ಶಿವರಾತ್ರಿ ಹಬ್ಬವನ್ನು ದೇಶದ ಮೂಲೆ ಮೂಲೆಗಳಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ. ಒಂದೊಂದು ಕಡೆಗಳಲ್ಲಿ ಒಂದೊಂದು ಬಗೆಯ ಆಚರಣೆಯಿದ್ದರೂ, ಉಪವಾಸ ಹಾಗೂ ಜಾಗರಣೆಗೆ ಪ್ರಮುಖವಾಗಿರುತ್ತದೆ. ಈ ಶಿವರಾತ್ರಿಯ ಉಪವಾಸದ ವೇಳೆ ಸಬ್ಬಕ್ಕಿಯಿಂದ ಮಾಡಿದ ವಿಶೇಷ ಅಡುಗೆಯನ್ನೇ ಹೆಚ್ಚಿನವರು ಸೇವಿಸುತ್ತಾರೆ. ಈ ಅಡುಗೆಯ ವಿಧಾನವಂತೂ ತುಂಬಾನೇ ಸರಳವಾಗಿದ್ದು ಮನೆಯಲ್ಲಿ ಈ ರೆಸಿಪಿಯನ್ನೊಮ್ಮೆ ಹಬ್ಬದ ದಿನ ಟ್ರೈ ಮಾಡಬಹುದು.

ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಮಹಾಶಿವರಾತ್ರಿ ಹಬ್ಬಗಳು ಕೂಡ ಒಂದು. ದೇಶದೆಲ್ಲೆಡೆ ಮಹಾಶಿವರಾತ್ರಿಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಶಿವನ ದೇವಾಲಯಗಳಲ್ಲಿ ವಿಶೇಷ ಪೂಜೆ ಹಾಗೂ ಅಭಿಷೇಕಗಳನ್ನು ಮಾಡಲಾಗುತ್ತದೆ. ಈ ದಿನದಂದು ಭಕ್ತರ ದಂಡೇ ಶಿವಾಲಯಗಳಿಗೆ ತೆರಳಿ ದೇವರ ಕೃಪೆಗೆ ಪಾತ್ರರಾಗುತ್ತಾರೆ. ಹೆಚ್ಚಿನವರು ಜಾಗರಣೆ ಹಾಗೂ ಉಪವಾಸವನ್ನು ಮಾಡುವ ಮೂಲಕ ಹಬ್ಬವನ್ನು ಆಚರಿಸುತ್ತಾರೆ. ಈ ದಿನ ವಿಶೇಷವಾದ ಅಡುಗೆ ಮಾಡಿದರೂ ಸಬ್ಬಕ್ಕಿಯಿಂದ ಮಾಡಿದ ಒಂದಾದರೂ ತಿನಿಸು ಇರಲೇಬೇಕು. ಹೀಗಾಗಿ ಶಿವರಾತ್ರಿಯಂದು ಸಬ್ಬಕ್ಕಿ ಉಪ್ಪಿಟ್ಟು ಹಾಗೂ ಸಬ್ಬಕ್ಕಿ ಖಿಚಡಿಯನ್ನು ಮಾಡಿ ಸವಿಯಬಹುದು.
ಸಬ್ಬಕ್ಕಿ ಉಪ್ಪಿಟ್ಟು
* ಬೇಕಾಗುವ ಪದಾರ್ಥಗಳು:
* ಸಬ್ಬಕ್ಕಿ (ಸಾಬುದಾನ)
* ಶೇಂಗಾ
* ಹಸಿಮೆಣಸು
* ಸಾಸಿವೆ
* ಜೀರಿಗೆ
* ಉಪ್ಪು
* ಎಣ್ಣೆ
ಸಬ್ಬಕ್ಕಿ ಉಪ್ಪಿಟ್ಟು ಮಾಡುವ ವಿಧಾನ:
* ಒಂದು ಪಾತ್ರೆಗೆ ಎಣ್ಣೆ ಹಾಕಿ ಬಿಸಿಯಾದ ಬಳಿಕ ಸಾಸಿವೆ, ಜೀರಿಗೆ, ಕರಿಬೇವು ಹಾಕಿ ಒಗ್ಗರಣೆ ಮಾಡಿಕೊಳ್ಳಿ.
