Shreyas Iyer With Dhanashree Verma: ಧನಶ್ರೀ ವರ್ಮಾ ಜೊತೆ ಪಾರ್ಟಿಯಲ್ಲಿ ಕಾಣಿಸಿಕೊಂಡ ಶ್ರೇಯಸ್ ಅಯ್ಯರ್: ಚಹಾಲ್ ಎಲ್ಲಿ ಪ್ರಶ್ನಿಸಿದ ಎಂದು ನೆಟ್ಟಿಗರು..!

ಟೀಮ್ ಇಂಡಿಯಾ ಆಟಗಾರ ಶ್ರೇಯಸ್ ಅಯ್ಯರ್ ಬೆನ್ನು ನೋವಿನ  ಕಾರಣ ಐಪಿಎಲ್ ಸೀಸನ್ 16 ರಿಂದ ಹಿಂದೆ ಸರಿದಿದ್ದಾರೆ. ಅಷ್ಟೇ ಅಲ್ಲದೆ ಶಸ್ತ್ರ ಚಿಕಿತ್ಸೆಗೆ ಒಳಗಾಗುವ ಕಾರಣ ಅವರು ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ನಲ್ಲೂ ಕಾಣಿಸಿಕೊಳ್ಳುವುದಿಲ್ಲ. ಇದಾಗ್ಯೂ ಅಯ್ಯರ್ ಇನ್ನೂ ಕೂಡ ಚಿಕಿತ್ಸೆಗೆ ಒಳಗಾಗಿಲ್ಲ ಎಂಬುದಕ್ಕೆ ಫೋಟೋವೊಂದು ಸಾಕ್ಷಿಯಾಗಿದೆ.ಈ ಫೋಟೋವನ್ನು ಹಂಚಿಕೊಂಡಿದ್ದು ಮತ್ಯಾರೂ ಅಲ್ಲ. ಟೀಮ್ ಇಂಡಿಯಾ ಕ್ರಿಕೆಟಿಗ ಯುಜ್ವೇಂದ್ರ ಚಹಾಲ್ ಅವರ ಪತ್ನಿ ಧನಶ್ರೀ ವರ್ಮಾ. ಶ್ರೇಯಸ್ ಅಯ್ಯರ್ ಹಾಗೂ ಧನಶ್ರೀ ವರ್ಮಾ ರಂಜಾನ್ ಇಫ್ತಾರ್ ಪಾರ್ಟಿಯಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ತೆಗೆದ ಫೋಟೋವೊಂದನ್ನು ಧನಶ್ರೀ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.ಆದರೆ ಈ ಗ್ರೂಪ್​ ಫೋಟೋದ ಹಿನ್ನಲೆಯಲ್ಲಿ ಶ್ರೇಯಸ್ ಅಯ್ಯರ್ ಇರುವುದನ್ನು ಅಭಿಮಾನಿಗಳು ಗುರುತಿಸಿದ್ದಾರೆ. ಇದೀಗ ಧನಶ್ರೀ ವರ್ಮಾ ಅವರ ಸೆಲ್ಫಿ ಕ್ಲಿಕ್ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ಈ ಫೋಟೋ ವೈರಲ್ ಆದ ಬೆನ್ನಲ್ಲೇ ಶ್ರೇಯಸ್ ಅಯ್ಯರ್ ಹಾಗೂ ಧನಶ್ರೀ ವರ್ಮಾ ಜೊತೆಯಾಗಿರುವ ಮತ್ತೊಂದಷ್ಟು ಫೋಟೋಗಳು ಕೂಡ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದೆ. ಇತ್ತ ಪತ್ನಿಯ ಜೊತೆಗಿರುವ ಅಯ್ಯರ್ ಫೋಟೋವನ್ನು ಚಹಾಲ್​ ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ಟ್ಯಾಗ್ ಮಾಡುವ ಮೂಲಕ ಅಭಿಮಾನಿಗಳು ಕಾಲೆಳೆಯುತ್ತಿದ್ದಾರೆ.