ಚಿತ್ರದುರ್ಗ ನಗರಸಭೆ ಪ್ರಭಾರೆ ಅಧ್ಯಕ್ಷರಾಗಿ ಶಕೀಲಬಾನು ಅಧಿಕಾರ ಸ್ವೀಕಾರ.

ಚಿತ್ರದುರ್ಗ ಆ. 30

ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್


ಚಿತ್ರದುರ್ಗ ನಗರಸಭೆಯಲ್ಲಿ ಅಧ್ಯಕ್ಷರಾಗಿದ್ದ ಶ್ರೀಮತಿ ಸುಮಿತಾರವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಪ್ರಭಾರೆ ಅಧ್ಯಕ್ಷರಾಗಿ ನಗರಸಭೆಯ ಉಪಾಧ್ಯಕ್ಷರಾದ ಶ್ರೀಮತಿ ಶಕೀಲಬಾನುರವರು ಇಂದು ನಗರಸಭೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಅಧ್ಯಕ್ಷರಾಗಿ ಆಧಿಕಾರವನ್ನು ಸ್ವೀಕಾರ ಮಾಡಿದರು.


ಚಿತ್ರದುರ್ಗ ನಗರಸಭೆಗೆ ಕಳೆದ ಒಂದು ವರ್ಷದ ಹಿಂದೆ ಶ್ರೀಮತಿ ಸುಮಿತಾರವರು ಅಧ್ಯಕ್ಷರಾಗಿ ಅಧಿಕಾರ ವನ್ನು ಸ್ವೀಕಾರ ಮಾಡಿದ್ದರು ಈಗ ಅವರ ಒಪ್ಪಂದಂತೆ ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದರಿಂದ ಅಧ್ಯಕ್ಷ ಸ್ಥಾನ ತೆರವಾಗಿತ್ತು, ಕಾನೂನು ಪ್ರಕಾರ ಅಧ್ಯಕ್ಷ ಸ್ಥಾನ ತೆರವಾದಾಗ ಉಪಾಧ್ಯಕ್ಷರು ಪ್ರಬಾರೆ ಅಧ್ಯಕ್ಷರಾಗಿ ಅಧಿಕಾರವನ್ನು ಸ್ವೀಕಾರ ಮಾಡುವುದು ಸಾಮಾನ್ಯವಾಗಿದೆ ಇದೇ ಹಿನ್ನಲೆಯಲ್ಲಿ ಇಂದು ನಡೆದ ಸಮಾರಂಭದಲ್ಲಿ ನಗರಸಭೆಯ ಉಪಾಧ್ಯಕ್ಷರಾದ ಶ್ರೀಮತಿ ಶಕೀಲಬಾನುರವರು ಅಧ್ಯಕ್ಷರಾಗಿ ಹಿಂದಿನ ಅಧ್ಯಕ್ಷರಿಂದ ಅಧಿಕಾರವನ್ನು ಸ್ವೀಕಾರ ಮಾಡಿದರು.


ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಅಧ್ಯಕ್ಷರಾದ ಶ್ರೀಮತಿ ಸಮಿತಾರವರು ಕಳೆದ ಒಂದು ವರ್ಷದಿಂದ ನಾನು ಚಿತ್ರದುರ್ಗ ನಗರಸಭೆಯ ಅಧ್ಯಕ್ಷರಾಗಿ ಅಧಿಕಾರವನ್ನು ನಡೆಸಿದ್ದೇನೆ ಈ ಸಮಯದಲ್ಲಿ ನಗರಸಭೆಯ ಪೌರಾಯುಕ್ತರು, ಎಲ್ಲಾ ಸಿಬ್ಬಂದಿಗಳು ಉತ್ತಮವಾದ ಸಹಕಾರವನ್ನು ನೀಡಿದ್ದಾರೆ, ಅಧಿಕಾರ ಶಾಶ್ವತವಲ್ಲ ಅಧಿಕಾರ ಸಿಕ್ಕಾಗ ಉತ್ತಮವಾದ ಕೆಲಸವನ್ನು ಮಾಡಬೇಕಿದೆ, ನಾವು ಮಾಡುವ ಕೆಲಸಗಳು ಶಾಶ್ವತ ನಾವು ಅಧಿಕಾರದಲ್ಲಿ ಇಲ್ಲದಿದ್ದರೂ ಸಹಾ ನಾವು ಮಾಡಿದ ಕೆಲಸಗಳು ನಮ್ಮ ಗುರುತನ್ನು ಹೇಳುತ್ತವೆ.

