂದ ಘೋಷಿಸಬೇಕಿತ್ತು. ಆದರೆ, ಅದು ದುರ್ಬಲ ಹೈಕಮಾಂಡ್. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಫಾರಿನ್ ಟೂರ್ ಹೋಗಿದ್ದಾರೆ ಎಂದು ಟೀಕಿಸಿದರು.
ಹೈಕಮಾಂಡ್ ಕಾಂಗ್ರೆಸ್ ನಾಯಕರಿಗೆ ಜವಾಬ್ದಾರಿ ಇಲ್ಲ. ಕಾಂಗ್ರೆಸ್ ಒಂದು ಕುಟುAಬದ ಪಕ್ಷ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ ಪತ್ತೆ ಇಲ್ಲ. ಚುನಾವಣೆ ಸಂದರ್ಭದಲ್ಲಿ ನಮ್ಮದು ಭದ್ರ ಮತ್ತು ಸುಭದ್ರ ಸರ್ಕಾರ ಎಂದು ಹೇಳಿಕೆ ಕೊಟ್ಟಿದ್ದರು. ಈಗ ಅವರೇ ನಾಪತ್ತೆಯಾಗಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ದುರ್ಬಲವಾಗಿರುವುದನ್ನೇ ಈ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಸದರವಾಗಿ ತೆಗೆದುಕೊಂಡು ಸವಾರಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿ ಕಳೆದ ಎರಡುವರೆ ವರ್ಷದಿಂದ ರಾಜ್ಯದಲ್ಲಿ ಅಭಿವೃದ್ಧಿಯೇ ಇಲ್ಲ. ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಜನರ ದಿಕ್ಕು ತಪ್ಪಿಸಲು ಅಧಿಕಾರ ಹಂಚಿಕೆ ನಾಟಕವಾಡುತ್ತಿದ್ದಾರೆ ಎಂದರು. ರಾಜ್ಯದಲ್ಲಿ ಹಲವಾರು ರೀತಿಯ ಸಮಸ್ಯೆಗಳು ಇದ್ದರೂ ಸಹಾ ಅವುಗಳ ನಿವಾರಣೆಗೆ ಸರ್ಕಾರ ಮುಂದಾಗದೆ ನಿದ್ದೆ ಮಾಡುತ್ತಿದೆ, ಇದು ಜನ ವಿರೋಧಿ ಸರ್ಕಾರವಾಗಿದೆ, ಜನರ ಸಮಸ್ಯೆಗಳು ಪರಿಹಾರಕ್ಕಿಂತ ಅವರಿಗೆ ಅಧಿಕಾರ ಉಳಿಸಿಕೊಳ್ಳುವ ಹಾಗೂ ಅಧಿಕಾರ ಹಿಡಿಯುವ ಆತುರದಲ್ಲಿ ಇದ್ದಾರೆ, ಇದಕ್ಕೆ ಶೀಘ್ರವಾಗಿ ಚಿಕಿತ್ಸೆಯನ್ನು ನಿಡುವ ಅಗತ್ಯ ಇದೆ. ಈ ಸರ್ಕಾರದಲ್ಲಿ ತಮ್ಮ ಸಮುದಾಯದ ಅಭೀವೃದ್ದಿಗಿಂತ ತಮ್ಮ ಅಭೀವೃದ್ದಿಯ ಬಗ್ಗೆ ಹೆಚ್ಚಾಗಿ ಚಿಂತಿಸಲಾಗುತ್ತಿದೆ, ದಲಿತರಿಗೆ ಹೆಸರಿಗೆ ಮಾತ್ರ ಹಣವನ್ನು ಇಡಲಾಗಿದೆ ಆದ್ರೆ ಅದರಿಂದ ವರಿಗೆ ಯಾವ ಪ್ರಯೋಜವೂ ಆಗಿಲ್ಲ ಏಕೆಂದರೆ ಸಿದ್ದರಾಮಯ್ಯರವರು ಆ ಹಣವನ್ನು ತಮ್ಮ ಗ್ಯಾರೆಂಟಿಗಳಿಗೆ ಬಳಕೆ ಮಾಡಿಕೊಂಡಿದ್ದಾರೆ ದಲಿತರಿಗೆ ಚಿಪ್ಪು ನೀಡಿದ್ದಾರೆ ಎಂದು ಸರ್ಕಾರದ ವಿರುದ್ದ ಆಕ್ರೋಶವನ್ನು ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷದ ಸರ್ಕಾರದಲ್ಲಿ ದಲಿತರಿಗೆ ಸ್ಥಾನ ಇಲ್ಲ ಚುನಾವಣೆಯಲ್ಲಿ ಅವರ ಮತಗಳು ಬೇಕು ಆದರೆ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡುವುದಿಲ್ಲ, ಇಲ್ಲಿ ದಲಿತರಿಗೆ ಅನ್ಯಾಯವಾಗಿದೆ ಅವರ ಪರವಾಗಿ ಯಾರು ಧ್ವನಿಯನ್ನು ಎತ್ತುತ್ತಿಲ್ಲ ಅವರ ಪರವಾಗಿ ಅವರೇ ಧ್ವನಿಯನ್ನು ಸಹಾ ಎತ್ತಲಾಗದ ಪರಿಸ್ಥಿತಿಯಲ್ಲಿ ಅವರು ಇದ್ದಾರೆ, ನಮಗೆ ಅಧಿಕಾರವನ್ನು ನೀಡಿ ಎಂದು ಅಂಗಲಾಚುತ್ತಿದ್ದಾರೆ ಆದರೆ ಹೈಕಮಾಂಡ್ ಮಾತ್ರ ಇವರ ಧ್ವನಿಗೆ ಕಿವಿಗೂಡುತ್ತಿಲ್ಲ, ಮುಖ್ಯಮಂತ್ರಿಯನ್ನು ಬದಲಾವಣೆ ಮಾಡುವ ಶಕ್ತಿ ಹೈಕಮಾಂಡಿಗೂ ಸಹಾ ಇಲ್ಲವಾಗಿದೆ ಅವರು ಸಹಾ ಸಿದ್ದರಾಮಯ್ಯರವರ ಮುಂದೆ ಶಕ್ತಿ ಹೀನರಾಗಿದ್ದಾರೆ ಎಂದು ನಾರಾಯಣಸ್ವಾಮಿ ದೂರಿದರು.
ಗೋಷ್ಟಿಯಲ್ಲಿ ಬಿಜೆಪಿ ಅಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಮಾಜಿ ಅಧ್ಯಕ್ಷ ಎ.ಮುರಳಿ, ರೈತ ಮೋರ್ಚಾದ ಜಿಲ್ಲಾಧ್ಯಕ್ಷ ವೆಂಕಟೇಶ್ ಯಾದವ್, ಯುವ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಾರ್ಗವಿ ದೆಆವಿಡ್, ನಗರಾಧ್ಯಕ್ಷ ಲೋಕೇಶ್, ಗ್ರಾಮಾಂತರ ಅಧ್ಯಕ್ಷ ಕೆ.ನಾಗರಾಜ್, ವಕ್ತಾರ ನಾಗರಾಜ್ ಬೇದ್ರೇ, ಛಲವಾದಿ ತಿಪ್ಪೇಸ್ವಾಮಿ, ಲಿಂಗರಾಜು, ಯಶವಂತ ಸೇರಿದಂತೆ ಇತರರು ಭಾಗವಹಿಸಿದ್ದರು.
Views: 25
“ಅಧಿಕಾರ ಹಂಚಿಕೆ ನಾಟಕ, ಅಭಿವೃದ್ಧಿ ಶೂನ್ಯ: ಛಲವಾದಿ ನಾರಾಯಣಸ್ವಾಮಿ ಸರ್ಕಾರದ ವಿರುದ್ಧ ಗಂಭೀರ ಆರೋಪ”.