Shoaib Malik: ಇಬ್ಬರಿಗೂ ಟೈಮ್ ಸಿಗುತ್ತಿಲ್ಲ: ಸಾನಿಯಾ ಜೊತೆಗಿನ ವಿಚ್ಛೇದನ ವದಂತಿ ಬಗ್ಗೆ ಮಲಿಕ್ ಸ್ಪಷ್ಟನೆ

ಕಳೆದ ಕೆಲವು ತಿಂಗಳುಗಳಿಂದ ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರ ವೈಯಕ್ತಿಕ ಬದುಕಿನಲ್ಲಿ ಉಂಟಾಗಿರುವ ಬಿರುಕಿನ ಬಗ್ಗೆ ಸಾಕಷ್ಟು ವದಂತಿಗಳು ಹರಿದಾಡುತ್ತಿವೆ. ಇವರಿಬ್ಬರು ವಿಚ್ಛೇದನ ನೀಡಲಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಲೇ ಇದೆ.ಆದರೆ, ಈ ಬಗ್ಗೆ ಈ ಜೋಡಿಗಳು ಇದುವರೆಗೂ ಯಾವುದೇ ಅಧಿಕೃತ ಹೇಳಿಕೆ ನೀಡಿರಲಿಲ್ಲ. ಆದರೀಗ ಈ ಬಗ್ಗೆ ಸಂದರ್ಶನವೊಂದರಲ್ಲಿ ಶೋಯೆಬ್ ಮಲಿಕ್ ಸ್ಪಷ್ಟನೆ ನೀಡಿದ್ದಾರೆ. ವಿಚ್ಛೇದನ ನೀಡಲಿದ್ದಾರೆ ಎನ್ನುವ ವದಂತಿಯನ್ನು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್ ತಳ್ಳಿ ಹಾಕಿದ್ದಾರೆ.ಒತ್ತಡದ ವೇಳಾಪಟ್ಟಿಯಿಂದಾಗಿ ಇಬ್ಬರು ಸುಮಾರು ದಿನಗಳಿಂದ ಒಟ್ಟಿಗೆ ಕಾಣಿಸಿಕೊಳ್ಳುತ್ತಿಲ್ಲವಷ್ಟೆ. ನಮ್ಮಿಬ್ಬರ ನಡುವಿನ ವಿಚ್ಛೇದನ ವದಂತಿ ಆಧಾರರಹಿತವಾಗಿದೆ. ಇಬ್ಬರು ಬೇರೆ ಬೇರೆಯೂ ಆಗಿಲ್ಲ ಎಂದು ಈದ್‌ ಕಾರ್ಯಕ್ರಮವೊಂದರಲ್ಲಿ ಮಲಿಕ್ ಹೇಳಿದ್ದಾರೆ.ಮೊನ್ನೆಯಷ್ಟೆ ಈದ್‌ನ ದಿನ ಕೂಡ ಇವರಿಬ್ಬರು ಜೊತೆಯಾಗಿ ಕಾಣಿಸಿಕೊಂಡಿರಲಿಲ್ಲ. ಈ ಬಗ್ಗೆ ಸ್ಷಷ್ಟನೆ ನೀಡುರುವ ಮಲಿಕ್, ಈದ್‌ನ ದಿನದಂದು ಪತ್ನಿ ಹಾಗೂ ನನ್ನ ಮಗ ನನ್ನ ಜತೆ ಇಲ್ಲ. ಅವರ ಜತೆ ಈದ್‌ ಆಚರಿಸಲು ಬಯಸಿದ್ದೆ. ಆದರೆ, ಸಾನಿಯಾ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಬ್ಯೂಸಿ ಆಗಿದ್ದಾರೆ ಎಂದು ಅವರು ಹೇಳಿದರು.ಈ ಜೋಡಿಯ ನಡುವೆ ಬಿರುಕು ಮೂಡಲು ಶೋಯೆಬ್ ಅವರ ಅಕ್ರಮ ಸಂಬಂಧ ಕಾರಣವೆಂದು ಈ ಹಿಂದೆ ಪಾಕ್ ಮೀಡಿಯಾಗಳು ವರದಿ ಮಾಡಿತ್ತು. ಕಳೆದ ವರ್ಷ ಶೋಯೆಬ್ ಮಲಿಕ್ ಪಾಕಿಸ್ತಾನಿ ನಟಿ ಆಯೇಶಾ ಒಮರ್ ಜೊತೆ ಹಾಟ್ ಫೋಟೋಶೂಟ್ ಮಾಡಿದ್ದರು. ಇದರಲ್ಲಿ ಸ್ವಿಮ್ಮಿಂಗ್ ಪೂಲ್‌ನಲ್ಲಿ ತೆಗೆದಿದ್ದ ಅವರಿಬ್ಬರ ಹಾಟ್ ಫೋಟೋಗಳೂ ಇದ್ದವು.2010 ರಲ್ಲಿ ಶೋಯೆಬ್ ಮಲಿಕ್ ಮತ್ತು ಸಾನಿಯಾ ಮಿರ್ಜಾ ವಿವಾಹವಾಗಿದ್ದರು. ಈ ದಂಪತಿಗಳಿಗೆ 2018 ರಲ್ಲಿ ಗಂಡು ಮಗು ಕೂಡ ಜನಿಸಿತ್ತು.

source https://tv9kannada.com/photo-gallery/cricket-photos/shoaib-malik-said-that-he-wanted-to-spend-time-with-sania-mirza-on-eid-kannada-news-vb-au48-563216.html

Leave a Reply

Your email address will not be published. Required fields are marked *