ಶ್ರೀ ಪಾರ್ಶ್ವನಾಥ ಶಾಲೆಯಲ್ಲಿ ಶಾರದ ಪೂಜೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಮಾ. 10 : ಚಿತ್ರದುರ್ಗ ನಗರದ ಶ್ರೀ ಪಾರ್ಶ್ವನಾಥ ಶಾಲೆಯಲ್ಲಿ ಶಾರದ ಪೂಜೆ ಹಾಗೂ ಮಕ್ಕಳಿಗೆ ಬಹುಮಾನ ವಿತರಣಾ ಕಾರ್ಯಕ್ರಮವನ್ನು ನಡೆಸಲಾಯಿತು.

ಶಾಲೆಯಲ್ಲಿನ ಪ್ರೈಮರಿಯಿಂದ ಒಂಬತ್ತನೆ ತರಗತಿ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು
ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪಾರ್ಶ್ವನಾಥ ಶಾಲಾ ಸಮಿತಿ ಸದಸ್ಯ ಗೀಸುಲಾಲ್ ಮಕ್ಕಳಿಗೆ ವರ್ಷ ಪೂರ್ತಿ ಪಠ್ಯದ ಜೊತೆಗೆ
ಕ್ರೀಡೆ ಸೇರಿದಂತೆ ಇತರೆ ಚಟುವಟಿಕೆಯನ್ನು ಮಾಡಲಾಗಿದ್ದು ಮಕ್ಕಳು ಉತ್ತಮವಾದ ಪ್ರತಿಭೆಯನ್ನು ಪ್ರದರ್ಶನ ಮಾಡಿದ್ದಾರೆ.
ಶಿಕ್ಷಣದ ಜೊತೆ ಆಟ ಹಾಗೂ ಇನ್ನಿತರೆ ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡು ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸುವಂತೆ
ಮಕ್ಕಳಿಗೆ ಕರೆ ನೀಡಿದರು.

ಶಾಲಾ ಸಮಿತಿ ಅಧ್ಯಕ್ಷರಾದ ಬಾಬುಲಾಲ್ ಜೀ. ಉಪಾಧ್ಯಕ್ಷರಾದ ಉತ್ತಮ ಚಂದ್ ಸುರಾನ, ಕಾರ್ಯದರ್ಶಿ ಸುರೇಶ್ ಕುಮಾರ್,
ನಿರ್ದೆಸಕರಾದ ಮಹಾವೀರ್ ಜೈನ್, ಸುರೇಶ್ ಫಟ್ಟಿಯಾರ್, ವಿಫುಲ್ ಜೈನ್, ಮುಕೇಶ್ ಜೈನ್, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯ
ಪುಕ್‍ರಾಜ್‍ಜೈನ್, ರಾಂಜಿತ್ ಪಟ್ಟಿಯಾರ್ ಶಾಲಾ ಮೂಖ್ಯೋಪಾಧ್ಯಯರು ಶಿಕ್ಷಕರು ಪೋಷಕರು ಈ ಸಂದರ್ಭದಲ್ಲಿ ಹಾಜರಿದ್ದರು.
ಕ್ರೀಡೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು.

Leave a Reply

Your email address will not be published. Required fields are marked *