ಶ್ರೀ ಜಯದೇವ ಕಪ್-2024| ಚಿತ್ರದುರ್ಗದಲ್ಲಿ ರಾಜ್ಯಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ: ಕ್ರೀಡಾ ಸಮಿತಿಯ ಅಧ್ಯಕ್ಷ ಶ್ರೀರಾಮ್.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಆ. 25 : ಶರಣಸಂಸ್ಕ್ರತಿ ಉತ್ಸವ-2024ರ ಅಂಗವಾಗಿ ನಡೆಯುವ ಕ್ರೀಡಾಕೂಟಕ್ಕೆ ಶ್ರೀ ಜಯದೇವ ಕಪ್-2024 ಎಂದು ಹೆಸರಿಡಲಾಗಿದ್ದು, ರಾಜ್ಯಮಟ್ಟದ ಹೊನಲು ಬೆಳಕಿನ ಮಹಿಳೆಯರ ಮತ್ತು ಪುರುಷರ ಕಬಡ್ಡಿ ಪಂದ್ಯಾವಳಿಯನ್ನು ಏರ್ಪಡಿಸಲಾಗಿದೆ ಎಂದು ಕ್ರೀಡಾ ಸಮಿತಿಯ ಅಧ್ಯಕ್ಷ ನಗರಸಭಾ ಮಾಜಿ ಸದಸ್ಯರಾದ ಶ್ರೀರಾಮ್ ತಿಳಿಸಿದ್ದಾರೆ.

ಶ್ರೀ ಬಸವಮೂರ್ತಿ ಮಾದಾರಚೆನ್ನಯ್ಯ ಸ್ವಾಮಿಗಳ ಮಾರ್ಗದರ್ಶನದಲ್ಲಿ ಈ ಕ್ರೀಡಾಕೂಟವು ಮೂರುದಿನಗಳ ಕಾಲ ನಡೆಯಲಿದ್ದು,ಕ್ರೀಡಾಕೂಟ ಸಮಿತಿಯ ಗೌರವಾಧ್ಯಕ್ಷರಾಗಿ ಭೀಮಸಮುದ್ರದ ಉದ್ಯಮಿ ಶಂಕರಮೂರ್ತಿ,ಉಪಾಧ್ಯಕ್ಷರುಗಳಾಗಿ ಸಿ.ಟಿ. ಕಷ್ಣಮೂರ್ತಿ ಮತ್ತು ಸಿದ್ದವ್ವನಹಳ್ಳಿ ಪರಮೇಶ್, ಕಾರ್ಯದರ್ಶಿಯಾಗಿ ಅನಿಸ್, ಸಂಘಟನಾ ಕಾರ್ಯದರ್ಶಿಯಾಗಿ ರವಿ ಮಲ್ಲಾಪುರ,ಸಹಕಾರ್ಯದರ್ಶಿಗಳಾಗಿ ಹೆಚ್.ಎಂ. ಮಂಜುನಾಥ್, ಮೆದೇಹಳ್ಳಿ ವಿಜಯಕುಮಾರ್, ಸಂಘಟಕರಾಗಿ ಮಹೇಶ್, ನಾಗರಾಜ್ ನಂದಿಪುರ,ಸಿರಾಜ್, ರಾಮನಾಯ್ಕ್ ಅವರುಗಳನ್ನು ನೇಮಿಸಲಾಗಿದೆ.

ಮಹಿಳಾ ಕ್ರೀಡಾಕೂಟದ ಅಧ್ಯಕ್ಷರಾಗಿ ಶ್ರೀಮತಿ ರುದ್ರಾಣಿ ಗಂಗಾಧರ್, ಉಪಾಧ್ಯಕ್ಷರಾಗಿ ಶ್ರೀಮತಿ ಮೋಕ್ಷರುದ್ರಸ್ವಾಮಿ,ಕಾರ್ಯದರ್ಶಿಯಾಗಿ ಶ್ರೀಮತಿ ಆರತಿ ಶಿವಮೂರ್ತಿ, ಖಜಾಂಚಿಯಾಗಿ ಶ್ರೀಮತಿ ಲತಾ ರಮೇಶ್ ಟಿ.ಕೆ. ಅವರನ್ನು ನೇಮಕ ಮಾಡಲಾಗಿದೆ ಎಂದು ಕ್ರೀಡಾಕೂಟದ ಅಧ್ಯಕ್ಷರಾದ ಶ್ರೀರಾಮ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *