ಚಿತ್ರದುರ್ಗ: ಶ್ರೀ ಪಾಲ್ಗುಣೇಶ್ವರ ಸ್ವಾಮಿ ದೇಗುಲದಲ್ಲಿ ಶಿವರಾತ್ರಿ ಸಂಭ್ರಮ ಆರಂಭ.

ಚಿತ್ರದುರ್ಗ ಫೆ. 06 ನಗರದ ಬುರುಜನಹಟ್ಟಿಯ ಸಾವಂತನರಹಟ್ಟಿಯಲ್ಲಿನ ಶ್ರೀ ಪಾಲ್ಗುಣೇಶ್ವರಸ್ವಾಮಿ ಪ್ರಸನ್ನ ಶ್ರೀ ಪಾಲ್ಗುಣೇಶ್ವರ ಮತ್ತು ಶ್ರೀ ಆಂಜನೇಯಸ್ವಾಮಿ ಸೇವಾ ಸಮಿತಿವತಿಯಿಂದ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀ ಪಾಲ್ಗುಣೇಶ್ವರ ದೇವಸ್ಥಾನದಲ್ಲಿ ಫೆ. 06 ರಿಂದ 15ರವರೆಗೆ ಪ್ರತಿ ದಿನ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಹಿನ್ನಲೆಯಲ್ಲಿ ಫೆ. 06 ಶುಕ್ರವಾರ ಬೆಳಗ್ಗೆ ನಗರದ ಶ್ರೀ ನೀಲಕಂಠೇಶ್ವರ ದೇವಸ್ಥಾನ ದಿಂದ ಶ್ರೀ ಪಾಲ್ಗುಣೇಶ್ವರ ಸ್ವಾಮಿಯ ನೂತನವಾಗಿ ನಿರ್ಮಿಸಿದಂತೆ ಮೂರ್ತಿಯ ಮುಖಪದ್ಮ,  ಪ್ರಭಾವಳಿ ಯನ್ನು ಲೋಕಾರ್ಪಾಣೆ ಕಾರ್ಯಕ್ರಮವನ್ನು ನಡೆಸಲಾಯಿತು. 

ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಮಾದಾರ ಚನ್ನಯ್ಯ ಶ್ರೀಗಳು ಶ್ರೀ ಪಾಲ್ಗುಣೇಶ್ವರ ಸ್ವಾಮಿಗೆ ನೂತನ ವಾಗಿ ನಿರ್ಮಿಸಿದಂತೆ ಮೂರ್ತಿಯ ಮುಖಪದ್ಮ, ಪ್ರಭಾವಳಿಯನ್ನು ಲೋಕಾರ್ಪಾಣೆಯನ್ನು ಮಾಡಿದರು. 

ಈ ಸಂದರ್ಭದಲ್ಲಿ ನಗರದ ರಾಜ್ಯಬೀದಿಗಳಲ್ಲಿ ಮುಖಪದ್ಮ,ಪ್ರಭಾವಳಿಯನ್ನು ಬೆಳ್ಳಿ ರಥದಲ್ಲಿ ಇರಿಸಿ ವೀರಗಾಸೆ, ಟಾಷ್ಯೂ, ಕಹಳೆ, ಡೊಳ್ಳು ಸೇರಿದಂತೆ ವಿವಿಧ ರಿತಿಯ ಜಾನಪದ ಕಲಾತಂಡಗಳು ಭಾಗವಹಿ ಸಿದ್ದವು. ನಗರದ ಶ್ರೀ ನೀಲಕಂಠೇಶ್ವರ ದೇವಸ್ಥಾನ ದಿಂದ ಶ್ರೀ ಪಾಲ್ಗುಣೇಶ್ವರ ಸ್ವಾಮಿಯ ನೂತನವಾಗಿ ನಿರ್ಮಿಸಿದಂತೆ ಮೂರ್ತಿಯ ಮುಖಪದ್ಮ, ಪ್ರಭಾವಳಿಯನ್ನು ಮೆರವಣಿಗೆ ಮುಖಾಂತರ ಶ್ರೀ ಪಾಲ್ಗುಣೇಶ ಸ್ವಾಮಿ ದೇವಸ್ಥಾನಕ್ಕೆ ಅರ್ಪಣೆ ಮಾಡಲಾಯಿತು.

ಫೆ. 07 ನೇ ಶನಿವಾರದಂದು ಬೆಳಗ್ಗೆ 10ಗಂಟೆಗೆ ಶ್ರೀ ಪಾಲ್ಗುಣೇಶ್ವರ ಸ್ವಾಮಿಯ ದೇವಸ್ಥಾನದಲ್ಲಿ ವಿಶೇಷ ಪೂಜೆ, ಈ ಪೂಜೆ ಕಾರ್ಯಕ್ರಮಕ್ಕೆ ಡಾ. ಮಹರ್ಷಿ ಆನಂದ ಗುರೂಜೀ ಈ ಪೂಜಾ ಕಾರ್ಯಕ್ರಮಕ್ಕೆ ಭಾಗವಹಿಸಲಿದ್ದು, ಸಂಜೆ 5 ಗಂಟೆಗೆ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಡಾ. ಮಹರ್ಷಿ ಆನಂದ ಗುರೂಜಿ ರವರಿಂದ ಸ್ವಾಮಿಯ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಫೆ. 08 ನೇ ಭಾನುವಾರದಂದು ಚಿತ್ರದುರ್ಗ ನಗರದೇವತೆಗಳಾದ ನವದುರ್ಗೆಯರ ಸಿಹಿನೀರು ಹೊಂಡದ ಆವರಣದಲ್ಲಿ ಗಂಗಾಪೂಜಾ ಕಾರ್ಯಕ್ರಮ ನಂತರ ರಾಜಬೀದಿಗಳಲ್ಲಿ ಮೆರವಣಿಗೆ ಮುಖಾಂತರ ಶ್ರೀ ಪಾಲ್ಗುಣೇಶ್ವರ ಸ್ವಾಮಿ ಸನ್ನಿದಿಗೆ ತಲುಪಲಿದೆ.  ಫೆ. 09 ನೇ ಸೋಮವಾರದಂದು ಶ್ರೀ ಪಾಲ್ಗುಣೇಶ್ವರ ಸ್ವಾಮಿ ದೇವಸ್ಥಾನದಲ್ಲಿ ರುದ್ರ ಹೋಮ ಹಾಗೂ ಪ್ರಸಾದ ವಿನಿಯೋಗ ಫೆ. 10ನೇ ಮಂಗಳವಾರದಂದು ಶ್ರೀ ಪಾಲ್ಗುಣೇಶ್ವರ ಸ್ವಾಮಿ ದೇವಸ್ಥಾನ ಆವರಣದಲ್ಲಿ ಕೀರ್ತಿ ಆಸ್ಪತ್ರೆ, ಸಹಕಾರದೊಂದಿಗೆ ಮಹಿಳೆಯರಿಗೆ ಸ್ತನ ಕ್ಯಾನ್ಸರ್ & ಗರ್ಭಕಂಠದ ಕ್ಯಾನ್ಸರ್ ಕಾಯಿಲೆ ಬರದಂತೆ ಎಚ್‍ಪಿವಿ ವ್ಯಾಕ್ಸಿನ್‍ನ್ನು ದೇವಸ್ಥಾನವತಿಯಿಂದ ನೀಡಲಾಗುವುದು ಫೆ. 11ನೇ ಬುಧವಾರದಂದು ಕಾಶಿಯ ಲ್ಲಿರುವ ಮುಖ್ಯ ಅರ್ಚಕರಾದ ಶ್ರೀಕಾಶಿ ವಿಶ್ವನಾಥನರವರಿಂದ  ಶ್ರೀ ಪಾಲ್ಗುಣೇಶ್ವರ ಸ್ವಾಮಿಗೆ ಗಂಗಾರತಿ ಪೂಜೆ ಮತ್ತು ವಿಶೇಷ ಪೂಜೆ ಫೆ, 12 ನೇ ಗುರುವಾರದಂದು ಶ್ರೀ ಪಾಲ್ಗುಣೇಶ್ವರ ಸ್ವಾಮಿಯ ಮೂರ್ತಿಗೆ ಅರ್ಧನಾರೀಶ್ವರನ ಅವತಾರದ ವಿಶೇಷ ಪೂಜೆ ಮತ್ತು ಜಿಲ್ಲೆಯ ಮಂಗಳಮುಖಿಯರಿಗೆ ಬಾಗಿನ ಸಮರ್ಪಣೆ ಫೆ. 13ನೇ ಶುಕ್ರವಾರದಂದು ಶ್ರೀ ಪಾಲ್ಗುಣೇಶ್ವರ ಸ್ವಾಮಿಗೆ ಮಧ್ಯಪದೇಶದ ಉಜ್ಜಿಯಿನಿಯ ಮಹಾಕಾಳೇಶ್ವರನ ಅಲಂಕಾರದ ರೀತಿ ವಿಶೇಷ ಪೂಜೆ ಫೆ.14ನೇ ಶನಿವಾರದಂದು ಶ್ರೀ ಪಾಲ್ಗುಣೇಶ್ವರ ಸ್ವಾಮಿಯ ದೇವಸ್ಥಾನದಲ್ಲಿ ಶ್ರೀ ನಂದಿ ಕಾಮಧೇನುವಿನ ವಿಶೇಷ ಪೂಜೆ ಫೆ.15ನೇ ಭಾನುವಾರದಂದು ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀ ಪಾಲ್ಗುಣೇಶ್ವರ ಸ್ವಾಮಿಗೆ ಹೂವಿನ ಅಲಾಂಕರದೊಂದಿಗೆ ಪೂಜೆ ಕಾರ್ಯಕ್ರಮ ಹಾಗೂ ರಾತ್ರಿಯಿಂದ ಅಖಂಡ ಭಜನೆ ಕಾರ್ಯಕ್ರಮ ನಡೆಯಲಿದೆ ಎಂದರು.

