ಸುಪ್ರೀಂ ಕೋರ್ಟ್ ಆದೇಶವನ್ನು ಶೀಘ್ರ ಜಾರಿ ಮಾಡಬೇಕೆಂದು ಸರ್ಕಾರಕ್ಕೆ ಶ್ರೀ ಬಸವ ಹರಳಯ್ಯ ಸ್ವಾಮೀಜಿ ಆಗ್ರಹ .

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಆ. 02: ಸುಪ್ರೀಂ ಕೋರ್ಟ್ ಆದೇಶ ಮಾಡಿರುವುದರಿಂದ ಮುಖ್ಯಮಂತ್ರಿಗಳು ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡು ಈ ಆದೇಶವನ್ನು ಶೀಘ್ರವಾಗಿ ಜಾರಿ ಮಾಡಬೇಕೆಂದು ಸರ್ಕಾರವನ್ನು ಐಮಂಗಲದ ಶ್ರೀ ಮಹಾ ಶಿವಶರಣ ಹರಳಯ್ಯ ಗುರುಪೀಠದ ಶ್ರೀ ಬಸವ ಹರಳಯ್ಯ ಸ್ವಾಮೀಜಿ ಆಗ್ರಸಿದ್ದಾರೆ.

ಚಿತ್ರದುರ್ಗ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಒಳ ಮೀಸಲಾತಿ ಹೋರಾಟಕ್ಕೆ ಪಂಜಾಬ್ ರಾಜ್ಯದಿಂದ ಪ್ರಾರಂಭವಾಗಿ ಎಲ್ಲಾ ರಾಜ್ಯಗಳಲ್ಲೂ ಸಹ ಹೋರಾಟ ನಡೆದಿದೆ.. ಅದರಲ್ಲೂ ಆಂಧ್ರಪ್ರದೇಶ ಗಟ್ಟಿತನದ ಹೋರಾಟ ನಡೆಸಿದೆ. ನಮ್ಮ ರಾಜ್ಯದಲ್ಲೂ ಸಹ 30 ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದ್ದೇವೆ. ಅಂತಹ ಹೋರಾಟದಲ್ಲಿ ದಲಿತ, ಮಾದಿಗ ಸಂಘಟನೆ ಹಾಗೂ ಎಲ್ಲಾ ವರ್ಗದ ಪ್ರಜ್ಞಾವಂತ ಹೋರಾಟಗಾರರು ಹೋರಾಟ ನಡೆಸಿದ್ದಾರೆ.ಅರೆಬೆತ್ತಲೆ, ಪಂಜಿನ ಮೆರವಣಿಗೆ, ಜಿಲ್ಲಾಧಿಕಾರಿಗಳ ಕಚೇರಿ ಮುತ್ತಿಗೆ, ಮುಖ್ಯಮಂತ್ರಿಗಳಿಗೆ ಘೇರಾವ್, ಶಾಸಕರುಗಳ ಮನೆ ಮುಂದೆ ಧರಣಿ, ಮೈಮೇಲೆ ಮಲ ಸುರಿದುಕೊಳ್ಳುವುದರ ಮುಖಾಂತರ ಹೋರಾಟ ನಡೆಸಿದರು.ಸಹ ರಾಜಕೀಯ ಪಕ್ಷಗಳು ರಾಜಕೀಯ ದೊಂಬರಾಟ ಮಾಡುತ್ತಾ ಬಂದಿದ್ದರು ಎಂದರು.  

30 ವರ್ಷಗಳ ಕಾಲ ಒಳ ಮೀಸಲಾತಿ ಹೋರಾಟಕ್ಕೆ ಸುಪ್ರೀಂ ಕೋರ್ಟ್ ಸುಧೀರ್ಘವಾಗಿ ಚಿಂತನೆ ನಡೆಸಿ ಕಾನೂನು ಚೌಕಟ್ಟಿನೊಳಗೆ ಏನು ನ್ಯಾಯ ಒದಗಿಸಬೇಕಾಗಿದೆ ಎಂಬುದರ ಮೇಲೆ ಉತ್ತಮ ತೀರ್ಪನ್ನು ಪ್ರಕಟಿಸಿದೆ.. ಸುಪ್ರೀಂ ಕೋರ್ಟ್ ಸುಧೀರ್ಘ ಚಿಂತನೆ ನಡೆಸಿ ಈ ತೀರ್ಪುನ್ನು ನೀಡಿದೆ.. ಇಂತಹ ಐತಿಹಾಸಿಕ ತೀರ್ಪನ್ನು ನೀಡಿರುವುದು ಸ್ವಾಗತಾರ್ಹ… ಈ ತೀರ್ಪು ದಲಿತರ ನೋವಿಗೆ ನಾಂದಿ ಹಾಡಿದೆ.ಆದರೆ ಅಂಬೇಡ್ಕರ್ ರವರು ಕೊಟ್ಟ ಸಂವಿಧಾನ ಯಾರಿಗೂ ಅನ್ಯಾಯ ಮಾಡಿಲ್ಲ ಎಂಬುದನ್ನು ಮತ್ತೆ ಸಾಬೀತು ಮಾಡಿದೆ.ನಮ್ಮ ಪೀಠದಿಂದ ಸುಪ್ರೀಂಕೋರ್ಟಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇವೆ.. ಎಲ್ಲರ ಪರಿಶ್ರಮದಿಂದ ಸುಪ್ರೀಂ ಕೋರ್ಟ್ ಒಳ್ಳೆಯ ತೀರ್ಪನ್ನು ನೀಡಿದೆ ಎಂದು ತಿಳಿಸಿದರು.

ಹನುಮಂತಪ್ಪ ದರ್ಗಾ ಮಾತನಾಡಿ,  ಸುಪ್ರೀಂ ನ್ಯಾಯಾಲಯದ 7 ಜನರ ಸದಸ್ಯ ಪೀಠ ಉತ್ತಮವಾದ ತೀರ್ಪನ್ನು ನೀಡಿದೆ. ನಮ್ಮ ಸಮಾಜದಲ್ಲಿ ಬಡವರಿದ್ದಾರೆ ಅವರಿಗೆ ಇದರ ಉಪಯೋಗವಾಗಬೇಕಿದೆ. ಇದನ್ನು ಸರ್ಕಾರ ವಿಳಂಬ ಮಾಡದೆ ಜಾರಿ ಮಾಡಬೇಕಿದೆ ಎಂದು ಆಗ್ರಹಿಸಿದರು. ಗೋಷ್ಟಿಯಲ್ಲಿ  ನ್ಯಾಯಾವಾದಿ ಸುರೇಶ್, ದೇವರಾಜ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *