
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಫೆ. 04 : ಸಮಾಜಕ್ಕೆ ಏನಾದರೂ ಮಾಡಬೇಕೆಂದು ಸದಾ ಹಂಬಲವನ್ನು ನನ್ನದೊಂದಿಗೆ ವ್ಯಕ್ತಪಡಿಸುತ್ತಿದ್ದವರು ಮಂಜುನಾಥ್ ಎಂದು ರಾಜ್ಯಸಭಾ ಮಾಜಿ ಸದಸ್ಯರಾದ ಹೆಚ್. ಹನುಮಂತಪ್ಪ ವ್ಯಕ್ತಪಡಿಸಿದರು.
ಚಿತ್ರದುರ್ಗ ಎಸ್ ನಿಜಲಿಂಗಪ್ಪ ಸ್ಮಾರಕದ ಧರ್ಮದರ್ಶಿ ಎಸ್.ಜಿ. ಮಂಜುನಾಥ ಅವರ ನಿಧನದ ಅಂಗವಾಗಿ ಸೀಬಾರದ ಎಸ್
ನಿಜಲಿಂಗಪ್ಪ ಸ್ಮಾರಕದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರದ್ದಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಹನುಮಂತಪ್ಪರವರು,
ಮಂಜುನಾಥ್‍ರವರ ಕಡಾ ಖಂಡಿತವಾದಿಯಾಗಿದ್ದರು, ಅವರು ಅಂದುಕೊಂಡಿದ್ದು ಆಗಲೇಬೇಕಿತ್ತು ಇವರು ನಿಜಲಿಂಗಪ್ಪರವರ
ಫೌಂಡೇಷನ್‍ನ್ನು ಹುಟ್ಟು ಹಾಕುವುದರ ಮೂಲಕ ಚಿತ್ರದುರ್ಗ ಹಾಗೂ ಬೆಂಗಳೂರಿನಲ್ಲಿ ಉತ್ತಮವಾದ ಕೆಲಸವನ್ನು ಮಾಡಿದ್ದಾರೆ.
ಏಕೀಕೃತ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರಾಗಿದ್ದ ಎಸ್ ಗುರುನಾಥಪ್ಪ ಅವರ ಪುತ್ರರಾಗಿದ್ದು,ಪತ್ರಿಕಾ ಪ್ರತಿನಿಧಿಯಾಗಿ, ಚಿತ್ರದುರ್ಗ
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಬೆಂಗಳೂರಿನ ಶ್ರೀ ಎಸ್. ನಿಜಲಿಂಗಪ್ಪ ಫೌಂಡೇಷನ್‍ನ ಕಾರ್ಯದರ್ಶಿ, ಕರ್ನಾಟಕ
ಫಿಲಂಸ್ ಕಾರ್ಯದರ್ಶಿಯಾಗಿ ಚಿತ್ರದುರ್ಗ ಎಸ್ ನಿಜಲಿಂಗಪ್ಪ ಮೆಮೋರಿಯಲ್ ಟ್ರಸ್ಟ್ ನಿರ್ದೇಶಕರಾಗಿ ಕೆಲಸ ನಿರ್ವಹಿಸಿದ್ದಾರೆ.
ಇದ್ದಲ್ಲದೆ ಸಿಬಾರದ ಈ ಪುಣ್ಯ ಭೂಮಿಗೆ ನನ್ನನ್ನು ಕಾರ್ಯದರ್ಶಿಯನ್ನಾಗಿ ಮಾಡಿ ಟ್ರಸ್ಟ್‍ನಲ್ಲಿ ಇರುವಂತೆ ಮಾಡಿದ್ದಾರೆ ಎಂದು ಅವರ
ಕಾರ್ಯವನ್ನು ಸ್ಮರಿಸಿದರು.
ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಅಧಿಕಾರಿಯಾದ ಡಿ.ಎಂ.ಶ್ರೀಧರ್ ಮಾತನಾಡಿ, ಮಂಜುನಾಥ್ ಹಾಗು ನಮ್ಮ ಒಡನಾಟ ಕಳೆದ
40 ವರ್ಷಗಳಿಂದ ಇದೆ. ಚಿತ್ರದುರ್ಗದಲ್ಲಿ ದಿ.ನಿಜಲಿಂಗಪ್ಪರವರ ಟ್ರಸ್ಟ್ ನಿರ್ಮಾಣ ವಾಗಲು ಇದ್ದಲ್ಲದೆ ನಿಜಲಿಂಗಪ್ಪರವರ ಸ್ಮಾರಕ
ನಿರ್ಮಾಣವಾಗಲು ಅವರನ್ನು ಒಪ್ಪಿಸಲು ಪ್ರಮುಖವಾಗಿ ಇವರು ಕಾರಣರಾಗಿದ್ದಾರೆ. ಇದ್ದಲ್ಲದೆ ಇವರು ಸರಳ ಹಾಗೂ ಸಜ್ಜನಿಕೆಯ
ವ್ಯಕ್ತಿಯಾಗಿದ್ದರು ಎಂದರು.
ಇದೇ ಸಂದರ್ಭದಲ್ಲಿ ಕೆಇಬಿ ಷಣ್ಮುಖಪ್ಪ, ಮುರುಗೇಸ್ ಮಂಜುನಾಥ್ ರವರ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ವೀರಶೈವ
ಸಮಾಜದ ಅಧ್ಯಕ್ಷರಾದ ಎಸ್,ಎಣ್,ತಿಪ್ಪೇಸ್ವಾಮಿ, ಪತ್ರಕರ್ತರಾದ ಉಜ್ಜನಪ್ಪ, ಬಸವರಾಜು, ಪ್ರಕಾಶ್ ಗುತ್ತಿನಾಡು, ಗ್ರಾಮೀಣ
ಬ್ಯಾಂಕ್ ನಿವೃತ್ತ ಅಧಿಕಾರಿ ಕಿರಣ್ ಶಂಕರ್, ವೈಜ್ಞಾನಿಕ ಪರಿಷತ್ ಅಧ್ಯಕ್ಷರಾದ ನಾಗರಾಜ್ ಸಂಗಂ, ಸೇರಿದಂತೆ ಇತರರು
ಭಾಗವಹಿಸಿದ್ದರು.