ನಗರದ ಬುರುಜನಹಟ್ಟಿಯ ಸಾವಂತನರಹಟ್ಟಿಯಲ್ಲಿನ ಶ್ರೀ ಪಾಲ್ಗುಣೇಶ್ವರಸ್ವಾಮಿ ಪ್ರಸನ್ನ ಶ್ರೀ ಪಾಲ್ಗುಣೇಶ್ವರ ಮತ್ತು ಶ್ರೀ ಆಂಜನೇಯಸ್ವಾಮಿ ಸೇವಾ ಸಮಿತಿ (ರಿ.) ಸಮಿತಿಯ ಅಧ್ಯಕ್ಷರಾದ ಹೆಚ್.ರಂಗಸ್ವಾಮಿ ಶ್ರೀ ಪಾಲ್ಗುಣೇಶ್ವರ ದೇವಸ್ಥಾನ ಸೇವಾ ಸಮಿತಿಯ ಮೇಲ್ವಿಚಾರಕ ಉಸ್ತುವಾರಿಗಳು ನಗರಸಭೆಯ ಮಾಜಿ ಸದಸ್ಯ ರಾದ ಎಸ್.ಬಿ.ಎಲ್, ಮಲ್ಲಿಕಾರ್ಜುನ್ ಜಿ.ಪಂ.ನ ಮಾಜಿ ಸದಸ್ಯರಾದ ಗುರುಮೂರ್ತಿ, ಎಸ್.ಟಿ. ನವೀನ್ ಕುಮಾರ್, ನಗರಾಭೀವೃದ್ದಿ ಪ್ರಾಧಿಕಾರ ಮಾಜಿ ಅಧ್ಯಕ್ಷರಾದ ಬಿ.ಟಿ.ಜಗದೀಶ್, ಗುರುಮೂರ್ತಿ, ಮುದ್ದಣ್ಣ, ಶೈಲೇಂಧ್ರ, ಮಹೇಶ್, ವೆಂಕಟೇಶ್, ಮಧು, ಲತಾ ಜೈನ್ ಸೇರಿದಂತೆ ಇತರರು ಭಾಗವಹಿಸಿದ್ದರು. 

Few SEO tags in English with commas please

Leave a Reply

Your email address will not be published. Required fields are marked *