ಈಗ ನೂತನವಾಗಿ ಅಧ್ಯಕ್ಷರಾಗಿ ಇರುವವರೆಗೂ ಸಹಾ ಎಲ್ಲ ಸದಸ್ಯರು, ಪೌರಾಯುಕ್ತರು ಸಿಬ್ಬಂದಿಗಳು ಸಹಕಾರವನ್ನು ನೀಡುವಂತೆ ಮನವಿ ಮಾಡಿದರು.
ನೂತನ ಅಧ್ಯಕ್ಷರಾದ ಶ್ರೀಮತಿ ಶಕೀಲಬಾನು ಮಾತನಾಡಿ, ನನಗೆ ಅಧ್ಯಕ್ಷ ಸ್ಥಾನ ಸಿಕ್ಕಿರುವುದು ಸಂತೋಷವಾಗಿದೆ ಈ ಸಮಯದಲ್ಲಿ ಚಿತ್ರದುರ್ಗ ನಗರದಲ್ಲಿ ವಿವಿಧ ರೀತಿಯ ಅಭೀವೃದ್ದಿ ಕಾರ್ಯವನ್ನು ಮಾಡಲಾಗುವುದು ಇದಕ್ಕೆ ನಗರಸಭೆಯ ಸದಸ್ಯರು, ಪೌರಾಯುಕ್ತರು ಹಾಗೂ ಸಿಬ್ಬಂದಿ ಸಹಕಾರವನ್ನು ನೀಡುವಂತೆ ಮನವಿ ಮಾಡಿದರು.


ಪೌರಾಯುಕ್ತರಾದ ಶ್ರೀಮತಿ ರೇಣುಕಾರವರು ಮಾತನಾಡಿ ಚುನಾಯಿತ ಪ್ರತಿನಿಧಿಗಳಾಗುವುದು ಅತ್ಯಂತ ಕಷ್ಟದಾದ ಕೆಲಸವಾಗಿದೆ. ಚುನಾಯಿತರಾದ ಮೇಲೆ ಅಧ್ಯಕ್ಷ, ಉಪಾಧ್ಯಕ್ಷರಾಗಬೇಕೆನ್ನುವುದು ಎಲ್ಲರ ಆಸೆ ಆದರೆ ಈ ಸೌಭಾಗ್ಯ ಎಲ್ಲರಿಗೂ ಸಹಾ ಒಲಿಯುವುದಿಲ್ಲ ಕೆಲಸವರಿಗೆ ಮಾತ್ರ ದೂರಕುತ್ತದೆ, ಅಧಿಕಾರ ಸಿಕ್ಕಾಗ ಉತ್ತಮವಾದ ಕೆಲಸವನ್ನು ಮಾಡಬೇಕಿದೆ ಜನರ ಕಷ್ಟಗಳಿಗೆ ಸ್ಪಂದಿಸಬೇಕಿದೆ. ಶ್ರೀಮತಿ ಸುಮಿತಾ ರವರು ಸಹಾ ಅವರು ಅವಧಿಯಲ್ಲಿ ಉತ್ತಮವಾದ ಕೆಲಸವನ್ನು ಮಾಡಿದ್ದಾರೆ, ನೂತನ ಅಧ್ಯಕ್ಷರು ಸಹಾ ತಮ್ಮ ಅಧಿಕಾರದ ಅವಧಿಯಲ್ಲಿ ಉತ್ತಮವಾದ ಕೆಲಸವನ್ನು ಮಾಡಲಿ ಎಂದು ಆಶಿಸಿದರು.


ಈ ಸಂದರ್ಭದಲ್ಲಿ ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ನಸ್ರುಲ್ಲಾ, ಮಾಜಿ ಅಧ್ಯಕ್ಷರು ಜೆಡಿಎಸ್ ಪಕ್ಷ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಬಿ.ಕಾಂತರಾಜ್, ನಗರಸಭೆಯ ಮಾಜಿ ಸದಸ್ಯರಾದ ಮಹೇಶ್, ರಮೇಶ್, ನಿಸಾರ್, ನ್ಯಾಯಾವಾದಿಗಳಾದ ಉಮೇಶ್, ಜಯ್ಯಣ್ಣ, ಸೈಯದ್ ಸೇರಿದಂತೆ ಇತರರು ಭಾಗವಹಿಸಿದ್ದರು. 

Leave a Reply

Your email address will not be published. Required fields are marked *