Shivarajkumar Birthday: ಸದ್ಯದಲ್ಲೇ ಡಾ. ಶಿವರಾಜ್ ಕುಮಾರ್ ಹುಟ್ಟು ಹಬ್ಬದ ಇರುವುದರಿಂದ ಅಭಿಮಾನಿಗಳು ಸಾಕಷ್ಟು ನೀರಿಕ್ಷೆ ಇಟ್ಟುಕೊಂಡಿದ್ದಾರೆ. ಇದೀಗ ಹ್ಯಾಟ್ರಿಕ್ ಹೀರೊ ಹುಟ್ಟು ಹಬ್ಬದ ಪ್ರಯುಕ್ತ ಬಿಗ್ ಸರ್ಪ್ರೈಸ್ ಕಾದಿದೆ.

ಬೆಂಗಳೂರು: ಸದ್ಯದಲ್ಲೇ ಡಾ. ಶಿವರಾಜ್ ಕುಮಾರ್ ಹುಟ್ಟು ಹಬ್ಬದ ಇರುವುದರಿಂದ ಅಭಿಮಾನಿಗಳು ಹ್ಯಾಟ್ರಿಕ್ ಹೀರೋ ಮೇಲೆ ಸಾಕಷ್ಟು ನೀರಿಕ್ಷೆ ಇಟ್ಟುಕೊಂಡಿದ್ದಾರೆ. ಈ ಬಾರಿ ಹುಟ್ಟು ಹಬ್ಬಕ್ಕೆ ಯಾವುದಾದರೂ ಸಿನಿಮಾ ಬಿಡುಗಡೆ ಇದಿಯಾ ಅಥವಾ ಹೊಸ ಯೋಜನೆ ಏನಾದರೂ ಇರಬಹುದೆಂದೆ ಎಂಬ ಹಲವು ನೀರಿಕ್ಷೆಯಲ್ಲಿದ್ದಾರೆ.
ಇದೀಗ ಹ್ಯಾಟ್ರಿಕ್ ಹೀರೊ ಹುಟ್ಟು ಹಬ್ಬದ ಪ್ರಯುಕ್ತ ಬಿಗ್ ಸರ್ಪ್ರೈಸ್ ಕಾದಿದೆ. ಜುಲೈ 12, ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅವರ ಹುಟ್ಟುಹಬ್ಬ ಇರುವುದರಿಂದ “ಘೋಸ್ಟ್” ಚಿತ್ರದ “BIG DADDY” ಎಂಬ ವಿಡಿಯೋ ಒಂದು ರೀಲಿಸ್ ಆಗಲಿದೆ ಎಂದು ನಿರ್ಮಾಪಕರು ಮಾಹಿತಿ ಹಂಚಿಕೊಂಡಿದ್ದಾರೆ.
ಈ ವಿಡಿಯೋ ಬಿಡುಗಡೆಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇನ್ನು ಈ ಚಿತ್ರವು ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿದ್ದು, ಶ್ರೀನಿ ನಿರ್ದೇಶನದದಲ್ಲಿ ಮೂಡಿದೆ.
ಕನ್ನಡ ಸೇರಿದಂತೆ ಮೂರು ಭಾಷೆಗಳಲ್ಲಿ ಈ ಚಿತ್ರ ಬರುತ್ತಿದೆ. ಈಗಾಗಲೇ “ಘೋಸ್ಟ್ ಚಿತ್ರದ ಶಿವಣ್ಣ ಲುಕ್ ಅಭಿಮಾನಿಗಳಲ್ಲಿ ಕೂತುಹಲ ಮೂಡಿಸಿದೆ. ಸದ್ಯ ಈ ಚಿತ್ರದಲ್ಲಿ ಶಿವರಾಜಕುಮಾರ್, ಅನುಪಮ್ ಖೇರ್, ಜಯರಾಂ, ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್ ಮುಂತಾದವರು ನಟಿಸಿದ್ದಾರೆ.