Shocking News: ಸಾಕು ಬೆಕ್ಕು ಕಚ್ಚಿ ತಂದೆ-ಮಗ ದಾರುಣ ಸಾವು..!

ಬೆಕ್ಕಿನಲ್ಲಿ ರೇಬೀಸ್ ರೋಗಲಕ್ಷಣಗಳು ಕಂಡುಬಂದರೂ ಸಹ ಆತನ ಕುಟುಂಬಸ್ಥರು ನಿರ್ಲಕ್ಷಿಸಿದ್ದರು. ಮೊದಲು ಶಿಕ್ಷಕನಿಗೆ ನಂತರ ಅವರ 24ರ ಹರೆಯದ ಮಗನಿಗೆ ಬೆಕ್ಕು ಕಚ್ಚಿತ್ತು.  ಹೀಗಾಗಿ ರೇಬೀಸ್ ರೋಗದಿಂದ ಒಂದೇ ವಾರದಲ್ಲಿ ತಂದೆ-ಮಗ ಸಾವನ್ನಪ್ಪಿದ್ದಾರೆ.

  • ಸಾಕು ಬೆಕ್ಕು ಕಚ್ಚಿ ತಂದೆ-ಮಗ ದಾರುಣವಾಗಿ ಸಾವನ್ನಪ್ಪಿದ್ದಾರೆ
  • ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿರುವ ಆಘಾತಕಾರಿ ಘಟನೆ
  • ರೇಬೀಸ್ ಸೋಂಕಿಗೆ ಒಳಗಾದ ನಾಯಿ ಮೃತ ಶಿಕ್ಷಕರ ಬೆಕ್ಕಿಗೆ ಕಚ್ಚಿತ್ತು

ನವದೆಹಲಿ: ಸಾಕು ಬೆಕ್ಕು ಕಚ್ಚಿ ತಂದೆ-ಮಗ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಒಂದೇ ವಾರದಲ್ಲಿ ಸರ್ಕಾರಿ ಶಾಲೆಯ ಶಿಕ್ಷಕ ಮತ್ತು ಅವರ ಮಗ ರೇಬೀಸ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ವರದಿಗಳ ಪ್ರಕಾರ ಸೆಪ್ಟೆಂಬರ್‌ ತಿಂಗಳಿನಲ್ಲಿ ರೇಬೀಸ್ ಸೋಂಕಿಗೆ ಒಳಗಾದ ನಾಯಿಯೊಂದು ಮೃತ ಶಿಕ್ಷಕರ ಸಾಕು ಬೆಕ್ಕಿಗೆ ಕಚ್ಚಿತ್ತು. ಬೆಕ್ಕಿನಲ್ಲಿ ರೇಬೀಸ್ ರೋಗಲಕ್ಷಣಗಳು ಕಂಡುಬಂದರೂ ಸಹ ಆತನ ಕುಟುಂಬಸ್ಥರು ನಿರ್ಲಕ್ಷಿಸಿದ್ದರು. ಮೊದಲು ಶಿಕ್ಷಕನಿಗೆ ನಂತರ ಅವರ 24ರ ಹರೆಯದ ಮಗನಿಗೆ ಬೆಕ್ಕು ಕಚ್ಚಿತ್ತು.  ಹೀಗಾಗಿ ರೇಬೀಸ್ ರೋಗದಿಂದ ಒಂದೇ ವಾರದಲ್ಲಿ ತಂದೆ-ಮಗ ಸಾವನ್ನಪ್ಪಿದ್ದಾರೆ.

ಕುಟುಂಬಸ್ಥರ ಪ್ರಕಾರ, ಬೆಕ್ಕಿಗೆ ರೇಬೀಸ್ ರೋಗ ಇರುವುದು ತಿಳಿದಿರಲಿಲ್ಲ. ಮನೆಯಲ್ಲಿ ಬೆಕ್ಕು ಆಟವಾಡುತ್ತಾ ತಂದೆ ಮತ್ತು ಮಗ ಇಬ್ಬರಿಗೂ ಕಚ್ಚಿತ್ತು. ಆದರೆ ಬೆಕ್ಕು ಕಚ್ಚಿ ಮಾಡಿದ್ದ ಗಾಯಗಳಿಗೆ ಸಾಮಾನ್ಯ ಚಿಕಿತ್ಸೆಯನ್ನಷ್ಟೇ ತೆಗೆದುಕೊಂಡಿದ್ದರು. ಇದಲ್ಲದೆ ಆಂಟಿ ರೇಬೀಸ್ ಲಸಿಕೆ ಪಡೆಯುವ ಬದಲು, ಆಂಟಿಟೆಟನಸ್ ಚುಚ್ಚುಮದ್ದನ್ನು ತೆಗೆದುಕೊಂಡಿದ್ದರಂತೆ.

ಕೆಲವೇ ದಿನಗಳಲ್ಲಿ ಬೆಕ್ಕು ಸಾವನ್ನಪ್ಪಿದ್ದರೂ ಮನೆಯವರು ಈ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ನವೆಂಬರ್ 21ರಂದು ಕುಟುಂಬಸ್ಥರ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಭೋಪಾಲ್‌ಗೆ ತೆರಳಿತ್ತು. ಅಲ್ಲಿ ಶಿಕ್ಷಕ ಮತ್ತು ಅವರ ಪುತ್ರನ ಆರೋಗ್ಯ ಹದಗೆಡಲು ಪ್ರಾರಂಭಿಸಿತ್ತು. ಇದಾದ ಕೆಲವೇ ದಿನಗಳಲ್ಲಿ ಇಬ್ಬರೂ ಸಾವನ್ನಪ್ಪಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಿಕ್ಷಕರ ಮನೆಯ ನೆರೆಹೊರೆಯಲ್ಲಿ ರೇಬೀಸ್ ರೋಗದ ಭೀತಿ ಹರಡಿದ್ದರಿಂದ ಜನರು ಆತಂಕದಲ್ಲಿದ್ದಾರೆ. ಸೋಂಕು ತಗುಲಿದೆಯೇ ಇಲ್ಲವೋ ಎಂದು ದೃಢಪಡಿಸಿಕೊಳ್ಳಲು ಇತರ ಎಲ್ಲಾ ಕುಟುಂಬ ಸದಸ್ಯರ ರಕ್ತದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *