ಶಕ್ತಿ ಯೋಜನೆ ಎಫೆಕ್ಟ್‌: ಬಸ್‌ ಸೀಟಿಗಾಗಿ ಚಪ್ಪಲಿಯಿಂದ ಹೊಡೆದಾಡಿಕೊಂಡ ಮಹಿಳೆಯರು, ವಿಡಿಯೋ ವೈರಲ್‌!

ಬೀದರ್‌ನಿಂದ ಕಲಬುರಗಿಗೆ ತೆರಳುವ ಬಸ್‌ನಲ್ಲಿ ಈ ಘಟನೆ ನಡೆದಿದೆ. ಓರ್ವ ಮಹಿಳೆ, “ಸೀಟು ಬಿಡು, ಇದು ನನ್ನದು” ಎಂದು ಹೇಳಿದ್ದರೆ ಮತ್ತೊಬ್ಬಳು, “ನಾನು ಸೀಟ್‌ ಬಿಡಲ್ಲ. ಏನ್‌ ಮಾಡ್ತಿ” ಎಂದು ಪ್ರಶ್ನೆ ಮಾಡಿದ್ದಾಳೆ ಎನ್ನಲಾಗಿದ್ದು, ಈ ನಡುವೆ ಇಬ್ಬರ ನಡುವೆ ಮಾರಾಮಾರಿ ನಡೆದಿದೆ. . ಗಲಾಟೆ ಜೋರಾಗುತ್ತಿದ್ದಂತೆ ಓರ್ವ ಮಹಿಳೆ ತನ್ನ ಚಪ್ಪಲಿ ತೆಗೆದು ಜಗಳ ಮಾಡುತ್ತಿದ್ದ ಮಹಿಳೆಗೆ ಹೊಡೆದಿದ್ದಾಳೆ.

ಚಪ್ಪಲಿ ಹಲ್ಲೆ ಬಳಿಕ ಮೈಮೇಲೆ ಹಾಕಿದ ಬಟ್ಟೆ ಹಿಡಿದು ಮಹಿಳೆಯರು ಎಳೆದಾಡಿಕೊಂಡಿದ್ದಾರೆ. ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Source : https://m.dailyhunt.in/news/india/kannada/kannadanewsnow-epaper-kanowcom/shakti+yojane+efekt+bas+sitigaagi+chappaliyindha+hodedaadikonda+mahileyaru+vidiyo+vairal+-newsid-n608771904?listname=topicsList&topic=for%20you&index=4&topicIndex=0&mode=pwa&action=click

Leave a Reply

Your email address will not be published. Required fields are marked *