ಅಂದಹಾಗೆ ಶ್ರೇಯಸ್ ಅಯ್ಯರ್ ಹಾಗೂ ಧನಶ್ರೀ ವರ್ಮಾ ಜೊತೆಯಾಗಿ ಕಾಣಿಸಿಕೊಳ್ಳುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆ ಶಾರ್ದೂಲ್ ಠಾಕೂರ್ ಅವರ ವಿವಾಹ ಕಾರ್ಯಕ್ರಮದಲ್ಲೂ ಅಯ್ಯರ್ ಚಹಾಲ್ ಪತ್ನಿ ಜೊತೆ ಪೋಸ್ ನೀಡಿದ್ದರು. ಈ ಫೋಟೋವನ್ನು ಧನಶ್ರೀ ವರ್ಮಾ ಸೋಷಿಯಲ್ ಮೀಡಿಯಾದಲ್ಲೂ ಹಂಚಿಕೊಂಡಿದ್ದರು. ಹಾಗೆಯೇ ಸೂರ್ಯಕುಮಾರ್ ಯಾದವ್ ದಂಪತಿ ಜೊತೆ ನೈಟ್ ಔಟ್​ನಲ್ಲೂ ಶ್ರೇಯಸ್ ಅಯ್ಯರ್  ಹಾಗೂ ಧನಶ್ರೀ ವರ್ಮಾ ಜೊತೆಯಾಗಿದ್ದರು. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಯುಜ್ವೇಂದ್ರ ಚಹಾಲ್ ಎಲ್ಲಿ ಎಂಬ ಪ್ರಶ್ನೆಗಳ ಸುರಿಮಳೆಗೈದಿದ್ದರು.ಏಕೆಂದರೆ ಇದಕ್ಕೂ ಮುನ್ನ ಯುಜ್ವೇಂದ್ರ ಚಹಾಲ್ ಹಾಗೂ ಧನಶ್ರೀ ವರ್ಮಾ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ ಇತ್ತೀಚೆಗೆ ನಡೆದ ಸನ್​ರೈಸರ್ಸ್ ಹೈದರಾಬಾದ್-ರಾಜಸ್ಥಾನ್ ರಾಯಲ್ಸ್ ನಡುವಣ ಪಂದ್ಯದ ವೇಳೆ ಧನಶ್ರೀ ವರ್ಮಾ ಸ್ಟೇಡಿಯಂನಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೆ ಯುಜ್ವೇಂದ್ರ ಚಹಾಲ್ ವಿಕೆಟ್ ಪಡೆಯುತ್ತಿದ್ದಂತೆ ಸಂಭ್ರಮಿಸುತ್ತಿರುವ ಫೋಟೋಗಳು ಕೂಡ ವೈರಲ್ ಆಗಿತ್ತು. ಇದರೊಂದಿಗೆ ಚಹಾಲ್-ಧನಶ್ರೀ ನಡುವಣ ಎಲ್ಲಾ ವದಂತಿಗಳಿಗೆ ತೆರೆ ಬಿದ್ದಿತ್ತು.ಇದೀಗ ಶ್ರೇಯಸ್ ಅಯ್ಯರ್ ಜೊತೆ ಇಫ್ತಾರ್ ಪಾರ್ಟಿಯಲ್ಲಿ ಕಾಣಿಸಿಕೊಳ್ಳುವ ಮೂಲಕ ಧನಶ್ರೀ ವರ್ಮಾ ಮತ್ತೊಮ್ಮೆ ಟ್ರೋಲಿಗರಿಗೆ ಆಹಾರವಾಗಿದ್ದಾರೆ. ಅಲ್ಲದೆ ಇಬ್ಬರ ನಡುವಣ ಗೆಳೆತನದ ಬಗ್ಗೆ ನಾನಾ ರೀತಿಯಲ್ಲಿ ಯುಜ್ವೇಂದ್ರ ಚಹಾಲ್ ಅವರನ್ನು ಟ್ರೋಲ್ ಮಾಡಲಾಗುತ್ತಿರುವುದೇ ಇಲ್ಲಿ ಅಚ್ಚರಿ.

source https://tv9kannada.com/photo-gallery/cricket-photos/shreyas-iyer-attends-iftaar-party-with-dhanashree-verma-kannada-news-zp-au50-552350.html

Leave a Reply

Your email address will not be published. Required fields are marked *