* ಈಗಾಗಲೇ ಹುರಿದು ಪುಡಿ ಮಾಡಿದ ಶೇಂಗಾದ ಪುಡಿ, ಕತ್ತರಿಸಿಟ್ಟ ಹಸಿಮೆಣಸು ಸೇರಿಸಿಕೊಳ್ಳಿ.
* ಇದಕ್ಕೆ ನೆನೆಸಿಟ್ಟ ಸಬ್ಬಕ್ಕಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
* ಕೊನೆಗೆ ಅಗತ್ಯವಿರುವಷ್ಟು ನೀರು ಸೇರಿಸಿ ಬೇಯಿಸಿಕೊಳ್ಳಿ. ಸಬ್ಬಕ್ಕಿ ಚೆನ್ನಾಗಿ ಬೆಂದ ಬಳಿಕ ಸ್ಟವ್ ಆಫ್ ಮಾಡಿದರೆ ಸಬ್ಬಕ್ಕಿ ಉಪ್ಪಿಟ್ಟು ಸವಿಯಲು ಸಿದ್ಧ.
ಸಬ್ಬಕ್ಕಿ ಖಿಚಡಿ
* ಬೇಕಾಗುವ ಪದಾರ್ಥಗಳು:
* ಸಬ್ಬಕ್ಕಿ
* ಆಲೂಗಡ್ಡೆ
* ಹಸಿಮೆಣಸು
* ಪುಡಿ ಮಾಡಿದ ಶೇಂಗಾ
* ತುಪ್ಪ
* ಜೀರಿಗೆ
* ಕರಿಬೇವು
* ನಿಂಬೆರಸ
* ಉಪ್ಪು
* ಕೊತ್ತಂಬರಿ ಸೊಪ್ಪು.
ಸಬ್ಬಕ್ಕಿ ಖಿಚಡಿ ಮಾಡುವ ವಿಧಾನ:
* ಮೊದಲಿಗೆ ಸಬ್ಬಕ್ಕಿಯನ್ನು 4 ರಿಂದ 5 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ.
* ಸಬ್ಬಕ್ಕಿಯನ್ನು ನೀರಿನಿಂದ ತೆಗೆದು ಬೇರೆ ಪಾತ್ರೆಗೆ ವರ್ಗಾಯಿಸಿ ಕೊಳ್ಳಿ.
* ಈಗ ಗ್ಯಾಸ್ ಮೇಲೆ ಬಾಣಲೆಯನ್ನು ಇಟ್ಟು, ಸ್ವಲ್ಪ ತುಪ್ಪ ಹಾಕಿ ಬಿಸಿಯಾದ ಮೇಲೆ ಅದಕ್ಕೆ ಜೀರಿಗೆ, ಸಾಸಿವೆ ಕರಿಬೇವು ಹಾಗೂ ಹಸಿಮೆಣಸು ಹಾಕಿ ಚೆನ್ನಾಗಿ ಹುರಿದುಕೊಳ್ಳಿ.
* ಚೆನ್ನಾಗಿ ಬೇಯಿಸಿಟ್ಟ ಹಿಚುಕಿಟ್ಟ ಆಲೂಗಡ್ಡೆಯಲ್ಲಿ ಸೇರಿಸಿ ಎಲ್ಲವನ್ನು ಚೆನ್ನಾಗಿ ಬೆರೆಸಿಕೊಳ್ಳಿ. ಆ ಬಳಿಕ ನೆನೆಸಿಟ್ಟ ಸಬ್ಬಕ್ಕಿ ಹಾಗೂ ಶೇಂಗಾ ಪುಡಿ ಹಾಕಿ ಸ್ವಲ್ಪ ಹೊತ್ತು ಬೇಯಲು ಬಿಡಿ. ಕೊನೆಗೆ ನಿಂಬೆರಸವನ್ನು ಹಿಂಡಿದರೆ ಘಮ್ ಘಮ್ ಎನಿಸುವ ಸಬ್ಬಕ್ಕಿ ಖಿಚಿಡಿ ಸವಿಯಲು ಸಿದ್ಧ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1